ಹಂಡೇಲು ಚಿನ್ನಾಭರಣ ದರೋಡೆ – ನಾಲ್ವರ ಬಂಧನ

Friday, November 27th, 2020
Handelu

ಮೂಡುಬಿದಿರೆ  : ಮನೆಯೊಂದಕ್ಕೆ ನುಗ್ಗಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, 22.860 ಗ್ರಾಂ ಚಿನ್ನಾಭರಣ ಹಾಗೂ ₹11 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಇಬ್ರಾಹಿಂ ಕಲಂದರ್ (38), ಮೊಹಮ್ಮದ್ ಹನೀಫ್ (48), ಶಿವಮೊಗ್ಗದ ಮೊಹಮ್ಮದ್ ಮುದಸ್ಸಿರ್ (20), ಮೂಡುಬಿದಿರೆಯ ಶಾಹೀಂ ಸಿದ್ದೀಕ್ (26) ಬಂಧಿತರು. ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಹಂಡೇಲು ಹತ್ತಿರದ ಸಾರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ನವೆಂಬರ್  11ರಂದು ಹಿಂಬದಿ ಬಾಗಿಲು ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಈ ಕುರಿತು […]

ಕುದ್ರೋಳಿ ಸಮೀಪ ಮೆಹೆಂದಿ ಕಾರ್ಯಕ್ರಮಕ್ಕೆ ಬಂದಿದ್ದ ರೌಡಿ ಶೀಟರ್ ಹತ್ಯೆ

Thursday, November 26th, 2020
Indrajeet

ಮಂಗಳೂರು : ರೌಡಿ ಶೀಟರ್ ವೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕುದ್ರೋಳಿ ಸಮೀಪದ ಕರ್ನಲ್‌ ಗಾರ್ಡನ್ ಬಳಿ ನಡೆದಿದೆ. ಬೊಕ್ಕಪಟ್ಣ ನಿವಾಸಿ ಇಂದ್ರಜಿತ್ (45) ಹತ್ಯೆಗೊಳಗಾದ ವ್ಯಕ್ತಿ ಎಂದು  ತಿಳಿದುಬಂದಿದೆ. ಈತ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಈತನ ಮೇಲೆ ತಲವಾರ್‌ ದಾಳಿ ನಡೆದಿತ್ತು ಎಂಬ ಮಾಹಿತಿ ಲಭಿಸಿದೆ. ಬುಧವಾರ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಗುರುವಾರ […]

ಶಾಂಭವಿ ನದಿಯಲ್ಲಿ ಮುಳುಗಿ ಓರ್ವ ಯುವತಿ ಸಮೇತ ನಾಲ್ವರ ದುರ್ಮರಣ

Tuesday, November 24th, 2020
shambhavi river

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಕಡಂದಲೆಯ ತುಲೆಮುಗೇರ್ ಎಂಬಲ್ಲಿ ಶಾಂಭವಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ. ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18) ಹಾಗೂ ಅರ್ಶಿತಾ( 20), ವೇಣೂರಿನ ಸುಬಾಸ್(19), ಬಜ್ಪೆ ಪೆರಾರದ ರವಿ […]

ಡಿ.ಕೆ. ಶಿವಕುಮಾರ್‌ ಪುತ್ರಿ ನಿಶ್ಚಿತಾರ್ಥ ಎಸ್‌.ಎಂ.ಕೃಷ್ಣ ಅವರ ಅಳಿಯನ ಜೊತೆ ನೆರವೇರಿತು

Thursday, November 19th, 2020
Amartya

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ತ್ಯ ಹೆಗ್ಡೆ ಅವರ ವಿವಾಹ ನಿಶ್ಚಿತಾರ್ಥವು ನವೆಂಬರ್ 19ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ನೆರವೇರಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರಾದ ಡಾ ಕೆ ಸುಧಾಕರ್, ಆರ್. ಅಶೋಕ್, ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಎರಡೂ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Sunday, November 15th, 2020
Narasimha

ಶ್ರೀ ನರಸಿಂಹ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆಯಲು ಮುಂದಾಗುತ್ತೀರಿ. ಈ ದಿನ ಆರ್ಥಿಕವಾಗಿ ಸ್ವಲ್ಪ ಪ್ರಮಾಣದ ನಷ್ಟಗಳು ಗೋಚರವಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನಲ್ಲಿ ಆದಷ್ಟು ನಿಗಾ ವಹಿಸುವುದು ಸೂಕ್ತ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಸ್ವಯಂಕೃತ […]

ಬಿಹಾರ ವಿಧಾನಸಭೆ ಚುನಾವಣೆ, ಬಿಜೆಪಿ ಮೊದಲ ಗೆಲುವು

Tuesday, November 10th, 2020
Murari

ಪಟ್ನಾ : ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ  ಹೊರಬೀಳುತ್ತಿದ್ದು, ಬಿಜೆಪಿ ಮೊದಲ ಗೆಲುವು ಕಂಡಿದೆ. ಕೆಯೊಟಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರಾರಿ ಮೋಹನ್ ಝಾ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಮುರಾರಿ ಸುಮಾರು 8,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಿರಿಯ ಮುಖಂಡರಾಗಿರುವ ಸಿದ್ದಿಕಿ, 2015ರಲ್ಲಿ ಆರ್‌ಜೆಡಿ-ಜೆಡಿಯು ಸರ್ಕಾರದಲ್ಲಿ ಸಚಿವರಾಗಿದ್ದರು. ದರ್ಭಾಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್‌ಜೆಡಿಯ ಲಲಿತ್ ಕುಮಾರ್ ಯಾದವ್, ತಮ್ಮ ಎದುರಾಳಿ ಜೆಡಿಯುದ ಫರಾಜ್ ಫತ್ಮಿ ಅವರನ್ನು ಸೋಲಿಸಿದ್ದಾರೆ. ದರ್ಭಾಂಗಾ ಕ್ಷೇತ್ರದಲ್ಲಿ […]

ಚೆನ್ನ ಫಾರೂಕ್ ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಬಂಧನ

Saturday, November 7th, 2020
Chenne Farooq

ಬಂಟ್ವಾಳ :  ಚೆನ್ನ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್ ಐ ಅವಿನಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೊಕ್ಕೊಟ್ಟು ಸಮೀಪದಿಂದ ಬಂಧಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ವಾಸವಾಗಿರುವ ಹಫೀಸ್ ಯಾನೆ ಅಪ್ಪಿ ಹಾಗೂ ಅಕ್ಕರಂಗಡಿ ನಿವಾಸಿ ಇರ್ಶಾದ್ ಬಂಧಿತ ಆರೋಪಿಗಳು. ಮೆಲ್ಕಾರ್ ಸಮೀಪ ಫಾರೂಕ್ ಯಾನೆ ಚೆನ್ನ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್.ಐ ಅವಿನಾಶ್ ನೇತೃತ್ವದ ತಂಡ ಗುರುವಾರ ಸಂಜೆ ಬಂಧಿಸಿದೆ. ಮೂಲತಃ ನಂದಾವರ ನಿವಾಸಿ […]

ಹೆಣ್ಣು ಮಗಳ ಮಾನ ಉಳಿಸಿದ ಆತ ಈಗ ಅಸಹಾಯಕ

Wednesday, November 4th, 2020
dinesh kottinja

ಮಂಗಳೂರು : ಕುಂಪನಮಜಲು ಎಂಬಲ್ಲಿ ಹಿಂದೂ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರಕ್ಕೆ ಮುಂದಾದ ನಾಲ್ವರು ನೀಚರ ಬಗ್ಗೆ ಪೊಲೀಸರಿಗೆ ಮಾಹಿತಿ  ನೀಡಿ ಮಾರಣಾಂತಿಕ ಹಲ್ಲೆ ಗೊಳಗಾದ ಫೋಟೋಗ್ರಾಫರ್ ದಿನೇಶ್ ಕೊಟ್ಟಿಂಜೆ ಈಗ ಎಲ್ಲವನ್ನು ಕಳಕೊಂಡು ಅಸಹಾಯಕರಾಗಿದ್ದಾರೆ. ಅಕ್ಟೊಬರ್ 28ರಂದು ಫೋಟೋ ತೆಗೆಯುವ ನೆಪದಲ್ಲಿ ಸ್ಟುಡಿಯೋಗೆ  ಬಂದು ದಿನೇಶ್ ಅವರ ಹೊಟ್ಟೆಗೆ ಇರಿದು, ತಲೆಯಭಾಗಕ್ಕೆ ಹೊಡೆದು, ಅವರ ಬಲಗೈ ಹೆಬ್ಬೆರಳನ್ನು ಕತ್ತರಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿ ಆರುದಿನಗಳ ವರೆಗೆ ಅವರು ಬದುಕುಳಿಯುವ ಭರವಸೆ ಇರಲಿಲ್ಲ. ಈಗ ಚೇತರಿಸಿಕೊಂಡರು ಅವರು ಮುಂದಿನಂತಾಗಲು ಸಾಧ್ಯವಿಲ್ಲ. ಅವರು ಕೆಲಸ […]

ಪುಣಚಾ ಪಾಲಾಸತ್ತಡ್ಕ ದಲ್ಲಿ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ದಾರುಣ ಸಾವು

Wednesday, November 4th, 2020
Tipper

ವಿಟ್ಲ: ಪುಣಚಾ ಗ್ರಾಮದ ಪಾಲಾಸತ್ತಡ್ಕ ಎಂಬಲ್ಲಿ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ದಾರುಣವಾಗಿ ಸಾವನ್ನಪ್ಪಿ,  ಕ್ಲೀನರ್ ಗೆ  ಗಾಯಗಳಾಗಿದೆ. ಪುಣಚಾ-ಪುತ್ತೂರು ರಸ್ತೆಯ ಪಾಲಾಸತ್ತಡ್ಕ ದಲ್ಲಿ ಬ್ರೇಕ್ ವೈಫಲ್ಲಕ್ಕೀಡಾದ ಟಿಪ್ಪರ್ ಲಾರಿ ರಸ್ತೆ ಬದಿ ಡಿಕ್ಕಿಹೊಡೆದು ಪಲ್ಟಿಯಾಗಿದೆ. ಅಪಘಾತದ ಸಂದರ್ಭ ಚಾಲಕ ರಫೀಕ್ ಟಿಪ್ಪರ್ ಲಾರಿಯಡಿಯಲ್ಲಿ ಸಿಲುಕಿ ಗಂಟೆಗಳ ಕಾಲ ಒದ್ದಾಡುತ್ತಿದ್ದರೂ ಟಿಪ್ಪರ್ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ದರೂ ಅಷ್ಟರಲ್ಲಾಗಲೇ ಚಾಲಕ ರಫೀಕ್ ಪ್ರಾಣ ಬಿಟ್ಟಿದ್ದಾರೆ. ಕ್ಲೀನರ್ ಗೆ ಸಣ್ಣ […]

ಮಂಗಳೂರು : ಕೇರಳ ಮೂಲದ ಉದ್ಯಮಿಯನ್ನು ಮನೆಯಲ್ಲೇ ಕೊಲೆಗೈದ ದುಷ್ಕರ್ಮಿಗಳು

Tuesday, November 3rd, 2020
Murder

ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 […]