ಒಳಾಂಗಣ ಕ್ರೀಡಾಂಗಣ, ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಕ್ಕೆ ಶಿಲನ್ಯಾಸ

Tuesday, November 2nd, 2021
Smart city

ಮಂಗಳೂರು :  ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ಮಂಗಳೂರು ನಗರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದ್ದು, ಮುಂಬರುವ ವರ್ಷದಲ್ಲಿ ಪಂಪ್‍ವೆಲ್‍ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದರು. ಅವರು ನ.2ರ ಮಂಗಳವಾರ ಮಂಗಳೂರು ನಗರದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ.ಗಳಡಿ ಉದ್ದೇಶಿತ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‍ಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ 70 ಕೋಟಿ ರೂ.ಗಳ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ […]

ಹಂಪನಕಟ್ಟೆ ಯಲ್ಲಿ ಸಿದ್ಧಗೊಳ್ಳಲಿದೆ 95 ಕೋಟಿ ರೂ. ವೆಚ್ಚದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌

Thursday, October 28th, 2021
old Bus stand

ಮಂಗಳೂರು: ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದ 1.55 ಎಕರೆ ಪ್ರದೇಶದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸುಮಾರು 95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (ಎಂಎಲ್‌ಸಿಪಿ) ಕಮ್‌ ರಿಟೈಲ್‌ ಮಳಿಗೆಗಳಿಗೆ ನ.2ರಂದು ಚಾಲನೆ ಸಿಗಲಿದೆ. ದಶಕದ ಹಿಂದೆ ರೂಪಿಸಿದ್ದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (ಎಂಎಲ್‌ಸಿಪಿ) ಕಮ್‌ ರಿಟೈಲ್‌ ಸ್ಪೇಸ್‌ ‘ಸರಕಾರದ ಮೇಲೆ ಯಾವುದೇ ಒತ್ತಡ ಹಾಕದೇ ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಎಂಎಲ್‌ಸಿಪಿ ಯೋಜನೆ ರೂಪಿಸಲು […]

ಹಂಪನಕಟ್ಟೆ ಬಳಿ ಅಶ್ವತ್ಥ ಮರದ ರೆಂಬೆ ತುಂಡಾಗಿ ಮಹಿಳೆಗೆ ಗಾಯ

Monday, January 28th, 2019
bus

ಮಂಗಳೂರು : ಹಂಪನಕಟ್ಟೆ ಐಡಿಯಲ್  ಐಸ್ ಕ್ರೀಮ್ ಬಳಿ ಇರುವ  ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಬಸ್ಸಿನ ಮೇಲೆ  ತುಂಡಾಗಿ ಬಿದ್ದ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ. ನಗರದ ಜನನಿಬಿಡ ಹಂಪನಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು,  ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಪ್ರತಿದಿನ ನೂರಾರು ಮಂದಿ ಬಸ್ಸಿಗಾಗಿ ಕಾಯುವ ಜಾಗ, ನಗರದ ಜನನಿಬಿಡ ಹಂಪನಕಟ್ಟೆಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಇದ್ದ ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಏಕಾಏಕಿ ಮುರಿದು ಬಿದ್ದಿದೆ. ಮಂಗಳೂರಿನಿಂದ […]

ಮಂಗಳೂರಿನಲ್ಲಿ ಸಂಸದ ಕಟೀಲು ಉಪವಾಸ

Thursday, April 12th, 2018
nalin-kumar

ಮಂಗಳೂರು: ಪ್ರಧಾನಿ ಮೋದಿ ಸತ್ಯಾಗ್ರಹ ಬೆಂಬಲಿಸಿ ಮಂಗಳೂರಿನಲ್ಲೂ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಹಂಪನಕಟ್ಟೆಯ ಪುರಭವನದ ಬಳಿಯಿರುವ ಗಾಂಧಿ ಪ್ರತಿಮೆ ಎದುರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದ ನಳೀನ್, ಪ್ರಧಾನಿ ಕರೆಯಂತೆ ಒಂದು ತಿಂಗಳ ಸಂಬಳ ಬಿಟ್ಟಿದ್ದೇವೆ. ಕಾಂಗ್ರೆಸ್ ಸಂಸದರು ತಾಕತ್ತಿದ್ದರೆ ಸಂಬಳ ಬಿಟ್ಟುಕೊಡಲಿ. ದೇಶದ ತೆರಿಗೆಯ ಹಣ ಪೋಲಾಗಲು ಬಿಡುವುದಿಲ್ಲ ಎಂದರು.

ಕಾರಿನಲ್ಲಿ ಮಲಗಿದ್ದವನನ್ನು ಎಬ್ಬಿಸಲು ಆ್ಯಂಬುಲೆನ್ಸ್‌ ಬರಬೇಕಾಯಿತು!

Wednesday, January 31st, 2018
omni-car

ಮಂಗಳೂರು: ಕಾರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಆ್ಯಂಬುಲೆನ್ಸ್‌ ಬರಬೇಕಾಯಿತು!ಇಂಥದ್ದೊಂದು ಕುತೂಹಲಕಾರಿ ಘಟನೆಗೆ ಹಂಪನಕಟ್ಟೆ ಪರಿಸರ ಸಾಕ್ಷಿಯಾಯಿತು. ಅಪರಿಚಿತನೊಬ್ಬ ತನ್ನ ಆಮ್ನಿ ಕಾರಿನಲ್ಲಿ ನಿದ್ರಿಸಿದ್ದರು. ಸಾರ್ವಜನಿಕರು ಅವರನ್ನು ಎಬ್ಬಿಸಲು ವಿಫ‌ಲರಾದಾಗ, ಕೊನೆಗೆ ಏನಾ ದರೂ ಅನಾಹುತ ಸಂಭವಿಸಿರಬಹುದೇ ಎಂಬ ಆತಂಕದಿಂದ ಆ್ಯಂಬುಲೆನ್ಸ್‌ ಕರೆಸಿದರು. ಹಂಪನಕಟ್ಟೆಯ ವಿ.ವಿ. ಕಾಲೇಜಿನ ಮುಂಭಾಗದಲ್ಲಿ ಸೋಮವಾರ ಸಂಜೆ 3 ಗಂಟೆಯ ಸುಮಾರಿಗೆ ಕೆಎ 13 ನೋಂದಣಿಯ ಮಾರುತಿ ಆಮ್ನಿ ಕಾರಿನ ಡ್ರೈವರ್‌ ಸೀಟಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ. ಸ್ಟೇರಿಂಗ್‌ ಹಿಡಿದು ಮಲಗಿದ್ದ ಆತನ ಬಾಯಿಂದ ನೊರೆ […]

ವಿದೇಶಿ ಪ್ರಜೆಗೆ ಮಂಗಳೂರಿನಲ್ಲಿ ಆಧಾರ್‌ ಕಾರ್ಡ್‌ !

Tuesday, January 30th, 2018
adhar-card

ಮಂಗಳೂರು: ಮಲೇಷ್ಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ “ಆಧಾರ್‌’ ಚೀಟಿ ಮಾಡಿಸಿಕೊಟ್ಟಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗೆ ಬಹುಸುಲಭವಾಗಿ ಭಾರತದ ಗುರುತಿನ ಚೀಟಿ ನೀಡಿರುವ ಈ ದೇಶವಿರೋಧಿ ಚಟುವಟಿಕೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಥ್‌ ನೀಡಿ ರುವ ಅನುಮಾನವೂ ಆರೋಪವೂ ಕೇಳಿಬಂದಿದೆ! ಮಂಗಳೂರಿನಲ್ಲಿ ವೈದ್ಯ ಶಿಕ್ಷಣ ಪಡೆಯುವುದಕ್ಕಾಗಿ “ಸ್ಟಡಿ ವೀಸಾ’ದಲ್ಲಿ ಬಂದಿರುವ ಮಲೇಷ್ಯಾದ ಹೋಹ್‌ ಜಿಯಾನ್‌ ಮೆಂಗ್‌ (25) ಆಧಾರ್‌ ಕಾರ್ಡ್‌ ಪಡೆದು ಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಮೂಲಕ ಅಕ್ರಮವಾಗಿ ಭಾರತೀಯ ಪ್ರಜೆ […]

ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಸತ್ರ ನ್ಯಾಯಾಲಯದಿಂದ ಐದು ವರ್ಷ ಜೈಲು ಶಿಕ್ಷೆ

Wednesday, January 25th, 2017
Abdul-Khadar

ಮಂಗಳೂರು: ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಸಹಿತ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ವಿಧಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಕಾರಾಗೃಹ ಸಜೆ ಅನುಭವಿಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ಬಿಳಗಿ ತೀರ್ಪಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಳ ಗ್ರಾಮದ ಅರಿಪ್ಪುಕಟ್ಟ ನಿವಾಸಿ ಅಬ್ದುಲ್‌ಖಾದರ್(62) ಶಿಕ್ಷೆಗೊಳಗಾದ ಅಪರಾಧಿ. ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಕೆ. ವಾದಿಸಿದ್ದರು. 2002ರ […]

ನಗರದ ಹಂಪನಕಟ್ಟೆಯ ಕಟ್ಟಡ ಕುಸಿತ ಇಬ್ಬರಿಗೆ ಗಾಯ

Tuesday, June 4th, 2013
Building collapses at hampanka

ಮಂಗಳೂರು : ರವಿವಾರ ಒಂದೇ ಸಮನೆ ಸುರಿದ ಮಳೆಯಿಂದಾಗಿ ಶಿಥಿಲಗೊಂಡ ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿಯಿರುವ ಕಟ್ಟಡದ ಮೇಲಂತಸ್ಥಿನ ಮಳಿಗೆಯ ಮುಂಭಾಗ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಘಟನೆಯಿಂದ ಜಾನ್(62) ಹಾಗು ಪವನ್ ಕುಮಾರ್ ಎಂಬಿಬ್ಬರು ಗಾಯಗೊಂಡಿದ್ದು, ಇವರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಜಾನ್ ರ ಕಾಲಿನ ಮೂಳೆ ಮುರಿದಿದ್ದು, ಪವನ್ ಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಸಿದ ಕಟ್ಟಡವು ಬಹಳಷ್ಟು ಹಳೆಯದಾಗಿದ್ದು, […]