ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

10:41 AM, Friday, October 7th, 2011
Share
1 Star2 Stars3 Stars4 Stars5 Stars
(4 rating, 2 votes)
Loading...

Mangalore-dasara

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಗುರುವಾರ ಸಂಜೆ ಶಾರದೆ, ಆದಿಶಕ್ತಿ, ಮಹಾಗಣಪತಿ ಸಹಿತ ನವದುರ್ಗೆಯರ ಅತ್ಯಾಕರ್ಷಕ ಶೋಭಾಯಾತ್ರೆಯೊಂದಿಗೆ ಆರಭಂಗೊಂಡಿತು. ಶೋಭಾಯಾತ್ರೆ ನೇತೃತ್ವವನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ವಹಿಸಿದರು.

ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಸಂದೇಶ ಸಾರುವ ಟ್ಯಾಬ್ಲೋ ಸಹಿತ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯ ನೂರಾರು ಟ್ಯಾಬ್ಲೋಗಳು, ಪುಣ್ಯಕ್ಷೇತ್ರಗಳ ಸಹಕಾರದ ವರ್ಣಮಯ ಟ್ಯಾಬ್ಲೋಗಳು, ತ್ರಿಶೂರ್‌ನ ವರ್ಣರಂಜಿತ ಕೊಡೆಗಳು, ಕರಾವಳಿಯ ಹುಲಿವೇಷ, ಕೇರಳದ ಚೆಂಡೆವಾದ್ಯ, ಮಹಾರಾಷ್ಟ್ರದ ಡೋಲು ನೃತ್ಯ, ಆಂಧ್ರದ ಬಾಲಮುರಳಿಕೃಷ್ಣ ಕೋಲಾಟಂ, ಕಲ್ಲಡ್ಕದ ಶಿಲ್ಪಾಗೊಂಬೆ ಬಳಗ ಹೀಗೆ ಅದ್ದೂರಿಯಾಗಿ ಶೋಭಾಯಾತ್ರೆ ಸಾಗಿತು.

Mangalore Dasara

ಶೋಭಾಯಾತ್ರೆಯು ದುರ್ಗಾಮಹಲ್‌, ಮಣ್ಣಗುಡ್ಡೆ, ಲೇಡಿಹಿಲ್‌, ಲಾಲ್‌ಬಾಗ್‌, ಪಿವಿಎಸ್‌ ವೃತ್ತ, ನವಭಾರತ ವೃತ್ತ, ಕೆಎಸ್‌ಆರ್‌ ರಸ್ತೆ, ಹಂಪನಕಟ್ಟೆ, ವಿವಿ ಕಾಲೇಜ್‌ ವೃತ್ತ, ಗಣಪತಿ ಹೈಸ್ಕೂಲ್‌ ರಸ್ತೆ, ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರಾ ಟಾಕೀಸ್‌, ಅಳಕೆಯಾಗಿ ಶುಕ್ರವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಸಮಾಪನಗೊಂಡಿತು.

ನಗರಪೂರ್ತಿ ವರ್ಣಮಯ ವಿದ್ಯುದ್ದೀಪಗಳಿಂದ ಶೃಂಗಾರಗೊಂಡಿತ್ತು. ದೇಶವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಪಾಲ್ಗೊಂಡರು. ನವರಾತ್ರಿಯ ಯಶಸ್ಸಿಗೆ ವಿಶೇಷವಾಗಿ ಶ್ರಮಿಸಿದವರನ್ನು ಶ್ರೀ ಕ್ಷೇತ್ರದಲ್ಲಿ ಬಿ. ಜನಾರ್ದನ ಪೂಜಾರಿ ಅವರು ಸಮ್ಮಾನಿಸಿದರು.

Mangalore Dasara

ಪತಿಯನ್ನು ಕಳೆದುಕೊಂಡ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಈ ಬಾರಿಯ ದಸರಾದಲ್ಲಿ ನಡೆಸಲಾಗಿದೆ. ಈ ಬಗ್ಗೆ ವ್ಯಾಪಕ ನೆಲೆಯಲ್ಲಿ ಸ್ವಾಗತ ವ್ಯಕ್ತವಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಆ ಮಾತೆಯರು ಕೂಡ ಆನಂದಾಶ್ರು ಸುರಿಸಿದ್ದಾರೆ. ಅವರ ಬಾಳು ಆತ್ಮವಿಶ್ವಾಸದಿಂದ ಬೆಳಗಲಿ ಎಂದರು.

ಜಯ ಸಿ. ಸುವರ್ಣ, ಊರ್ಮಿಳಾ ರಮೇಶ್‌ಕುಮಾರ್‌, ವಿಧಾನಸಭಾ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಶಾಸಕರಾದ ಬೇಳೂರು ಗೋಪಾಲಕೃಷ್ಣ, , ಯು. ಟಿ. ಖಾದರ್‌, ಚಿತ್ರನಟ ಸಚಿನ್‌ ಸುವರ್ಣ, ಕಳ್ಳಿಗೆ ತಾರನಾಥ ಶೆಟ್ಟಿ, ನವೀನ್‌ ಡಿಸೋಜ, ಬಿ. ಮಾಧವ ಸುವರ್ಣ, ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ,, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ವಕ್ತಾರ ಹರಿಕೃಷ್ಣ ಬಂಟ್ವಾಳ್‌, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಚಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ಬಿ.ಕೆ.ತಾರನಾಥ್‌, ರವಿಶಂಕರ್‌ ಮಿಜಾರ್‌, ಕೆ. ಮಹೇಶ್ಚಂದ್ರ ಮುಂತಾದವರು ಉಪಸ್ಥಿತರಿದ್ದರು.

image description

2 ಪ್ರತಿಕ್ರಿಯ - ಶೀರ್ಷಿಕೆ - ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

  1. ನಂದನ್, ಮಣ್ನಗುಡ್ಡ

    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಮ್ಮತ

  2. ಲೋಕನಾಥ, ವಾಮಂಜೂರು

    ಬಿ. ಜನಾರ್ದನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೄದ್ದಿಗಾಗಿ ದುಡಿದಿದ್ದರೆ ಅವರಿಗೆ ಧನ್ಯವಾದಗಳು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English