ತುಳುನಾಡ ರಕ್ಷಣಾ ವೇದಿಕೆಯಿಂದ ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

3:37 PM, Friday, December 28th, 2012
Share
1 Star2 Stars3 Stars4 Stars5 Stars
(No Ratings Yet)
Loading...

Tulunada Rakshana Vedikeಮಂಗಳೂರು : ಜೆಪ್ಪು ಮಹಾಕಾಳಿಪಡ್ಪು,ಶೆಟ್ಟಿಬೆಟ್ಟು, ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆಯಿಂದ ಗುರುವಾರ ಮಹಾಕಾಳಿ ಪಡ್ಪುವಿನಿಂದ ಮೋರ್ಗನ್ ಗೇಟ್ ವರೆಗೆ ರಸ್ತೆ ತಡೆ ಹಾಗು ಪ್ರತಿಭಟನಾ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು.

ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ, ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು, ಕುಡ್ಸೆಂಫ್ ಯೋಜನೆಯಲ್ಲಿ 350 ಕೋಟಿ ರೂಪಾಯಿ ಖರ್ಚು ಮಾಡಿದರೂ ಇಲ್ಲಿ ಒಳಚರಂಡಿಯೇ ಇಲ್ಲದ ಪರಿಸ್ಥಿತಿ ಇದೆ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪಾಲಿಕೆಯು ಶೀಘ್ರದಲ್ಲೇ ಒಳ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು. ಇದೇ ಪ್ರದೇಶದಲ್ಲಿರುವ ರೈಲ್ವೆ ಗೇಟಿನಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕಾರಣ ದಿನಕ್ಕೆ 46 ರೈಲುಗಳು ಇಲ್ಲಿ ಸಂಚರಿಸುತ್ತಿರುವುದರಿಂದ ಪ್ರತಿ ಸಲವೂ ರೈಲು ಬರುವ ಹಲವು ಸಮಯ ಮೊದಲೇ ಗೇಟು ಹಾಕುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ಮಂಗಳೂರು ನಗರವನ್ನು ತಲುಪಲು ಈ ರಸ್ತೆಯು ಹತ್ತಿರವಾಗಿದೆ ಆದರೆ ರೈಲ್ವೆ ಗೇಟ್ ನ ಸಮಸ್ಯೆಯಿಂದಾಗಿ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳೂ ಈ ರಸ್ತೆಯಾಗಿ ಪ್ರಯಾಣಿಸದೆ ಸುತ್ತುಬಳಸಿ ಪಂಪ್ ವೆಲ್ ರಸ್ತೆಯನ್ನು ಬಳಸುವಂತಾಗಿದೆ. ಇದಕ್ಕಾಗಿ ಈ ಕೂಡಲೇ ಕೇಂದ್ರ ಸರಕಾರವು ಇಲ್ಲಿಗೆ ರೈಲ್ವೆ ಕೆಳ ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾವೇದಿಕೆ ಉಪಾಧ್ಯಕ್ಷ ಜೆ.ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಹಮೀದ್ ಹಸನ್ ಮಾಡೂರು, ಮಹಿಳಾ ಅಧ್ಯಕ್ಷೆ ಜ್ಯೋತಿಕಾ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English