ಮಂಗಳೂರು :ಡಿಸೆಂಬರ್ 22ರಿಂದ 25ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ನಾಟಕೋತ್ಸವ ಸುಳ್ಯದ ರಂಗಮನೆಯಲ್ಲಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗು ಶಿವಮೊಗ್ಗದ ರಂಗಾಯಣ ಮತ್ತು ರಂಗಮನೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶೀನಾ ನಾಡೋಳಿಯವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ನಾಟಕೋತ್ಸವದಲ್ಲಿ ಪ್ರತಿದಿನ ರಂಗಭೂಮಿಯಲ್ಲಿ ದಶಕದಿಂದ ತೊಡಗಿಸಿಕೊಂಡಿರುವ ಹವ್ಯಾಸಿ ಹಾಗೂ ವೃತ್ತಿಪರ ರಂಗತಂಡಗಳಿಂದ ನಾಟಕ ಪ್ರದರ್ಶನ ಹಾಗೂ ರಂಗಗೀತೆ ಗಾಯನ ಮತ್ತು ಪ್ರಸಾದನ ಕಾರ್ಯಾಗಾರಗಳು ಇರಲಿವೆ. ಈ ನಾಟಕೋತ್ಸವದ ಸಂದರ್ಭದಲ್ಲಿ ರಂಗಾಸಕ್ತರಿಗೆ ಉಚಿತ ಪ್ರವೇಶ ಇರುತ್ತದೆ. ಮತ್ತು ರಾಜ್ಯದ ವಿವಿಧ ರಂಗ ಪ್ರಯೋಗಗಳು ಇಲ್ಲಿ ಪ್ರದರ್ಶನಗೊಳ್ಳಲಿರುವುದರಿಂದ ಜಿಲ್ಲೆಯ ರಂಗಾಸಕ್ತರಿಗೆ ಇದೊಂದು ಅಪೂರ್ವ ಅವಕಾಶವಾಗಲಿದೆ ಎಂದು ಅವರು ತಿಳಿಸಿದರು.
ಈ ನಾಟಕೋತ್ಸವಕ್ಕೆ ರಂಗಾಯಣ ನಿರ್ದೇಶಕ ಹೊ.ನಾ. ಸತ್ಯ ಚಾಲನೆ ನೀಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಸಮಾರಂಭದ ಅಧ್ಯಕ್ಷರಾಗಿಯೂ, ಮಂಡ್ಯ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಂಗಮನೆ ನಿರ್ದೇಶಕಿ ಮೌಲ್ಯಾ ಜೀವನ್, ಅಕಾಡೆಮಿಯ ಜಿಲ್ಲಾ ಸಹಾಯಕ ಸದಸ್ಯ ಶಶಿರಾಜ್ ಕಾವೂರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English