ಒಂದೂವರೆ ತಿಂಗಳ ಹೆಣ್ಣು ಮಗು ವನ್ನು ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ತಾಯಿ

Tuesday, September 12th, 2023
infant killed

ಕಾಸರಗೋಡು : ಹೆಣ್ಣು ಮಗು ವನ್ನು ತಾಯಿಯೊಬ್ಬಳು ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳ ಪಚ್ಲಂಪಾರೆ ಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಸುಮಂಗಲಿ – ಸತ್ಯನಾರಾಯಣ ದಂಪತಿ ಯ ಒಂದೂವರೆ ತಿಂಗಳ ಮಗು ಮೃತ ಪಟ್ಟವಳು. ತಾಯಿ ಮತ್ತು ಮಗು ನಾಪತ್ತೆ ಯಾದುದರಿಂದ ಮನೆ ಯವರು ಶೋಧ ನಡೆಸಿದಾಗ ತಾಯಿ ಯನ್ನು ಮನೆಯ ಅಲ್ಪ ದೂರದಿಂದ ಪತ್ತೆ ಹಚ್ಚಲಾಗಿದ್ದು, ಮಗು ನಾಪತ್ತೆಯಾಗಿತ್ತು. ವಿಚಾರಿಸಿದಾಗ ಮಗುವನ್ನು ಸಮೀಪದ ಬಯಲಿನಲ್ಲಿ ಕೆಸರು ನೀರಿನಲ್ಲಿ […]

ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

Tuesday, September 12th, 2023
ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

ವಿಟ್ಲ : ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ರವರು ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. 2015ರ ಅ.1ರಂದು ತನ್ನದೇ ಊರಿನ 19 ವರ್ಷ ಪ್ರಾಯದ ಎಂಡೋಸಲ್ಫಾನ್ ಪೀಡಿತೆಯನ್ನು ಆರೋಪಿ ರಾಜೇಶ್ ಅತ್ಯಾಚಾರವೆಸಗಿದ್ದನೆಂದು ಆರೋಪಿಸಿ ಪ್ರಕರಣ […]

ಪುತ್ತಿಲ ಪರಿವಾರದ ಸೇವಾ ಸಮರ್ಪಣೆಗೆ ನಿಮ್ಮ ಕೊಡುಗೆಗಾಗಿ ಕ್ಯೂರ್ ಕೋಡ್ ಮತ್ತು ಅಕೌಂಟ್ ನಂಬರ್ ಬಿಡುಗಡೆ

Monday, September 11th, 2023
ಪುತ್ತಿಲ ಪರಿವಾರದ ಸೇವಾ ಸಮರ್ಪಣೆಗೆ ನಿಮ್ಮ ಕೊಡುಗೆಗಾಗಿ ಕ್ಯೂರ್ ಕೋಡ್ ಮತ್ತು ಅಕೌಂಟ್ ನಂಬರ್ ಬಿಡುಗಡೆ

ಪುತ್ತೂರು : ಪುತ್ತಿಲ ಪರಿವಾರ ಪ್ರಾರಂಭವಾಗಿ ಶತ ದಿನ ಕಳೆದಿದ್ದು, ಹಲವು ಸೇವಾ ಚಟುವಟಿಕೆಗಳನ್ನು ಪೂರೈಸಿದೆ. ಚುನಾವಣೆಯಲ್ಲಿ ಉಳಿಕೆ ಹಣವನ್ನು ಹಲವು ಆನಾರೋಗ್ಯ ಪೀಡಿತರಿಗೆ, ಮಳೆಗಾಲದಲ್ಲಿ ಹಾನಿಯಾದ ಹಲವು ಮನೆಗಳಿಗೆ ವಿತರಿಸಿದ್ದು, ನಂತರ ಪುತ್ತಿಲ ಪರಿವಾರ ಪ್ರಾರಂಭವಾಗಿ ನೂರು ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದವರಿಗೆ, ಅಪಘಾತದಿಂದ ಗಾಯಗೊಂಡವರಿಗೆ, ಗೋಮಾತೆಯ ರಕ್ಷಣೆಗೆ , ವಿದ್ಯಾಭ್ಯಾಸಕ್ಕೆ ಸಹಾಯ ಸಹಿತ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕಾರ್ಯಕರ್ತರಿಗೆ ಕಾನೂನಿನ ನೆರವಿನ ಸಹಾಯವನ್ನು ಪುತ್ತಿಲ ಪರಿವಾರದಿಂದ ಒದಗಿಸಲಿದೆ. ಪುತ್ತಿಲ ಪರಿವಾರ […]

ಆಚರಣೆ ಯಾವುದೇ ಇರಲಿ ನಂದಿನಿ ಸಿಹಿ ನಿಮ್ಮೊಂದಿಗಿರಲಿ

Tuesday, August 15th, 2023
nandini2023

ಗ್ರಾಹಕರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರವೆಂಬ ಅಸ್ತ್ರ: ಕೆ ಜಿ ಕುಲಕರ್ಣಿ

Thursday, March 3rd, 2022
Kulkarni

ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರ ವೇದಿಕೆಯಡಿ ಪರಿಹಾರ ಪಡೆಯಬಹುದಾಗಿದೆ, ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, ʼಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ […]

ಅಮೃತ ಸ್ವಾತಂತ್ರ್ಯ ಸಂಭ್ರಮ ‘ನಮ್ಮ ಅಬ್ಬಕ್ಕ – 2022’

Monday, February 28th, 2022
Namma Abbakka

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಎರಡು ದಿನಗಳ ‘ನಮ್ಮ ಅಬ್ಬಕ್ಕ – 2022. ಅಮೃತ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮವು ರವಿವಾರ ಸಂಪನ್ನಗೊಂಡಿತು. ಈ ಸಂದರ್ಭ ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರೋತ್ಸವ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಹಾಗೂ ರಾಣಿ ಅಬ್ಬಕ್ಕ ಸೇವಾ ಪುರಸ್ಕಾರವನ್ನು ವಿಜಯಲಕ್ಷ್ಮಿ ಶೆಟ್ಟಿಗೆ ಪ್ರದಾನ ಮಾಡಲಾಯಿತು. ಮೊದಲ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ […]

ದನದ ತಲೆ ಕತ್ತರಿಸಿ ರಸ್ತೆಯಲ್ಲಿಟ್ಟ ದುಷ್ಕರ್ಮಿಗಳು

Thursday, January 13th, 2022
cow Head

ಮೂಡುಬಿದಿರೆ :  ದನದ ತಲೆ ಯನ್ನು ಕತ್ತರಿಸಿ ಮೂಡುಬಿದಿರೆ ತಾಲೂಕಿನ ಮಹಾವೀರ ಕಾಲೇಜು ಸಮೀಪದ ಕೊಡಂಗಲ್ಲು ಕೀರ್ತಿನಗರ ಕ್ರಾಸ್‌ ಬಳಿ ಎಸೆದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಹಸುವಿನ ಮುಂಡದಿಂದ ಬೇರ್ಪಟ್ಟಿದ್ದ ತಲೆಬುರುಡೆಯನ್ನು ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಪಕ್ಕದಲ್ಲಿ  ಎಸೆದಿದ್ದು .  ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ತಲೆಬುರುಡೆಯನ್ನು ಹೊರತೆಗೆಯುವ ವ್ಯವಸ್ಥೆ ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ರಾಜ್ಯ […]

ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಬೆನ್ನಟ್ಟಿ ಹಿಡಿದ ಪೊಲೀಸ್

Thursday, January 13th, 2022
Varun-Alva

ಮಂಗಳೂರು:  ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಸ್ಥಳೀಯರು ಹಾಗೂ ಮಂಗಳೂರು ಪೊಲೀಸ್‌ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ಸೇರಿ ಅಟ್ಟಿಸಿ ಹಿಡಿದಿದ್ದಾರೆ. ಆರೋಪಿಗಳಾದ ಅತ್ತಾವರ ಬಾಬುಗುಡ್ಡೆಯ ಶಮಂತ್‌(20), ನೀರುಮಾರ್ಗ ಪಾಲ್ದನೆಯ ಹರೀಶ್‌ ಪೂಜಾರಿ(32) ಎಂಬವರನ್ನು ಬಂಧಿಸಲಾಗಿದೆ. ಬಿಹಾರ ಮೂಲದ ವ್ಯಕ್ತಿಯೊಬ್ಬನಿಂದ ಮೊಬೈಲ್ ಕದ್ದ ಆರೋಪಿ ಶಮಂತ್‌ ಎಂಬಾತ ಓಡಿ ತಪ್ಪಿಸಿಕೊಳ್ಳುತ್ತಿರುವಾಗ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ವರುಣ್‌ ಆಳ್ವ ಎಂಬವರು ಅಟ್ಟಿಸಿಕೊಂಡು ಹೋಗಿ ಹಿಡಿದು ನೆಲಕ್ಕೆ ಒತ್ತಿ ಆತನನ್ನು ಅರೆಸ್ಟ್‌ ಮಾಡುವ ವಿಡಿಯೋ ವೈರಲ್‌ ಆಗಿದೆ. […]

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಅಭಿನಂದನೆ

Monday, December 13th, 2021
MP Ravindranath

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್ ಅವರನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪರವಾಗಿ ಅವರ ಪದಗ್ರಹಣ ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಿತು. ಈ ಸಂದರ್ಭ ದಕ್ಷಿಣ ಕನ್ನಡ ಚುಸಾಪ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಮಂಗಳೂರು ಚುಸಾಪ ಹಾಗೂ ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕಾ.ವೀ  ಕೃಷ್ಣದಾಸ್, ಉಪಾಧ್ಯಕ್ಷೆ ಅರುಣಾ ನಾಗರಾಜ್,ಮಾಲತಿ ಶೆಟ್ಟಿ ಮಾಣೂರು,ಗೋಪಾಲಕೃಷ್ಣ ಶಾಸ್ತ್ರಿ, […]

ಡಿ. ವೀರೇಂದ್ರ ಹೆಗ್ಗಡೆ : ದೃಷ್ಟಿ – ಸೃಷ್ಟಿ ಗ್ರಂಥ ಲೋಕಾರ್ಪಣೆ

Sunday, November 28th, 2021
Dristi

ಉಜಿರೆ: ನಾನು ಯಾವುದೇ ರೀತಿಯ ಕೃತಕ ಮುಖವಾಡವಿಲ್ಲದೆ ಸ್ವಾಭಾವಿಕವಾಗಿ, ಸಹಜವಾಗಿ ಬದುಕುತ್ತಿದ್ದೇನೆ. ಇಂದಿನ ಪುಸ್ತಕ ಬಿಡುಗಡೆ ಸಮಾರಂಭವು ಕನ್ನಡಿಯ ಎದುರು ನಿಂತು ನನ್ನನ್ನು ನಾನು ಅವಲೋಕನ ಮಾಡುವಂತೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಭಾನುವಾರ ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನಿವಾಸದಲ್ಲಿ ಡಾ. ಎಮ್. ಪ್ರಭಾಕರ ಜೋಶಿ ಬರೆದ ಲೇಖನಗಳ ಸಂಕಲನ ಡಿ. ವೀರೇಂದ್ರ ಹೆಗ್ಗಡೆ : ದೃಷ್ಟಿ – ಸೃಷ್ಟಿ ಗ್ರಂಥ ಎಂಬ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವು ನಿತ್ಯವೂ […]