ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ ಉದಾಸಿ ನಿಧನ

Tuesday, June 8th, 2021
CM Udasi

ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ (81 )ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಚಿಕಿತ್ಸೆ ಪಡೆಯುತ್ತಿದ್ದರು. ಸಿ.ಎಂ ಉದಾಸಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳ ಕೊನೆಯ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರು ಬಾರಿ ಶಾಸಕರಾಗಿ ಗೆದ್ದಿದ್ದ ಉದಾಸಿ 2013 ಮತ್ತು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ನಾಳೆ ಹಾವೇರಿಯ ಹಾನಗಲ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು […]

ಮಾಜಿ ಸಚಿವ ಸಿ.ಎಂ ಉದಾಸಿ ಸ್ಥಿತಿ ಚಿಂತಾಜನಕ

Friday, May 28th, 2021
CM Udasi

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಸಿ.ಎಂ ಉದಾಸಿ ಸ್ಥಿತಿ ಗಂಭೀರವಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ನಾಲ್ಕು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದ ಸಿ.ಎಂ ಉದಾಸಿ ಅವರನ್ನು ಹೊಸೂರು ರಸ್ತೆಯಲ್ಲಿನ ನಾರಾಯಣ ಹೆಲ್ತ್‌ ಸಿಟಿಯಲ್ಲಿರುವ ಕಿರಣ್ ಮಜುಂದಾರ್ ಷಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಯೋಸಹಜ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿರುವ ಸಿ.ಎಂ ಉದಾಸಿ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಅವರು […]

ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

Saturday, February 5th, 2011
ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

ಮಂಗಳೂರು : ದೇಶದಲ್ಲಿ ಸರ್ವೋಚ್ಚ್ಚ ನ್ಯಾಯಾಲಯದಲ್ಲಿ ಪ್ರತಿ ವರ್ಷ 50,000 ಕಟ್ಲೆಗಳು ವಿಲೇವಾರಿಯಾಗುತ್ತಿದೆ.ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ 16 ಲಕ್ಷ ಮೊಕದ್ದಮೆಗಳು ತೀರ್ಮಾನವಾಗುತ್ತವೆ. ಕೆಳಮಟ್ಟದ  ಕೋರ್ಟ್ ಗಳಲ್ಲಿ  1.6 ಕೋಟಿ ದಾವೆಗಳು ಇತ್ಯರ್ಥವಾಗುತ್ತಿದ್ದರೂ, ನಮ್ಮ ನ್ಯಾಯಾಲಯಗಳಲ್ಲಿ ಇನ್ನು 3 ಕೋಟಿ ಮೊಕದ್ದಮೆಗಳು ಬಾಕಿ ಉಳಿದಿವೆ.ಆದ್ದರಿಂದ ನ್ಯಾಯಾಂಗದಲ್ಲಿರುವ ಎಲ್ಲರೂ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ನ್ಯಾಯದಾನ ವಿತರಿಸಲು ಮುಂದಾಗಬೇಕೆಂದರು. ಕರ್ನಾಟಕ  ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಶ್ರೀ ಎಚ್.ಎನ್.ನಾಗಮೋಹನದಾಸ್ ಅವರು ನ್ಯಾಯಾಂಗ ಇಲಾಖೆ ಹಾಗೂ […]