ಕೊರೋನಾ ಮಹಾಮಾರಿಯ ಭಯ ಮತ್ತು ಚಿಂತೆಯನ್ನು ದೂರಮಾಡಲು ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

10:02 PM, Saturday, May 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

dyanaಇಂದು ಇಡೀ ದೇಶ ಕೊರೋನಾ ಮಹಾಮಾರಿಯ 2ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ, ನಿರಾಶೆ, ಆತ್ಮಹತ್ಯೆಯ ವಿಚಾರಗಳು ಇಂದು ಹೆಚ್ಚಾಗಿದೆ. ಪರಿಣಾಮವಾಗಿ ಕೊರೋನಾ ಸೋಂಕಿನ ಜೊತೆಗೆ ಅದರ ಭಯದಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಮನಸ್ಥೈರ್ಯ ಹೆಚ್ಚಿಸುವುದು, ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ನಿರ್ಭೀತಿಯಿಂದ ಪರಿಸ್ಥಿತಿಯನ್ನು ಎದುರಿಸುವುದು, ನಿಶ್ಚಿಂತೆಯಿಂದ ಇರುವುದು ಬಹಳ ಮುಖ್ಯವಾಗಿದೆ. ಅದರಿಂದ ನಾವು ಖಂಡಿತವಾಗಿ ಈ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಬಹುದು. ಧೈರ್ಯಂ  ಸರ್ವತ್ರ ಸಾಧನಂ ಎಂಬಂತೆ ಇಂತಹ ಸಂದರ್ಭದಲ್ಲಿ ಮನೋಧೈರ್ಯವನ್ನು ಹೆಚ್ಚಿಸುವುದು ಅತ್ಯಂತ ಅವಶ್ಯಕವಿದೆ. ಇಲ್ಲವಾದರೆ ಪರಿಸ್ಥಿತಿ ಭೀಕರವಾಗಬಹುದು ಅದಕ್ಕಾಗಿ ಮನೋಧೈರ್ಯವನ್ನು ಹೇಗೆ ಹೆಚ್ಚಿಸಬೇಕು ಮತ್ತು ಆ ಮೂಲಕ ನಮ್ಮ ಕುಟುಂಬ, ಪರಿವಾರ ಮತ್ತು ಪೂರ್ಣ ಸಮಾಜದ ರಕ್ಷಣೆ ಹೇಗೆ ಮಾಡಬೇಕು ಎಂಬ ಅಂಶಗಳ ಬಗ್ಗೆ ನೀಡಲಾಗಿದೆ.

ಮನಸ್ಥೈರ್ಯವನ್ನು ಹೆಚ್ಚಿಸಲು ಸಮ್ಮೋಹನ ಉಪಚಾರ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡುವುದು.
ಮನಸ್ಥೈರ್ಯವನ್ನು ಹೆಚ್ಚಿಸಲು ಸಮ್ಮೋಹನ ಉಪಚಾರ ಪದ್ಧತಿಯಂತೆ ಪ್ರತಿದಿನ ನಮ್ಮ ಮನಸ್ಸಿಗೆ ಯೋಗ್ಯ ಸ್ವಯಂಸೂಚನೆಯನ್ನು ನೀಡಿದರೆ, ಖಂಡಿತವಾಗಿಯೂ ಸದ್ಯದ ಸಂಕಟ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ ಮತ್ತು ಮನಸ್ಸು ಸ್ಥಿರವಾಗುತ್ತದೆ ಈ ದೃಷ್ಟಿಯಿಂದ ಮನೋಬಲ ಹೆಚ್ಚಾಗಿ ಸ್ಥಿರವಾಗಿರಲು ಅಂತರ್ಮನಸ್ಸಿಗೆ ಯಾವ ಸ್ವಯಂಸೂಚನೆಯನ್ನು ನೀಡಬಹುದು?, ಎನ್ನುವುದನ್ನು ಈಗ ನೋಡೋಣ. ಈ ಸ್ವಯಂಸೂಚನೆ ನೀಡುವ ಮೊದಲು ‘ಕೊರೋನಾ’ ಅವಧಿಯಲ್ಲಿ ಸರಕಾರವು ನೀಡಿದ ಎಲ್ಲ ಸೂಚನೆಗಳನ್ನು ಉದಾ. ನಿಯಮಿತವಾಗಿ ಮಾಸ್ಕ್ ಹಾಕುವುದು, ‘ಸೋಶಿಯಲ್ ಡಿಸ್ಟೆಂಸಿಂಗ್’ ಪಾಲಿಸುವುದು, ನಿಯಮಿತವಾಗಿ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು ಇತ್ಯಾದಿ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಪ್ರಸಂಗ : ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯುತ್ತೇನೆ’, ಎಂದು ಭಯವಾಗುವುದು.
ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ಸೋಂಕು ತಗುಲಿದರೆ ನಾನು ಸಾಯುತ್ತೇನೆ’, ಎಂದು ವಿಚಾರ ಬರುವುದೋ, ಆಗ ‘ಈ ರೋಗಾಣುವಿನ ಸೋಂಕು ತಗುಲಿರುವ ಶೇ. ೮೦ ರಷ್ಟು ರೋಗಿಗಳ ರೋಗದ ಸ್ವರೂಪವು ಸೌಮ್ಯವಾಗಿರುತ್ತದೆ’, ಎನ್ನುವುದು ನನಗೆ ಗಮನಕ್ಕೆ ಬಂದು ನಾನು ಸಕಾರಾತ್ಮಕವಾಗಿರುತ್ತೇನೆ ಮತ್ತು ಕುಟುಂಬದವರು, ಹಿತಚಿಂತಕರು ಹಾಗೂ ಸರಕಾರಿ ಇಲಾಖೆಗಳು ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುತ್ತೇನೆ.

ಪ್ರಸಂಗ : ಔಷಧೋಪಚಾರವನ್ನು ಮಾಡಿಯೂ ಮಗಳ ನೆಗಡಿ/ಜ್ವರ ಕಡಿಮೆಯಾಗದ ಕಾರಣದಿಂದ ಅವಳ ಬಗ್ಗೆ ಚಿಂತೆಯೆನಿಸುವುದು.
ಸ್ವಯಂಸೂಚನೆ : ಯಾವಾಗ ಮಗಳಿಗೆ ಬಹಳಷ್ಟು ದಿನಗಳಿಂದ ನೆಗಡಿ / ಜ್ವರ ಇದ್ದಾಗ ‘ಪ್ರತಿಯೊಂದು ನೆಗಡಿ/ಜ್ವರ ಕೊರೋನಾ ರೋಗಾಣುವಿನ ಸೋಂಕಿನಿಂದ ಆಗಿರುವುದಿಲ್ಲ’, ಎಂದು ನನ್ನ ಮನಸ್ಸಿಗೆ ಅರಿವಾಗುವುದು ಮತ್ತು ದೇವರ ಮೇಲೆ ಶ್ರದ್ಧೆಯಿಟ್ಟು ನಾನು ವೈದ್ಯರು ತಿಳಿಸಿದಂತೆ ಅವಳಿಗೆ ಔಷಧಿಗಳನ್ನು ನೀಡುತ್ತೇನೆ ಮತ್ತು ಅವಳ ಸ್ಥಿತಿಯನ್ನು ಆಯಾಯ ಸಮಯದಲ್ಲಿ ವೈದ್ಯರಿಗೆ ತಿಳಿಸುತ್ತೇನೆ.

ಪ್ರಸಂಗ : ‘ಕೊರೋನಾ ರೋಗಾಣುವಿನ ಸಾಂಕ್ರಾಮಿಕತೆಯಿಂದ ನನ್ನ ಕುಟುಂಬದವರು ನನ್ನನ್ನು ಭೇಟಿಯಾಗಲು ಪ್ರಯಾಣ ಮಾಡಲಾಗುತ್ತಿಲ್ಲ’, ಎಂದು ಚಿಂತೆಯಾಗುವುದು
ಸ್ವಯಂಸೂಚನೆ : ಯಾವಾಗ ‘ನನ್ನನ್ನು ಭೇಟಿಯಾಗಲು ನನ್ನ ಕುಟುಂಬದವರಿಗೆ ಪ್ರಯಾಣ ಮಾಡಲಾಗುವುದಿಲ್ಲ’, ಎಂಬ ವಿಚಾರದಿಂದ ಚಿಂತೆಯೆನಿಸುವುದೋ ಆಗ ’ಸಾಂಕ್ರಾಮಿಕತೆಯ ಕಾಲದಲ್ಲಿ ಎಲ್ಲರ ಸುರಕ್ಷತೆಗಾಗಿ ಪ್ರಯಾಣವನ್ನು ಮಾಡದಿರುವುದೇ ಒಳ್ಳೆಯದಿದೆ ಮತ್ತು ಇದು ತಾತ್ಕಾಲಿಕ ಸ್ಥಿತಿಯಾಗಿದೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ‘ನನ್ನ ಮತ್ತು ಕುಟುಂಬದವರಿಗೆ ಕೊರೋನಾ ರೋಗಾಣುವಿನ ಸೋಂಕು ತಗಲಬಾರದು’, ಎಂದು ಸರಕಾರವು ಸುರಕ್ಷತೆಯ ದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಕಾಳಜಿಯನ್ನು ವಹಿಸಿಕೊಳ್ಳುತ್ತೇನೆ.

ಸ್ವಯಂಸೂಚನೆಯನ್ನು ನೀಡುವ ಪದ್ಧತಿ
ನಮ್ಮ ಮನಸ್ಸಿನಲ್ಲಿ ಮೇಲಿನಂತೆ ಯಾವ ಅಯೋಗ್ಯ ವಿಚಾರಗಳಿಂದ ಒತ್ತಡ ಅಥವಾ ಚಿಂತೆಯಾಗುತ್ತದೆಯೋ, ಆ ವಿಚಾರಗಳ ಮೇಲೆ 15 ದಿನಗಳ ಅಥವಾ ವಿಚಾರ ಕಡಿಮೆಯಾಗುವ ವರೆಗೆ ಸಂಬಂಧಪಟ್ಟ ಸ್ವಯಂಸೂಚನೆಯನ್ನು ನೀಡಬೇಕು. ಈ ಸ್ವಯಂಸೂಚನೆಯನ್ನು ದಿನದಲ್ಲಿ5 ಬಾರಿ ನೀಡಬೇಕು. ಒಂದು ಬಾರಿಗೆ ಒಂದು ಸ್ವಯಂಸೂಚನೆಯನ್ನು 5 ಸಲ ಅಂತರ್ಮನಸ್ಸಿಗೆ ನೀಡಬೇಕು.

ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಿದರೆ ಅಂತರ್ಮನದಲ್ಲಿ ಸೂಚನೆಗಳ ಸಂಸ್ಕಾರವಾಗಿ ‘ಮನಸ್ಸಿನಲ್ಲಿರುವ ಒತ್ತಡ ಅಥವಾ ಚಿಂತೆಯ ವಿಚಾರಗಳು ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತದೆ’. ಮನಸ್ಸಿನಲ್ಲಿ ಬರುವ ನಿರರ್ಥಕ ವಿಚಾರಗಳಿಂದ ಸ್ವಯಂಸೂಚನೆಗಳನ್ನು ಏಕಾಗ್ರತೆಯಿಂದ ಕೊಡಲು ಆಗದಿದ್ದರೆ ಸ್ವಲ್ಪ ದೊಡ್ಡ ಸ್ವರದಲ್ಲಿ ಸ್ವಯಂಸೂಚನೆಯ ಸತ್ರವನ್ನು ನೀಡಬಹುದು ಅಥವಾ ಕಾಗದದ ಮೇಲೆ ಬರೆದಿರುವ ಸ್ವಯಂಸೂಚನೆಯನ್ನು ಓದಬಹುದು.

– ಪೂಜನೀಯ ಸಂದೀಪ ಆಳಶಿ, ಸನಾತನ ಸಂಸ್ಥೆ.
ದೂ. ಕ್ರ. 7204082609

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English