ಬಂಟರು ಎಲ್ಲಾ ಸಮಾಜದ ಅಭ್ಯುದಯಕ್ಕೆ ಶ್ರಮಿಸುವಂತಾಗಲಿ : ಸಾದ್ವಿ ಮಾತಾನಂದಮಯಿ
Saturday, March 12th, 2016ಮಂಜೇಶ್ವರ: ಬಂಟ ಮಹಿಳೆಯು ಹಿಂದಿನಿಂದಲೂ ನಾಯಕತ್ವದ ವರ್ಚಸ್ಸು ಪಡೆದವಳಾಗಿದ್ದು, ಇತರ ಶೋಷಿತ ಸಮುದಾಯದವರಿಗೂ ಆಶ್ರಯ ಕಲ್ಪಿಸುತ್ತಾ ನ್ಯಾಯ ನೀತಿಯನ್ನು ಎತ್ತಿ ಹಿಡಿದ ಪರಂಪರೆ ಉಳ್ಳವಳಾಗಿದ್ದಾಳೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಅಭಿಪ್ರಾಯಪಟ್ಟರು. ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮಂಜೇಶ್ವರ ಪಂಚಾಯತ್ಗೆ ಕುಂಜತ್ತೂರು ನಾಲ್ಕನೇ ವಾರ್ಡಿನಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಶೋಭಾ ವಿ.ಶೆಟ್ಟಿ ಅವರನ್ನು ಮಂಜೇಶ್ವರ ಬಂಟರ ಸಂಘದ ವತಿಯಿಂದ ತಲಪಾಡಿ ವಿಶ್ವಾಸ್ ಆಡಿಟೋರಿಯಂನಲ್ಲಿ ಸಮ್ಮಾನಿಸಿ ಮಾತನಾಡುತ್ತಿದ್ದರು. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಂಟ ಸಮಾಜದ ಸದಸ್ಯರು ಸರ್ವ […]