ಸುಬ್ರಹ್ಮಣ್ಯ : ಹಿಂದುಗಳ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಣವನ್ನು ವ್ಯಕ್ತಿಗತ ಪ್ರಚಾರಕ್ಕಾಗಿ ಬಳಕೆ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ದಿನಾಂಕ 25 ನವೆಂಬರ್ 2025 ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಚಂಪಾ ಷಷ್ಟಿ ಕಾರ್ಯಕ್ರಮದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕಾರ್ಯನಿರ್ವಹಣಾಧಿಕಾರಿ ಒಪ್ಪಿಗೆ ನೀಡಿದ್ದು ಅದರಲ್ಲಿ ದೇವತಾ ಕಾರ್ಯಕ್ಕಿಂತ ವ್ಯಕ್ತಿಗತ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ರಾಜಕೀಯ ನಾಯಕರ ಮತ್ತು ಇತರರ ಭಾವಚಿತ್ರ ಗಳೊಂದಿಗೆ ಪ್ರಕಟವಾಗಿದೆ.
ದೇವಸ್ಥಾನದ ಅಥವಾ ಧಾರ್ಮಿಕ ದತ್ತಿ ಇಲಾಖೆಯ ಹಣ ಈ ರೀತಿ ದುರುಪಯೋಗ ಪಡಿಸುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ. ದೇವಸ್ಥಾನದ ಮಹತ್ವ ಅಥವಾ ಷಷ್ಟಿ ಮಹೋತ್ಸವದ ಮಹತ್ವ ಹಾಗೂ ಕಾರ್ಯಕ್ರಮದ ಪೂರ್ಣ ವಿವರ ಕೊಡುವ ಬದಲು ರಾಜಕೀಯ ನಾಯಕರ ಪ್ರಚಾರಕ್ಕೆ ಇಂತಹ ಹಣ ದುರುಪಯೋಗ ಮಾಡಿದ್ದು ಸರಿಯಲ್ಲ . ಸದ್ರಿ ಪ್ರಕಟಣೆಯಲ್ಲಿ ಇಲಾಖೆ ಹೆಸರು ಬರೆಯುವಾಗ ಹಿಂದೂ ಹೆಸರನ್ನು ಬಿಟ್ಟು ಕೇವಲ ಧಾರ್ಮಿಕ ದತ್ತಿ ಇಲಾಖೆ ಬರೆದಿರುವ ಅಧಿಕಾರಿಯ ರಾಜಕೀಯ ನಡತೆಯನ್ನು ಕೂಡ ನಾವು ಖಂಡಿಸುತೇವೆ ಎಂದು ಅವರು ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









