ಜಿಲ್ಲಾಡಳಿತದ ನಿರ್ಲಕ್ಷ್ಯ ಮರವೂರು ಸೇತುವೆ ಹಾನಿಗೊಳಗಾಗಲು ಕಾರಣ : ಅಭಯಚಂದ್ರ ಜೈನ್

Tuesday, June 15th, 2021
Abhayachandra Jain

ಮಂಗಳೂರು : ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಹೂಳೆತ್ತುವ ನೆಪದಲ್ಲಿಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿರುವುದೇ  ಮರವೂರು ಸೇತುವೆಯ  ಪಿಲ್ಲರ್ ಗಳು ಕುಸಿಯಲು ಕಾರಣ  ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸಮೀಪದಲ್ಲೇ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು ಜೈನ್ ಆರೋಪಿಸಿದರು. ಮರಳು ಮಾಫಿಯಾದಿಂದ  ಮರವೂರು ಸೇತುವೆಯ […]

ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಕುಸಿತ, ವಾಹನ ಸಂಚಾರ ಬಂದ್

Tuesday, June 15th, 2021
palguni-bridge

ಮಂಗಳೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿಗೆ  ಸಂಪರ್ಕ ಕಲ್ಪಿಸುವ ಪಲ್ಗುಣಿ ನದಿ ಸೇತುವೆ ಕುಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆ ಮಧ್ಯರಾತ್ರಿ 3 ಗಂಟೆಗೆ ಕುಸಿದಿದೆ. ಸೇತುವೆ ಸದ್ಯ ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಉಡುಪಿಯಿಂದ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ ಮೂಲಕ ಬರಬಹುದು. ಕಾಸರಗೋಡು, […]

ಕೊರೋನಾ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ನದಿಗೆ ಎಸೆಯುವ ವಿಡಿಯೋ ವೈರಲ್

Sunday, May 30th, 2021
Prem Nath Misra

ಸಿದ್ಧಾರ್ಥ್ ನಗರ : ಸೇತುವೆಯೊಂದರಿಂದ ನದಿಗೆ ಕೊರೋನಾ ವೈರಸ್ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ಎಸೆಯುವ ವಿಡಿಯೋ ಈಗ ಬಾರಿ ವೈರಲ್ ಆಗಿದೆ. ಒಬ್ಬರು ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ  ಉತ್ತರಪ್ರದೇಶದ ಬಲರಾಂಪುರ್ ಜಿಲ್ಲೆಯ ರಾಪ್ತಿ ನದಿಗೆ ಮೇ 30 ಭಾನುವಾರ ಮೃತ ದೇಹ ಎಸೆಯುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ಚಿತ್ರೀಕರಿಸಿದ್ದರು. ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ವಿವರ ಸಂಗ್ರಹಿಸಿ ಕೇಸು ದಾಖಲಿಸಿದ್ದಾರೆ. ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಸೊಹರತ್‌ ನಿವಾಸಿ ಪ್ರೇಮ್ […]

ಭೀಮಾ ನದಿಯಲ್ಲಿ ಕೊಚ್ಚಿಹೋದ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿ

Monday, September 14th, 2020
Bhima River

ವಿಜಯಪುರ:  ವಿಜಯಪುರ ಜಿಲ್ಲೆಯ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಭಂಡಾರಕವಟೆ ಸೇತುವೆ ಬಳಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಸೇತುವೆ ಮೇಲಿಂದ ಬಿದ್ದು ಭೀಮಾ ನದಿಯಲ್ಲಿ ಕೊಚ್ಚಿಹೋದ ಘಟನೆನಡೆದಿದೆ. ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ಜಿಲ್ಲೆಯ ಕಂದಲಗಾಂವ ಗ್ರಾಮದ ಶಂಕರ ಕೋಲೆ(65) ಕೊಚ್ಚಿಹೋದ ವ್ಯಕ್ತಿಯಾಗಿದ್ದು, ಬೈಕ್‍ನಲ್ಲಿ ಭಂಡಾರಕ ವಟೆ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದು ಅವಘಡ ಸಂಭವಿಸಿದೆ. ಶಂಕರ ಕೋಲೆ ಮಹಾರಾಷ್ಟ್ರದಿಂದ ನಂದೂರ ಗ್ರಾಮದಿಂದ ಕಂದಲಗಾಂವ ಗ್ರಾಮಕ್ಕೆ ಹೊರಟಿದ್ದ, ವೇಳೆ ಅವಘಢ […]

ಸೇತುವೆಯಿಂದ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ

Friday, August 14th, 2020
Tunga River

ಶಿವಮೊಗ್ಗ: ಇಲ್ಲಿನ ಬೈಪಾಸ್ ರಸ್ತೆಯ ಸೇತುವೆಯಿಂದ ಪ್ರೇಮಿಗಳಿಬ್ಬರು ತುಂಗಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುರುಳಿ ಹಳ್ಳಿ ಗ್ರಾಮದ ಸಂತೋಷ್ (25) ಹಾಗೂ ಕಾಕನಹಸುಡಿ ಗ್ರಾಮದ ಅನುಷಾ (20) ಅವರೇ ಆತ್ಮಹತ್ಯೆಗೆ ಶರಣಾಗಿರುವವರೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ನಗರದಲ್ಲಿರುವ ವಿಧಾತ್ರಿ ಭವನ ಹೊಟೇಲ್ ನಲ್ಲಿ ಸಂತೋಷ ಕೆಲಸಮಾಡುತ್ತಿದ್ದ. ಅನುಷಾ ಇತ್ತೀಚೆಗಷ್ಟೇ ಪಿ.ಯು. ಶಿಕ್ಷಣವನ್ನು ಮುಗಿಸಿದ್ದಳು. ಇವರಿಬ್ಬರು ಕೆಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನದ ಸಮಯದಲ್ಲಿ ಇವರಿಬ್ಬರು ಇದ್ದಕ್ಕಿದ್ದಂತೆಯೇ ತುಂಗಾ ನದಿಗೆ ಹಾರಿದ್ದಾರೆ, ಕೂಡಲೇ […]

ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ವಾಹನ : ಚಾಲಕನಿಗೆ ಗಾಯ

Tuesday, March 3rd, 2020
pickup

ಉಳ್ಳಾಲ : ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಬಳಿಯ ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ವಾಹನ ಸೇತುವೆಯಿಂದ ಮೇಲೆ ನಿಂತ ಕಾರಣದಿಂದ ಬಹುದೊಡ್ಡ ದುರಂತ ಅದೃಷ್ಟಶವಾತ್ ತಪ್ಪಿದೆ. ಸೇತುವೆ ಕೆಳಗೆ ಹಲವು ಅಡಿಗಳಷ್ಟು ಆಳವಿರುವ ಕಾರಣ ಒಂದು ವೇಳೆ ವಾಹನ ಕೆಳಗೆ […]

ಚಿಕ್ಕಮಗಳೂರು : ಕುಸಿದು ಬಿದ್ದ ಸೇತುವೆ; ಬೈಕ್ ಸವಾರನಿಗೆ ಗಂಭೀರ ಗಾಯ

Monday, October 14th, 2019
mudigere

ಚಿಕ್ಕಮಗಳೂರು : ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಸೇತುವೆ ಕುಸಿದು ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಮಾಳಿಂಗನಾಡು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಸಂಜೆ ಸುರಿದ ಭಾರೀ ಮಳೆಗೆ ಹಿರೇಬೈಲು – ಕೂವೆ ಸಂಪರ್ಕಿಸುವ ಸೇತುವೆ ಮುರಿದು ಬಿದ್ದಿದೆ.    

ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ.ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ: ಸಸಿಕಾಂತ್ ಸೆಂಥಿಲ್

Wednesday, May 30th, 2018
sesikanth-senthil.-2

ಮಂಗಳೂರು: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ. ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳಾದ ರಸ್ತೆ ಮತ್ತು ಸೇತುವೆ ಡ್ಯಾಮೆಜ್ ನಿಂದ 4 ಕೋಟಿ ನಷ್ಟ ಸಂಭವಿಸಿದೆ. ಖಾಸಗಿ ಆಸ್ತಿಗಳಾದ ಮನೆ 3.7 ಕೋಟಿ ‌ನಷ್ಟ, ವಿದ್ಯುತ್ ಸಂಪರ್ಕ 1.9 ಕೋಟಿ ಮತ್ತು ಇತರ ಸೇರಿದಂತೆ 20 ಕೋಟಿ ನಷ್ಟ ಸಂಭವಿಸಿದೆ. ರಾಜಾಕಾಲುವೆ ಯಿಂದ ನೀರು […]

ಮಹಾಡ್‌ನ‌ ಹೆದ್ದಾರಿಯಲ್ಲಿದ್ದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಕೊಚ್ಚಿ ವಾಹನಗಳು, 22 ಮಂದಿ ಕಣ್ಮರೆ

Wednesday, August 3rd, 2016
Mumbai-gova-bridge

ಮುಂಬಯಿ: ಮಹಾಡ್‌ನ‌ ಹೆದ್ದಾರಿಯಲ್ಲಿದ್ದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಶತಮಾನಗಳಷ್ಟು ಹಳೆಯದಾದ ಸೇತುವೆಯೊಂದು ಮಂಗಳವಾರ ತಡರಾತ್ರಿ ಪ್ರವಾಹದಿಂದ ಕುಸಿದ ಪರಿಣಾಮ 12ಕ್ಕೂ ಹೆಚ್ಚು ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿ, 22 ಮಂದಿ ಕಣ್ಮರೆಯಾಗಿರುವ ಕುರಿತು ವರದಿಯಾಗಿದೆ. ಸಾವಿತ್ರಿ ನದಿಗೆ ಅಡ್ಡಲಾಗಿದ್ದ ಬ್ರಿಟೀಷ್‌ ಕಾಲದ ಸೇತುವೆ ಕುಸಿದು ದುರಂತ ಸಂಭವಿಸಿದ್ದು,ಇದೀಗ ಸಮೀಪದಲ್ಲಿರುವ ಇನ್ನೊಂದು ಸೇತುವೆಯ ಮೂಲಕ ವಾಹನಗಳು ಸಂಚರಿಸುತ್ತಿವೆ. 2 ಬಸ್‌ಗಳು ಸೇರಿ ಇತರ ವಾಹನಗಳು ಕೊಚ್ಚಿ ಹೋಗಿರುವ ಕುರಿತು ವರದಿಯಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, […]

ಬ್ರಿಟಿಷರಿಗೆ ಧನ್ಯವಾದದ ಪ್ಲೆಕ್ಸ್ ಪ್ರತ್ಯಕ್ಷ

Monday, May 16th, 2016
Kerala Flex

ಬದಿಯಡ್ಕ: ವ್ಯವಸ್ಥೆಗೆ ಬೇಸತ್ತು ಹಲವರು ಕೆಲವೊಮ್ಮೆ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸುವ ಬದಲು ಈಗಲೂ ಬ್ರಿಟೀಷರೇ ದೇಶವನ್ನು ಆಳ ಬೇಕಿತ್ತೆಂಬ ಮಾತುಗಳು ಹಲವೊಮ್ಮೆ ನಮ್ಮಲ್ಲಿ ಕಂಡುಬರುವುದಿದೆ. ಅದಕ್ಕೆ ಪುಷ್ಠಿ ನೀಡಲೋ ಎಂಬಂತೆ ಬ್ರಿಟಿಷರಿಗೆ ಧನ್ಯವಾದ ತಿಳಿಸಿ ಬದಿಯಡ್ಕದಲ್ಲಿ ಪ್ಲೆಕ್ಸ್ ಬೋರ್ಡ್ ಕಂಡುಬಂದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಬದಿಯಡ್ಕ-ವಿದ್ಯಾಗಿರಿ ರಸ್ತೆಯ ಕುಂಡಡ್ಕ ಸೇತುವೆಯ ಬಳಿ ಭಾನುವಾರ ಬೆಳಿಗ್ಗೆ ನೀವು ಈ ಸೇತುವೆ ನಿರ್ಮಿಸದೇ ಇದ್ದಲ್ಲಿ ನಮ್ಮ ಯಾತ್ರೆ ಇದಕ್ಕಿಂತಲೂ ಭಯಾನಕವಾಗುತ್ತಿತ್ತು. ಈ ರಸ್ತೆ ಹಾಗೂ ಸೇತುವೆ ಕುಸಿದು ಹಲವು ವರ್ಷಗಳಾದರೂ ,ಮರಳಿ […]