ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಗೋಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ

3:08 PM, Friday, November 16th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

cow slaughterಮಂಗಳೂರು :ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯಾ ನಿಷೇಧ ಕಾನೂನು ಜಾರಿಗಾಗಿ ಒತ್ತಾಯಿಸಿ ನಿನ್ನೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೇರಳ ರಾಜ್ಯ ಹಿಂದೂ ಐಕ್ಯವೇದಿಯ ಉಪಾಧ್ಯಕ್ಷ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿ ಮಾತನಾಡಿ ಅಕ್ರಮ ಗೋಸಾಗಾಟ ಮತ್ತು ಹತ್ಯೆಯನ್ನು ನಿಷೇಧಿಸಿ ಎಂಬ ಕಾನೂನು ಇದ್ದರೂ ಅದು ಪಾಲನೆಗೆ ಬಂದಿಲ್ಲ.

ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ ಗೋ ಹತ್ಯಾ ನಿಷೇಧ ಕಾನೂನನ್ನು ಪಾಲಿಸಲು ಅಸಾದ್ಯವೆಂದಾದರೆ ಆ ಕೆಲಸವನ್ನು ನಮ್ಮ ಕಾರ್ಯಕರ್ತರೆ ಮಾಡುತ್ತಾರೆ. ಮುಂದಿನ ದೀಪಾವಳಿಯ ವೇಳೆಗೆ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬರದಿದ್ದರೆ ಗೋ ಹಂತಕರನ್ನು ಮನೆಯಿಂದ ಹೊರಗೆ ಕಾಲಿಡದಂತೆ ಮಾಡುತ್ತೇವೆ, ಭಯೋತ್ಪಾದನೆ ದಮನಕ್ಕೆ, ಗೋಹತ್ಯೆ ನಿಷೇಧಕ್ಕೆ ಹಾಗೂ ಧರ್ಮರಕ್ಷಣೆಗಾಗಿ ಜೈಲಿಗೆ ಹೋಗಲು ಸರ್ವಸನ್ನದ್ದವಾಗಿದ್ದೇವೆ ಮತ್ತು ಧರ್ಮರಕ್ಷಣೆಯ ಕಾರ್ಯಕ್ಕಾಗಿ ಯುದ್ದಕ್ಕೂ ಸಿದ್ದರಾಗಿದ್ದೇವೆ ಎಂದವರು ಹೇಳಿದರು.

cow slaughterಬಜರಂಗದಳದ ವಿಭಾಗ ಸಂಚಾಲಕ ಶರಣ್ ಪಂಪ್ ವೆಲ್ ಗೋಹತ್ಯಾ ನಿಷೇಧವನ್ನು ಆಗ್ರಹಿಸಿ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮನವಿ ಕಳುಹಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾನೂನು ಪ್ರಕಾರ ನಡೆಸಿದ ಹೋರಾಟಗಳಿಗೆ ಜಯ ದೊರೆಯಲಿಲ್ಲ. ಹಿಂದೊಮ್ಮೆ ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿದರೂ ನಮ್ಮ ಮಾತುಗಳಿಗೆ ಅವರು ಕಿವಿಕೊಡಲಿಲ್ಲ. ಹಿಂದೂಗಳು ದೇವತೆ ಎಂದು ಪೂಜಿಸುತ್ತಿರುವ ಗೋಹತ್ಯೆಯನ್ನು ನಿಲ್ಲಿಸಿ ಆಗ ನಾವು ಸುಮ್ಮನಿರುತ್ತೇವೆ. ನಗರದಲ್ಲಿ ದೇಶದ್ರೋಹಿ ಸಂಘಟನೆಗಳಿಗೆ ಸಿಗುವಷ್ಟು ಬೆಂಬಲ ನಮಗೆ ಸಿಗುತ್ತಿಲ್ಲ. ಸಧ್ಯದಲ್ಲೇ ಗೋಹತ್ಯೆಯನ್ನು ನಿಷೇಧಿಸದಿದ್ದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ ಎಂದರು.

ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಹಿಂದೆ ಸ್ವಾತಂತ್ರ್ಯಕ್ಕಾಗಿ ರಾತ್ರಿ ಹಗಲು ಹೋರಾಡುವ ಅನಿವಾರ್ಯತೆ ಇತ್ತು. ಆದರೆ ಇಂದು ಗೋ ರಕ್ಷಣೆಗಾಗಿ ಹೋರಾಡಿ ಅದಕ್ಕಾಗಿ ಜೈಲು ಸೇರಿದರೆ ಅದು ಹೆಮ್ಮೆಯ ವಿಷಯ. ಸಂವಿಧಾನಾತ್ಮಕ ಸೂಚ್ಯಗಳಿಗೆ ಮಾನ್ಯತೆ ನೀಡದೆ, ಬಹುಸಂಖ್ಯಾತರ ಮನೋಸ್ಥಿತಿಯನ್ನೇ ದೌರ್ಬಲ್ಯ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

cow slaughterಸಭೆಗೂ ಮೊದಲು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾರ್ಯಾಲಿ ನಡೆಯಿತು. ಪ್ರತಿಭಟನೆಯಲ್ಲಿ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ಶ್ರೀ ರಾಜಶೇಖರನಾಂದ, ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಟಾರು, ವಿಶ್ವಹಿಂದೂ ಪರಿಷತ್ ನ ಕಾರ್ಯದರ್ಶಿ ಕೃಷ್ಣಮೂರ್ತಿ, ವಿಹೆಚ್ ಪಿ ಜಿಲ್ಲಾಧ್ಯಕ್ಷ ಮನೋಹರ್, ಬಜರಂಗದಳ ಗೋರಕ್ಷಾ ಪ್ರಮುಖ ಪ್ರದೀಪ್ ಪಂಪ್ ವೆಲ್ ಮತ್ತಿತರರು ಉಪಸ್ಥಿರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English