ಸರ್ಕಾರಿ ಶಾಲೆಯಲ್ಲಿ ಹೆಚ್ಚುತ್ತಿರುವ ದಾಖಲಾತಿ: ಇಂದಿನ ದಿನಮಾನದ ಭರವಸೆ- ಸಚಿವ ಸುರೇಶ್ ಕುಮಾರ್

Thursday, July 8th, 2021
Suresh Kuamar

ಬೆಂಗಳೂರು: ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕ ವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಅತ್ಯಂತ ಗುಣಮಟ್ಟದ ಶಿಕ್ಷಣ  ನೀಡುವ ನೆಲಗದೇರನಹಳ್ಳಿ […]

ಸರ್ಕಾರಿ ಶಾಲೆಯ ಶಿಕ್ಷಕ ಕ್ಲಾಸ್​ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Wednesday, February 26th, 2020
lal-bhagh

ಉತ್ತರಪ್ರದೇಶ : ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ ಶಾಲೆಯ ಕ್ಲಾಸ್ ರೂಮಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಲಾಲ್ಬಾಗ್ನಲ್ಲಿ ನಡೆದಿದೆ. ರವೀಂದ್ರ ಕುಮಾರ್ ಶುಕ್ಲಾ(49) ಹೆಸರಿನ ಶಿಕ್ಷಕ ಕೆಲವು ವರ್ಷಗಳಿಂದ ಲಾಲ್ಬಾಗ್ನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರದಂದು ಸರಿಯಾದ ಸಮಯಕ್ಕೆ ಶಾಲೆಗೆ ಬಂದಿದ್ದ ಅವರು ಪ್ರತಿದಿನದಂತೆ ತರಗತಿಗಳನ್ನು ನಡೆಸಿ, ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ಮನೆಗೆ ತೆರಳಿದ ನಂತರ ತರಗತಿಗಳ ಬಾಗಿಲನ್ನು ಹಾಕಿ ಬಂದಿದ್ದಾರೆ. ಆದರೆ ಮತ್ತೆ ತರಗತಿಯೊಳಗೆ […]

ಜನಪ್ರತಿನಿಧಿಗಳು ಸರ್ಕಾರಿ ಶಾಲೆ ಉನ್ನತೀಕರಣಕ್ಕೆ ಪ್ರಯತ್ನಿಸಬೇಕು : ಬಸವರಾಜ ಹೊರಟ್ಟಿ 

Saturday, July 28th, 2018
Aequs

ಹುಬ್ಬಳ್ಳಿ : ಜನಪ್ರತಿನಿಧಿಗಳು ತಾವು ಓದಿದ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಪ್ರಯತ್ನಿಸಬೇಕು. ಶಾಲೆಗಳನ್ನು ದತ್ತು ತೆಗೆದುಕೊಂಡು ಉನ್ನತೀಕರಿಸಿದಾಗ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳವಾಗುತ್ತದೆ ಆಗ ಸರ್ಕಾರ  ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಮೆಯವೇ ಬರುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅವರು ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಶಾಲೆ ಕೆಬಿಎಸ್ ನಂ.16 ರಲ್ಲಿ ಏಕಸ್ ಪ್ರತಿಷ್ಠಾನವು ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಅಗಸ್ತ್ಯ ಇಂಟರ್ನ್ಯಾಷನಲ್  ಫೌಂಡೇಷನ್ ಪಾಲುದಾರಿಕೆಯಲ್ಲಿ ಸರಕಾರಿ ಮಕ್ಕಳಿಗೆ ಸ್ಟೆಮ್ […]

ಸ್ಮಾರ್ಟ್ ಆದ ಬೊಕ್ಕಪಟ್ಣ ಸರ್ಕಾರಿ ಶಾಲೆ

Wednesday, December 20th, 2017
govt-school

ಮಂಗಳೂರು: ನಗರದ ಬೊಕ್ಕಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಸ್ಮಾರ್ಟ್‌ ಆಗಿ ರೂಪುಗೊಂಡಿದೆ. ಮಂಗಳೂರು ಕೋಸ್ಟಲ್‌ ರೌಂಡ್‌ ಟೇಬಲ್‌ನಿಂದ ಶಾಲೆಗೆ ದೃಶ್ಯ–ಶ್ರವಣ ಕೊಠಡಿ ಹಾಗೂ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿರುವ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್–190, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಆಧುನಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ರೌಂಡ್‌ ಟೇಬಲ್‌ ಅಧ್ಯಕ್ಷ ಸುದೇಶ್‌ ಕರುಣಾಕರ್‌ ತಿಳಿಸಿದರು. […]

ಕುಮಾರಧಾರಾ ನದಿಗೆ ಬಿದ್ದ ಟ್ಯಾಂಕರ್

Wednesday, August 10th, 2016
Gas-Tanker

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಸಾಗಣೆ ಮಾಡುತ್ತಿದ್ದ ಎಚ್‌ಪಿಸಿಎಲ್‌ ಕಂಪನಿಗೆ ಸೇರಿದ ಟ್ಯಾಂಕರ್ ಕುಮಾರಧಾರಾ ನದಿಗೆ ಬಿದ್ದಿದೆ. ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಪ್ಪಿನಂಗಡಿ ಬಳಿಯ ಉದನೆ ನರ್ಸರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ನದಿಗೆ ಉರುಳಿ ಬಿದ್ದಿದೆ. ಲಾರಿ ಸೇತುವೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟ್ಯಾಂಕರ್ ನದಿಗೆ ಉರುಳಿದೆ. ಕುಮಾರಧಾರಾ ನದಿಗೆ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಲವು ಹೊತ್ತು […]

ಶಾಲೆಗಳಲ್ಲಿ ಮಕ್ಕಳಿಗೆ ಡಬ್ಲ್ಯು.ಐ.ಎಫ್.ಎಸ್ ಮಾತ್ರೆಗಳನ್ನು ನೀಡುವ ಕಾರ್‍ಯಕ್ರಮಕ್ಕೆ ಚಾಲನೆ

Wednesday, July 17th, 2013
Folic and Iron tablet

ಮಂಗಳೂರು : ನಗರದ ಅತ್ತಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಕಬ್ಬಿಣಾಂಶಯುಕ್ತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) ವಿತರಣಾ ಕಾರ್‍ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಉದ್ಘಾಟಿಸಿದರು. ಕಬ್ಬಿಣಾಂಶಯುತ ಮಾತ್ರೆಗಳನ್ನು ಸೇವಿಸುವುದರಿಂದ ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ, ಕಲಿಕಾ ಏಕಾಗ್ರತೆ ಕುಂಠಿತ, ದೈಹಿಕ ತೊಂದರೆಗಳು ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಅಭಿಪ್ರಾಯ ಪಟ್ಟರು. ಕಬ್ಬಿಣಾಂಶಯುತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) […]

ವೆನ್ಲಾಕ್ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣವಿರಲಿ: ಯು.ಟಿ.ಖಾದರ್

Saturday, June 15th, 2013
UT Khader Visits Lady Ghosen Hospital

ಮಂಗಳೂರು  : ಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ  ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ […]