ನಗರದ ಜಿಲ್ ಗೇವಿನ್ ಡಿಸೋಜ, ಯುವ ಡಿಜೆ ಸಂಗೀತಗಾರ ಆತ್ಮಹತ್ಯೆ

Saturday, November 11th, 2017
jill gavin D souza

ಮಂಗಳೂರು:ಬೆಂದೂರ್‌ವೆಲ್‌ನ ಮನೆಯಲ್ಲಿ ನಗರದ ಯುವ ಡಿಜೆ ಸಂಗೀತಗಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂದೂರ್‌ವೆಲ್‌ ನಿವಾಸಿ ಜೊಸ್ಸಿ ಹಾಗೂ ಜುಲೈಟ್ ಎಂಬವರ ಮಗ ಜಿಲ್ ಗೇವಿನ್ ಡಿಸೋಜ (23) ಆತ್ಮಹತ್ಯೆಗೆ ಶರಣಾದವರು. ಜಿಲ್ ಗೇವಿನ್ ಡಿಜೆ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದರು. ಅಲ್ಲದೆ ಡ್ರಮ್ಮರ್ ಕೂಡಾ ಆಗಿದ್ದರು. ಸುಮಾರು 9 ತಿಂಗಳಿನಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮನೆಯ ಮೊದಲ ಮಹಡಿಯಿಂದ ಎರಡನೇ ಮಹಡಿಗೆ ಹೋಗುವ ಮೆಟ್ಟಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. […]