5 ಸಾವಿರ ಕೋಟಿ ರೂ.ಗಳ ನೇರ ಬಂಡವಾಳ ಆಕರ್ಷಣೆಗೆ ಒತ್ತು : ಸಿ.ಟಿ.ರವಿ

Sunday, September 27th, 2020
ct-ravi

ಬೆಂಗಳೂರು: ನೂತನ 2020-25 ರ ಪ್ರವಾಸೋದ್ಯಮ ನೀತಿಯು ಇಂದಿನಿಂದ ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಈ ನೀತಿ ಅವಧಿಯಲ್ಲಿ ರೂ. 500 ಕೋಟಿ ಗಳ ಸಹಾಯಧನ, ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ನೀಡುವ ಮೂಲಕ ರೂ. 5 ಸಾವಿರ ಕೋಟಿಗಳ ನೇರ ಬಂಡವಾಳ ಆಕರ್ಷಣೆಗೆ ಒತ್ತು ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಮತ್ತು ಕ್ರೀಡೆಗಳ ಸಚಿವ ಸಿ.ಟಿ. ರವಿ ಅವರು ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಮಾರು 30 ಲಕ್ಷ ಜನ ಉದ್ಯೋಗ ಮಾಡುತ್ತಿದ್ದು, […]

ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ : ಸಿ.ಟಿ ರವಿ

Monday, February 17th, 2020
ravi

ಬೆಂಗಳೂರು : ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು ದೇಶದ್ರೋಹಿ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು. ಹುಬ್ಬಳ್ಳಿಯ ಕೆ.ಎಲ್‌.ಇ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಕಾಶ್ಮೀರಿ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದ್ದರು. ಪೊಲೀಸರ ಈ ನಡೆಗೆ ವ್ಯಾಪಕ ವಿರೋಧ […]

ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ : ಸಚಿವ ಸಿ.ಟಿ ರವಿ

Wednesday, December 11th, 2019
CT-Ravi

ಚಿಕ್ಕಮಗಳೂರು : ಈ ಬಾರಿ ದತ್ತಪೀಠ ವಿವಾದ ಇತ್ಯರ್ಥ ಮಾಡುವ ಸಂಕಲ್ಪ ಮಾಡಿದ್ದೇನೆ. ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು. ಇಲ್ಲಿ ದತ್ತ ಮಾಲಾಧಾರಿಯಾಗಿ ಮಾತನಾಡಿದ ಸಚಿವರು, ವಿವಾದ ಇತ್ಯರ್ಥ ಮಾಡುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ತತ್ವ ಬದ್ಧ ಹೋರಾಟವಾಗಿದೆ. ದತ್ತಪೀಠ ವಿವಾದ ಇತ್ಯರ್ಥಕ್ಕೆ ಜೆಡಿಎಸ್-ಕಾಂಗ್ರೆಸ್ ಸಹಮತವಿರಲಿ. ಹಿಂದೂ ಅರ್ಚಕರ ನೇಮಕಕ್ಕೆ ಜೆಡಿಎಸ್ ಸಹಮತ ವ್ಯಕ್ತಪಡಿಸಿದೆ ಎಂದು ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು. ದತ್ತಪೀಠದಲ್ಲಿ ಹಿಂದೂ […]

ಟಿಪ್ಪು ವಿವಾದವನ್ನು ಉಪಚುನಾವಣೆಗೆ ಬಳಸಿಕೊಳ್ಳುವ ಅಗತ್ಯವಿಲ್ಲ : ಸಚಿವ ಸಿ.ಟಿ ರವಿ

Thursday, October 31st, 2019
CT-Ravi

ಬೆಂಗಳೂರು : ಟಿಪ್ಪು ಸುಲ್ತಾನ್ ಇತಿಹಾಸವನ್ನು ಅಧ್ಯಯನ ಮಾಡಿದರೆ ಯಾರು ಮತಾಂಧರು ಅನ್ನೋದು ತಿಳಿಯುತ್ತದೆ. ಬಿಜೆಪಿಗೆ ಟಿಪ್ಪು ವಿವಾದವನ್ನು ಉಪಚುನಾವಣೆಗೆ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಒಡೆದು ಆಳುವ ನೀತಿ ಪಾಲಿಸುತ್ತಿದೆ. 72 ವರ್ಷದಿಂದ ಆಚರಣೆ ಮಾಡಲಾಗದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿಯೇ ಜಾರಿಗೆ ತಂದಿದೆ. ಇಷ್ಟು ವರ್ಷಗಳ ಕಾಲ ನಾಡಧ್ವಜದ ಬಗ್ಗೆಯೂ ಇಲ್ಲದ ಕಾಳಜಿ ಚುನಾವಣೆಗೆ ಒಂದು ವರ್ಷವಿದ್ದಾಗ […]

ಮಂಗಳೂರು : ಪ್ರತಿ ಗ್ರಾಮದ ವಿಶೇಷತೆಯ ಮಾಹಿತಿ ಕ್ರೋಢೀಕರಣಕ್ಕೆ ಕ್ರಮ; ಸಚಿವ ಸಿ.ಟಿ.ರವಿ

Monday, September 30th, 2019
CT Ravi

ಮಂಗಳೂರು : ರಾಜ್ಯದ ಪ್ರತಿ ಗ್ರಾಮದ ಇತಿಹಾಸ, ಭೌಗೋಳಿಕ, ಸಾಂಸ್ಕೃತಿಕ, ಜಾನಪದ ಹೀಗೆ ವಿವಿಧ ಅಂಶಗಳನ್ನೊಳಗೊಂಡಂತೆ ಗ್ರಾಮದ ವಿಶೇಷತೆಯ ಮಾಹಿತಿಯನ್ನು ಕ್ರೋಢೀಕರಿಸಿ ಅವುಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 2020ರ ಡಿಸೆಂಬರ್ ನೊಳಗೆ ಸರ್ಕಾರ ಈ ಪರಿಕಲ್ಪನೆಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಇದ್ಕಕಾಗಿ ಪ್ರತಿ ಗ್ರಾಮದ ಮಾಹಿತಿಯನ್ನು […]

ಚಿಕ್ಕಮಗಳೂರು : ನೆರೆಪೀಡಿತ ಪ್ರದೇಶಗಳಿಗೆ ನೂತನ ಶಾಸಕರ ಭೇಟಿ

Wednesday, August 21st, 2019
Chikka-magaluru

ಚಿಕ್ಕಮಗಳೂರು : ಶಾಸಕರಾದ ಸಿ.ಟಿ.ರವಿ ಮತ್ತು ಮಾಧು ಸ್ವಾಮಿ ಇಂದು ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಟಿ.ರವಿ ಮತ್ತು ಮಾಧು ಸ್ವಾಮಿ ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹಳ್ಳಿಗಾಡು ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟ ಆಲಿಸಿದ್ದಾರೆ. ಜನರ ಕಷ್ಟಗಳನ್ನು ಆಲಿಸಿದ ಸಚಿವ ಸಿ.ಟಿ.ರವಿ […]

ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ: ಬಿಜೆಪಿ ವಕ್ತಾರ ಸಿ.ಟಿ. ರವಿ

Wednesday, November 14th, 2018
c-t-ravi

ಮಂಗಳೂರು: ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಬಂಧಿಸಿದ ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಸಿ.ಟಿ. ರವಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ, ಭಗವದ್ಗೀತೆ, ವಿವೇಕಾನಂದ, ‌ಮೋದಿ ಅವಹೇಳನ ಮಾಡುವವರಿಗೆ ಒಂದು ನೀತಿ, ಟಿಪ್ಪು ವಿರೋಧಿಸುವವರಿಗೆ ಒಂದು ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದರು. ರಾಮ, ರಾಮಾಯಣ ಅವಹೇಳನ ಮಾಡಿದ ಪ್ರೊ ಭಗವಾನ್, ಮಹೇಶ್ ಚಂದ್ರ, ಯೋಗೀಶ್ ಮಾಸ್ಟರ್ ಅವರನ್ನು ಸರ್ಕಾರ ಬಂಧಿಸುವುದಿಲ್ಲ. ನಗರ ನಕ್ಸಲ್ ಎಂದು ಬೋರ್ಡ್ […]

ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ: ಸಿ.ಟಿ. ರವಿ

Tuesday, September 11th, 2018
c.t-ravi

ಬೆಂಗಳೂರು: ಮಾತುಕತೆ ಭಾರತ ಮತ್ತು ಪಾಕಿಸ್ತಾನ ಮಧ್ಯೆಯೂ ನಡೆಯುತ್ತದೆ. ಅಂತಹದ್ದರಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ?‌ ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಶ್ರೀರಾಮುಲು ಅವರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಯಿಸಿದರು. ಸರ್ಕಾರವನ್ನು ನಾವು ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುವ ಮೂರ್ಖರು ನಾವಲ್ಲ. ಸರ್ಕಾರವೇ ತನ್ನ ಆಂತರಿಕ ಕಿತ್ತಾಟದಿಂದ ಪತನವಾಗುತ್ತದೆ ಎಂದರು. ಬಿಜೆಪಿ ಅಧಿಕಾರಕ್ಕೆ […]

ಹಿಂದು ವಿರೋಧಿ ಪಠ್ಯಪುಸ್ತಕವನ್ನು ಕೂಡಲೇ ಹಿಂಪಡೆಯಿರಿ: ಸಿ.ಟಿ. ರವಿ

Tuesday, June 5th, 2018
c-t-ravi-2

ಮಂಗಳೂರು: ಹೊಸತಾಗಿ ರಚನೆಯಾದ ಶಾಲಾ ಪಠ್ಯ ಪುಸ್ತಕದಲ್ಲಿ ಏಸು ಕ್ರಿಸ್ತ ಮತ್ತು ಮಹಮ್ಮದ್ ಪೈಗಂಬರ್ ಬಗ್ಗೆ ಪಾಟ ಸೇರ್ಪಡೆ ಯಾಗಿರುವುದು ಕರಾವಳಿಯಲ್ಲಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಮೊದಲ ಪಾಠವೇ ಕ್ರಿಶ್ಚಿಯನ್ ಮತದ ಉಗಮ, ಕೊಡುಗೆಗಳ ಬಗೆಗಿದೆ. ಅಲ್ಲದೆ, ಮತ್ತೊಂದು ಪಾಠದಲ್ಲಿ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನೂ ಹೇಳಲಾಗಿದ್ದು, ಚರ್ಚ್ ಮತ್ತು ಕ್ರಿಸ್ತ ಮತದ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಚರ್ಚ್ ಗೆ ತೆರಳುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಪುಸ್ತಕದ ಇನ್ನೊಂದು ಪಠ್ಯದಲ್ಲಿ […]

ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮೋದಿ ಭಯ, ಮೋದಿ ಜ್ವರ ಶುರುವಾಗಿದೆ: ಸಿ ಟಿ ರವಿ

Tuesday, June 5th, 2018
c-t-ravi

ಮಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಹಳಸಿದವರ ಮತ್ತು ಹಸಿದವರ ಸರ್ಕಾರ ಎಂದು ಬಿಜೆಪಿ ವಕ್ತಾರ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಜನಾದೇಶ ಕಳೆದುಕೊಂಡ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮೋದಿ ಭಯ, ಮೋದಿ ಜ್ವರ ಶುರುವಾಗಿದೆ. ಅದಕ್ಕಾಗಿ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಒಟ್ಟಾಗುತ್ತಿದೆ. ಶಿಕ್ಷಕ ಮತ್ತು ಪದವೀದರ ಕ್ಷೇತ್ರದ ‌ವಿಧಾನಪರಿಷತ್ ಚುನಾವಣೆ ಯಲ್ಲಿ ಕಾಂಗ್ರೆಸ್, ಜೆಡಿಎಸ್ ಗುಂಡು ತುಂಡುಗಳ ಪಾರ್ಟಿ, ಹಣದ ಆಮೀಷ […]