ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರಿಂದ ಭವ್ಯ ಭಾರತ ನಿರ್ಮಾಣಕ್ಕೆ ಸಂದೇಶ

Monday, August 15th, 2022
Veerendra-Hegde

ಉಜಿರೆ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ರಕ್ತಪಾತವಿಲ್ಲದೆ, ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು ಎಂದು ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಯವರು ಹೇಳಿದರು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತ ವಿಶ್ವದ ಶ್ರೇಷ್ಠ ರಾಷ್ಟ್ರವಾಗಿದ್ದು ನಾವು ಭಾರತೀಯರು ಎಂದು ಹೇಳಲು ಹೆಮ್ಮೆ ಪಡಬೇಕಾಗಿದೆ ಎಂದು ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ […]

ಬಾರ ಗೆಳತಿ, ಯಾಕ ಅಳತಿ

Sunday, July 31st, 2022
Bara Gelati

ಬಾರ ಗೆಳತಿ, ಯಾಕ ಅಳತಿತಡವಾಯ್ತು ಶಾಲೆಗೆಹೋಗೋಣ ಬಾನಾವು ಹೋಗೋಣ ಬಾ.ನಾವು ಹೋಗೋಣ ಬಾ….. ಗುರುವಿಗೆ ನಮಿಸುತ್ತಪಾಠವನು ಕಲಿಯುತ್ತಾಗೆಳೆಯರ ಜೊತೆಗೂಡಿಆಡೋಣ ಬಾನಾವು ಆಡೋಣ ಬಾ….. ನಾಡಿನ ವೀರರಚೆರಿತ್ರೆಯ ಓದಿಅವರೆಂತೆ ನಾವುಆಗೋಣ ಬಾನಾವು ಆಗೋಣ ಬಾ….. ಶಾಲೆಯ ಸ್ವಚ್ಛತೆನಮ್ಮಯಾ ಹೊಣೆ,ಗಿಡ, ಸಸಿಗಳಿಗೆನೀರುಣಿಸೋಣ ಬಾನಾವು ನೀರುಣಿಸೋಣ ಬಾ….. ಶಾಲೆಯಲಿ ಕಲಿತನೀತಿ ಪಾಠಗಳಮನದಲ್ಲಿರಿಸಿ,ಮನೆ ಮಂದಿಗೆಲ್ಲತಿಳಿಸೋಣ ಬಾನಾವು ತಿಳಿಸೋಣ ಬಾ….. ✍ ಮಂಜುನಾಥ ಗುತ್ತೇದಾರ.ಸುಂಕೇಶ್ವರಹಾಳ, (ದೇವಸೂಗೂರು)ಶಕ್ತಿನಗರ. – 584170.ತಾ//ಜಿ// ರಾಯಚೂರು.

ನಾ ನಿನ್ನ ಉಸಿರು

Sunday, July 31st, 2022
Manjunath Guttedar

ನನ್ನ ಕಡೆಯದಿರು ಮೂರ್ಖಮುಂದಿಹುದು ನಿನಗೆ ನರಕ,ನಾನಿದ್ದರೆ ನಿನಗೆ ಉಸಿರುನಾನಿದ್ದರೆ ಜಗವೇ ಹಸಿರು….. ಧಣಿದವರಿಗೆ ನೆರಳಾಗುವೆಹಸಿದವರಿಗೆ ಹಣ್ಣು ನೀಡುವೆಖಗ – ಮೃಗಗಳಿಗೆನಾ ಆಸರೆಯ ಗೂಡಾಗುವೆ…. ಮಕ್ಕಳಿಗೆಲ್ಲ ಮರಕೋತಿಜೋಕಾಲಿ, ಕಣ್ಣಾಮುಚ್ಚಾಲೆಆಟವಾಡಿ ಖುಷಿಪಡಲುನಾನು ಬೇಕಾಗಿರುವೆ….. ನನ್ನನ್ನು ಕಡಿದರೆನಿನಗಿಲ್ಲ ಉಳಿಗಾಲ,ಮುನಿಯುವ ಮಳೆರಾಯರವಿಯು ತರುವ ಉರಿಯ.. ನನ್ನನ್ನು ನೀ ಹರಸುನಿತ್ಯವೂ ನೀ ಸಂಭ್ರಮಿಸು,ನನ್ನ ಸಂತತಿ ಬೆಳೆಸುನಿನ್ನ ಬಾಳಾಗುವುದು ಸೊಗಸು…. ✍ಮಂಜುನಾಥ ಗುತ್ತೇದಾರ.ಸಾ// ದೇವಸೂಗೂರು.ತಾ// ಜಿ// ರಾಯಚೂರು.ಮೋ.ನಂ. 9632759691ಇಮೇಲ್ manjunatha071@gmail.

ಸರಕಾರಿ ವಾಹನದ ಮಿರರ್ ಪುಡಿ ಮಾಡಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನ, ವ್ಯಕ್ತಿ ಬಂಧನ

Saturday, July 16th, 2022
ZP-Car

ಬಂಟ್ವಾಳ : ಸರಕಾರಿ ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನದ ಮಿರಾರ್ ಪುಡಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಸಜೀಪ ಕೊಣೆಮಾರ್ ನಿವಾಸಿ ಸಂಶುದ್ದೀನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಅವರು, ಪುತ್ತೂರಿನಲ್ಲಿ ನಡೆಯುವ ಮೀಟಿಂಗ್ ನಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯತ್ ನ ಮೂವರು ಅಧಿಕಾರಿಗಳನ್ನು ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಕರೆದುಕೊಂಡು ಹೋಗುವ ವೇಳೆ […]

ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ಆರಂಭ

Saturday, July 9th, 2022
Venkataramana

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದ್ದು ಶನಿವಾರ ಶ್ರೀದೇವರಿಗೆ ಪಂಚಾಮೃತ , ಶತಕಲಶಾಭಿಷೇಕ , ಗಂಗಾಭಿಷೇಕ ನೆರವೇರಿತು , ಮಧ್ಯಾನ್ಹ ಮಹಾ ಪೂಜೆ ಬಳಿಕ ಸಮಾರಾಧನೆ ನಡೆಯಿತು . ಈ ಸಂದರ್ಭದಲ್ಲಿ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ […]

ಕಿನ್ನಿಗೋಳಿ ಯುಗಪುರುಷದಲ್ಲಿ ಕಥಾಬಿಂದು ಪ್ರಕಾಶನದ 29ನೇ ಕೃತಿ ಬಿಡುಗಡೆ, ಸಾಧಕರಿಗೆ ಪ್ರಶಸ್ತಿ

Monday, June 27th, 2022
Kathabindu

ಮಂಗಳೂರು : ಯುಗಪುರುಷ ಕಿನ್ನಿಗೋಳಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಪಿ. ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 25/06/2022 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಶ್ರೀಪತಿ ಭಟ್, ಶ್ರೀ ಭುವನಾಭಿರಾಮ ಉಡುಪ, ಕೊಳಚಿಪ್ಪು ಶ್ರೀ ಗೋವಿಂದ ಭಟ್, ಶ್ರೀ ಗಂಗಾಧರ ಗಾಂಧಿ, ಡಾ. ಸುರೇಶ ನೆಗಳಗುಳಿ, ಶ್ರೀ ರೇಮೆಂಡ್ ಡಿಕೊನ ತಾಕೊಡೆ […]

ಸಾಲ ಮರು ಪಾವತಿಸಿದರೂ, ಕಂತು ಬಾಕಿಯಿದೆ ಎಂದು ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ ಯೂನಿಯನ್ ಬ್ಯಾಂಕಿಗೆ ದಂಡ

Sunday, May 15th, 2022
car-loan

ಮಂಗಳೂರು : ವ್ಯಕ್ತಿಯೊಬ್ಬರು ಬ್ಯಾಂಕ್‌ನಿಂದ ವಾಹನ ಸಾಲ ಪಡೆದು ಸರಿಯಾಗಿ ಸಾಲದ ಕಂತು ಮರುಪಾವತಿ ಮಾಡಿದ್ದರೂ ಖಾತೆಯನ್ನು ಎನ್‌ಪಿಎ ಎಂದು ಘೊಷಿಸಿ, ವಾಹನವನ್ನೂ ಮಾರಾಟ ಮಾಡಿದ ಬ್ಯಾಂಕ್‌ನ ಕ್ರಮವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯ ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟು, ದಂಡ ವಿಧಿಸಿದೆ. ನ್ಯಾಯಾಲಯ ಬ್ಯಾಂಕ್‌ ಶಾಖೆಯು ದಾನೇಶ್‌ ಅವರಿಗೆ ನಷ್ಟ ಪರಿಹಾರವಾಗಿ 1 ಲಕ್ಷ ರೂ. ಮೊತ್ತಕ್ಕೆ ಶೇ. 10 ಬಡ್ಡಿ ಸೇರಿಸಿ ನೀಡುವಂತೆ ತೀರ್ಪು ನೀಡಿದ್ದಾರೆ. ಕಾರ್ಪೋರೆಶ‌ನ್‌ ಬ್ಯಾಂಕ್‌ ಕಾವೂರು ಶಾಖೆಯಿಂದ […]

ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು ಬೇಗನೇ ಜಾಗೃತವಾಗುವುದು

Tuesday, June 30th, 2020
Guru Poornima

ಅ.ಅರ್ಥ ಕೃಪೆ ಶಬ್ದವು ‘ಕೃಪ್’ ಧಾತುವಿನಿಂದ ನಿರ್ಮಾಣವಾಗಿದೆ. ‘ಕೃಪ್’ ಎಂದರೆ ದಯೆ ತೋರಿಸುವುದು ಮತ್ತು ಕೃಪೆ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ. ಆ.ಮಹತ್ವ ಬೇರೆಬೇರೆ ಯೋಗಮಾರ್ಗಗಳಿಂದ ಸಾಧನೆ ಮಾಡುವುದರಲ್ಲಿ ಅನೇಕ ವರ್ಷಗಳನ್ನು ವ್ಯರ್ಥಗೊಳಿಸದೇ, ಅಂದರೆ ಈ ಎಲ್ಲಾ ಮಾರ್ಗಗಳನ್ನು ಬದಿಗಿರಿಸಿ, ಗುರುಕೃಪೆಯನ್ನು ಬೇಗನೇ ಹೇಗೆ ಪಡೆಯುವುದು ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದುದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು […]

ರಿಕ್ಷಾ ಚಾಲಕ, ಪಡೀಲ್ ನಿವಾಸಿ ಮುಖೇಶ್ ಮೇಲೆ ಹಲ್ಲೆ

Thursday, July 7th, 2016
Mukhesh

ಮಂಗಳೂರು: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಪಡೀಲ್ ಭಜರಂಗದಳದ ಸದಸ್ಯನೂ ಆಗಿರುವ ಯುವಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಫೈಸಲ್‍ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಪಡೀಲ್ ನಿವಾಸಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ರಿಕ್ಷಾದಲ್ಲಿ ಫೈಸಲ್‍ನಗರಕ್ಕೆ ಬಾಡಿಗೆಗೆ ತೆರಳಿದ್ದ. ಈ ವೇಳೆ ರಸ್ತೆಯಲ್ಲಿ ಶೇಖರಣೆಯಾಗಿದ್ದ ಕೆಸರು ನೀರು ರಸ್ತೆ ಬದಿ ನಿಂತಿದ್ದ ಯುವಕನೋರ್ವನ ಮೇಲೆ ಎರಚಿದೆ. ಇದನ್ನೇ ನೆಪವಾಗಿರಿಸಿದ ಸ್ಥಳೀಯ ಯುವಕರು ಮುಖೇಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ […]

ಸರ್ವೀಸ್ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು

Thursday, July 7th, 2016
Sarfaraj

ಮಂಗಳೂರು: ಸರ್ವೀಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಗರದ ಮೋತಿಮಹಲ್ ಹೋಟೆಲ್ ಬಳಿ ನಡೆದಿದೆ. ಗೋವಾ ಮೂಲದ ಸರ್ಫರಾಜ್(34) ಮೃತ ವ್ಯಕ್ತಿ. ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ವೇಗವಾಗಿ ಬರುತ್ತಿದ್ದ ಎನ್ಎಸ್‌ ಬಸ್ ಮೋತಿ ಮಹಲ್ ಬಳಿ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸರ್ಫರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ , ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಂಗಳೂರಿನ ಎಕ್ಕೂರು ಗ್ರಾಮದ ಯುವತಿಯನ್ನು ಮದುವೆಯಾಗಿದ್ದ […]