ಜನರೇಟರ್ನಿಂದ ವಿಷಾನಿಲ ಸಿಬ್ಬಂದಿ ಸಾವಿಗೆ ಕಾರಣ
Tuesday, November 7th, 2017ಮಂಗಳೂರು: ಕೋಟೆಕಾರುಲ್ಲಿರುವ ಕೋ- ಆಪರೇಟಿವ್ ಸೊಸೈಟಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ರೂಂನೊಳಗೆ ಜನರೇಟರ್ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ಕೊಠಡಿ ಒಳಗಡೆ ಇದ್ದ ಜನರೇಟರ್ನಿಂದ ಹೊರಸೂಸಿದ ವಿಷಾನಿಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳಾದ ಉಮೇಶ್, ಸಂತೋಷ್, ಸೋಮನಾಥ ಸೊಸೈಟಿ ಕೊಠಡಿ ಒಳಗಡೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. […]