ಮದುವೆ ಮಂಟಪ ದಲ್ಲಿ ವಧು ಮದುವೆ ನಿರಾಕರಿಸಿದರೆ, ಪೊಲೀಸ್‌ ಠಾಣೆಯಲ್ಲಿ ವರ ಇವಳು ಬೇಡ ಎಂದ

Saturday, April 27th, 2024
ಮದುವೆ ಮಂಟಪ ದಲ್ಲಿ ವಧು ಮದುವೆ ನಿರಾಕರಿಸಿದರೆ, ಪೊಲೀಸ್‌ ಠಾಣೆಯಲ್ಲಿ ವರ ಇವಳು ಬೇಡ ಎಂದ

ಕಡಬ : ಮದುವೆ ಮಂಟಪ ದಲ್ಲಿ ಕೊನೆ ಕ್ಷಣದಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಎ. 26ರಂದು ನಡೆದಿದೆ. ಕೊಣಾಲು ಗ್ರಾಮದ ಉಮೇಶ ಅವರ ವಿವಾಹವು ಬಂಟ್ವಾಳ ತಾಲೂಕು ಕುಳದ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ. 26ರ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಿಗದಿಯಾಗಿದ್ದು. ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ದಾರೆ ಸೀರೆ […]

“ನಂಬಿದ ದೈವ ಕೈಬಿಡುವುದಿಲ್ಲ ಎನ್ನುವುದಕ್ಕೆ ಕೊಡಮಣಿತ್ತಾಯ ನ ಸಾನಿಧ್ಯವೇ ಸಾಕ್ಷಿ” : ಪಲಿಮಾರು ಶ್ರೀ

Saturday, April 27th, 2024
shibaruru

ಮಂಗಳೂರು : “ನಂಬಿದ ದೈವ ನಮ್ಮನ್ನು ಕೈಬಿಡುವುದಿಲ್ಲ ಅನ್ನುವುದಕ್ಕೆ ಶಿಬರೂರು ಕೊಡಮಣಿತ್ತಾಯ ದೈವವೇ ಸಾಕ್ಷಿ. ಇಂದು ಚುನಾವಣೆ ಇದ್ದರೂ ಯಾವುದೇ ಅಡಚಣೆ ಎದುರಾಗದೆ ದೈವದ ಕಾರಣಿಕದಿಂದ ಇಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಬಂಗಾರದ ಪಲ್ಲಕ್ಕಿ, ದ್ವಾರ, ಗೋಪುರ ಸಹಿತ ಬ್ರಹ್ಮಕುಂಭಾಭಿಷೇಕ ನಡೆದು ನಾಗಮಂಡಲ ನಡೆಯುತ್ತಿದೆ. ಇದೆಲ್ಲವೂ ದೈವದ ಪವಾಡದಿಂದಷ್ಟೇ ಸಾಧ್ಯ. ಇಂತಹ ಶಕ್ತಿ ಸಾನಿಧ್ಯದಲ್ಲಿ ಜರುಗಿದ ದೈವಿಕ, ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ” ಎಂದು ಜಗದ್ಗುರು ಮಧ್ವಾಚಾರ್ಯ […]

ಕುದುರೆ ಏರಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಯುವಕ

Friday, April 26th, 2024
ಕುದುರೆ ಏರಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಯುವಕ

ಕಾರ್ಕಳ : ಮತ ಚಲಾಯಿಸಲು ಯುವಕನೊಬ್ಬ ಕುದುರೆ ಏರಿ ಮತಗಟ್ಟೆಗೆ ಬಂದು ಮತದಾನ ಮಾಡುವುದರ ಮೂಲಕ ಗಮನ ಸೆಳೆದ ಪ್ರಸಂಗ ಕಾರ್ಕಳದಲ್ಲಿ ನಡೆಯಿತು.  ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಮೊದಲ ಪುತ್ರ ಏಕಲವ್ಯ ಆರ್. ಕಟೀಲ್ ತಾನು ಸಾಕಿದ ಕುದುರೆಯನ್ನು ಏರಿ ಬೂತ್ ನಂ‌. 87 ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಬಂದು ಮತ ಚಲಾಯಿಸುವುದರ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಬೂತ್ ನಲ್ಲಿ ಇದ್ದ ಪಕ್ಷದ ಕಾರ್ಯಕರ್ತರು ಅವರ ಜೊತೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 77.44% ಮತದಾನ, ಉಡುಪಿಯಲ್ಲಿ 72.13% ಮತದಾನ

Friday, April 26th, 2024
election-24

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಮುಗಿಯುವ ವೇಳೆಗೆ 77.44% ಮತದಾನವಾಗಿದೆ ಉಡುಪಿ – ಚಿಕ್ಕಮಗಳೂರು ಜಿಲ್ಲೆ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ 72.13% ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ 5ರ ವೇಳೆಗೆ ಬೆಳ್ತಂಗಡಿ 75.59, ಮೂಡಬಿದ್ರಿ 68.62, ನಗರ ಉತ್ತರ 69.75, ನಗರ ದಕ್ಷಿಣ 61.81, ಮಂಗಳೂರು 73.45, ಬಂಟ್ವಾಳ 73.69, ಪುತ್ತೂರು 75.2, ಸುಳ್ಯ 78.35 ಶೇಖಡಾ ಮತದಾನ ದಾಖಲಾಗಿತ್ತು. ಮಧ್ಯಾಹ್ನ3.00 ರ ವೇಳೆಗೆ ಉಡುಪಿ- […]

ಸಂಸದ ನಳಿನ್ ಕುಮಾರ್ ಕಟೀಲ್, ಡಿ.ವೇದವ್ಯಾಸ್ ಕಾಮತ್ ಸಹಿತ ಹಲವು ಮುಖಂಡರ ಮತದಾನ

Friday, April 26th, 2024
ಸಂಸದ ನಳಿನ್ ಕುಮಾರ್ ಕಟೀಲ್, ಡಿ.ವೇದವ್ಯಾಸ್ ಕಾಮತ್ ಸಹಿತ ಹಲವು ಮುಖಂಡರ ಮತದಾನ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಗರದ ಲೇಡಿಹಿಲ್ ಸಂತ ಅಲೋಶಿಯಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಬಂದು ಮತ ಚಲಾಯಿಸಿದರು. ಇದೇ ಸಂದರ್ಭ ಅಲ್ಲಿ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪರಸ್ಪರ ಭೇಟಿಯಾದರು. ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ಗಾಂಧಿನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೂತ್ ನಂಬರ್ 86 ರಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದರು. […]

ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 11ಗಂಟೆಗೆ ಶೇ 30.98 ರಷ್ಟು ಮತದಾನ

Friday, April 26th, 2024
Brijesh chowta

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 11ಗಂಟೆಗೆ ಶೇ 30.98 ರಷ್ಟು ಮತದಾನವಾಗಿದೆ . ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಂಗಳೂರಿನ ರಥಬೀದಿಯ ಸರಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿದರು. ಕ್ಯಾ. ಬ್ರಿಜೇಶ್ ಚೌಟ ಅವರು ಬೂತ್ ಸಂಖ್ಯೆ 17ರಲ್ಲಿ ತಮ್ಮ ತಂದೆ, ತಾಯಿ ಜೊತೆಗೆ ಮತ ಚಲಾವಣೆಗೆ ಬಂದಿದ್ದರು. ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಚೌಟ, ಭಾರತದ ಭವಿಷ್ಯಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗಿನಿಂದಲೇ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಗಂಟೆಗೆ 14.33 ಶೇಕಡಾ ಮತದಾನ

Friday, April 26th, 2024
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಗಂಟೆಗೆ 14.33 ಶೇಕಡಾ ಮತದಾನ

ಮಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಗಂಟೆಗೆ 14.33 ಶೇಕಡಾ ಮತದಾನವಾಗಿದೆ. ಮತದಾರರು ಮತಗಟ್ಟೆಗಳತ್ತ ಸಾಗಿ ಬರುತ್ತಿದ್ದು, ದ.ಕ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಪಿತಾನಿಯೊ 179 ನೇ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ತಮ್ಮ ಹಕ್ಕು ಚಲಾಯಿಸಿದರು. ರಾಜ್ಯ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಉಳ್ಳಾಲ ತಾಲೂಕಿನ […]

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಒಂಭತ್ತು ಅಭ್ಯರ್ಥಿಗಳು, ಏಪ್ರಿಲ್ 26 ರಂದು ಚುನಾವಣೆ

Thursday, April 25th, 2024
Kasaragod-election

ಕಾಸರಗೋಡು: ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಸಜ್ಜಾಗಿದೆ. ಏಪ್ರಿಲ್ 26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಒಂಭತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ .ಈ ಕ್ಷೇತ್ರದಲ್ಲಿ 14,52,230 ಮತದಾರರಿದ್ದಾರೆ. ಇದರಲ್ಲಿ 7,01,475 ಪುರುಷರು, 7,50,741 ಮಹಿಳೆಯರು ಮತ್ತು 14 ತ್ರತೀಯ ಲಿಂಗೀ ಮತದಾರರು. ಸಾರ್ವಜನಿಕ ವೀಕ್ಷಕ ಋಷಿರೇಂದ್ರ ಕುಮಾರ್, ಪೊಲೀಸ್ ವೀಕ್ಷಕ ಸಂತೋಷ್ ಸಿಂಗ್ ಗೌರ್ ಮತ್ತು ವೆಚ್ಚ […]

ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ: ಏ.26ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು

Thursday, April 25th, 2024
ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ: ಏ.26ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು

ಮಂಗಳೂರು : ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ 17-ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು. 200- ಬೆಳ್ತಂಗಡಿ ವಿಧಾನಸಭಾಕ್ಷೇತ್ರದ ಮಸ್ಟರಿಂಗ್ ಕಾರ್ಯ ಬೆಳ್ತಂಗಡಿಯ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು ಕಾಲೇಜಿನಲ್ಲಿ ನಡೆಯಿತು. 201- ಮೂಡಬಿದ್ರೆ […]

ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಸುಬ್ರಹ್ಮಣ್ಯ ಧಾರೇಶ್ವರ ನಿಧನ

Thursday, April 25th, 2024
ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಉಡುಪಿ : ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ, ಕರಾವಳಿಯ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ(67) ಗುರುವಾರ ನಸುಕಿನ ಜಾವ ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸುಬ್ರಹ್ಮಣ್ಯ ಧಾರೇಶ್ವರರು,. ಹೊಸ ಪ್ರಸಂಗಗಳನ್ನು ನಿರ್ದೇಶಿಸುವ ಮೂಲಕ ರಂಗ ಮಾಂತ್ರಿಕ ಹೆಸರು ಪಡೆದಿದ್ದರು. ಯಕ್ಷಗಾನ ರಂಗ ತಜ್ಞ ಭಾಗವತರೆನಿಸಿದ್ದ ಅವರು ಸುಮಾರು 47 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧಾರೇಶ್ವರ, ಇಂದು ಮುಂಜಾನೆ […]