ಕರಾವಳಿ ಉತ್ಸವ ಮೈದಾನಿನಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

3:50 PM, Saturday, August 27th, 2011
Share
1 Star2 Stars3 Stars4 Stars5 Stars
(5 rating, 1 votes)
Loading...

National Consumer Fair/ ರಾಷ್ಟ್ರೀಯ ಗ್ರಾಹಕರ ಮೇಳ

ಮಂಗಳೂರು : ನಗರದ ಕರಾವಳಿ ಉತ್ಸವ ಮೈದಾನಿನಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಹಕರ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್‌ ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಬೃಹತ್‌ ಗ್ರಾಹಕ ಮೇಳವನ್ನು ಗ್ರಾಹಕರಿಗೆ ಮನರಂಜನೆ ನೀಡುವ ಹಾಗೂ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ನೆರವಾಗುವಂತೆ ರೂಪಿಸಬೇಕು ಎಂದರು. ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಈ ಗ್ರಾಹಕರ ಮೇಳವನ್ನು ಏರ್ಪಡಿಸಲಾಗುತ್ತಿದೆ. ಈ ರೀತಿಯ ಉಪಯುಕ್ತ ಮೇಳಗಳನ್ನು ಪ್ರತಿವರ್ಷವೂ ಏರ್ಪಡಿಸುವ ಅಗತ್ಯವಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಆಕರ್ಷಿಸಲಿ ಎಂದು ಸಚಿವರು ಹಾರೈಸಿದರು.

ಉದ್ಘಾಟನೆಯ ಸಮಾರಂಭದಲ್ಲಿ ಮಾಜಿ ಮೇಯರ್‌ ಶಂಕರ್‌ ಭಟ್‌, ಮಣಿಪಾಲ ಮಿಡಿಯಾ ನೆಟ್‌ವರ್ಕ್‌ನ ಸಹ ಉಪಾಧ್ಯಕ್ಷ ಆನಂದ ಕೆ. ಉಪಸ್ಥಿತರಿದ್ದರು.

ಉದ್ಘಾಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಗ್ರಾಹಕರ ಮೇಳದ ನಿರ್ದೇಶಕ ಗೌತಮ್‌ ಎ. ಅವರು, ಈ ಗ್ರಾಹಕ ಮೇಳದಲ್ಲಿ ನೂರಕ್ಕೂ ಅಧಿಕ ಮಳಿಗೆಗಳಿವೆ.ಕುಟುಂಬದ ಎಲ್ಲ ಸದಸ್ಯರಿಗೂ ಖುಷಿ ನೀಡುವಂತಹ ರೀತಿಯಲ್ಲಿ ಈ ಶಾಪಿಂಗ್‌ ಮತ್ತು ಮನರಂಜನಾ ಮೇಳವನ್ನು ರೂಪಿಸಲಾಗಿದೆ. ಈ ಬಾರಿಯ ಮೇಳದಲ್ಲಿ ಹಲವಾರು ವಿಶಿಷ್ಟ ಆಟಗಳ ಜೊತೆಗೆ ಬೃಹತ್‌ ಕೃತಕ ಕೊಳವನ್ನು ನಿರ್ಮಿಸಿ ದೋಣಿವಿಹಾರವನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

National Consumer Fair/ ರಾಷ್ಟ್ರೀಯ ಗ್ರಾಹಕರ ಮೇಳ

ಗ್ರಾಹಕ ಮೇಳದಲ್ಲಿ ಅಟೋಮೊಬೈಲ್‌, ಗೃಹ ಬಳಕೆ ಉತ್ಪನ್ನಗಳು, ಪೀಠೊಪಕರಣಗಳು, ಅಡುಗೆ ಮನೆ ಉತ್ಪನ್ನಗಳು, ಸೋಲಾರ್‌ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್‌ ಮೆಟೀರಿಯಲ್ಸ್‌, ಫ್ಯಾಶನ್‌ ಪಾದರಕ್ಷೆಗಳು, ಆರೋಗ್ಯ ಮತ್ತು ವ್ಯಾಯಾಮ ಸಾಧನಗಳು, ಆಟಿಕೆಗಳು, ಪುಸ್ತಕಗಳು ಮತ್ತು ಸ್ಟೇಶನರಿ, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಇಲ್ಲಿ ಲಭ್ಯ ಇವೆ. ಅಂತಾರಾಷ್ಟ್ರೀಯ ಗುಣಮಟ್ಟದ ವಿಡಿಯೋಕಾನ್‌, ಫಿಯಟ್‌, ಆಚಿ, ವಿಗಾರ್ಡ್‌, ಗೋದ್ರೆಜ್‌ ಮುಂತಾದ ಕಂಪೆನಿಗಳ ಉತ್ಪನ್ನಗಳು ಪ್ರದರ್ಶನದಲ್ಲಿವೆ ಎಂದು ಅವರು ವಿವರಿಸಿದರು.

ಇದೇ ಮೊದಲ ಬಾರಿ ನಗರದಲ್ಲಿ ಮನರಂಜನೆಗಾಗಿ ವಿಶೇಷ ಬೃಹತ್‌ ಕೃತಕ ಕೊಳವನ್ನು ನಿರ್ಮಿಸಿ ಇದರಲ್ಲಿ ದೋಣಿವಿಹಾರ ಕಲ್ಪಿಸಲಾಗಿದೆ. ಡ್ರಾಗನ್‌ ಟ್ರೈನ್‌, ಟೊರಾ-ಟೊರಾ, ಜಂಪಿಂಗ್‌ ಫ್ರಾಗ್‌, ಡ್ಯಾಶಿಂಗ್‌ ಕಾರ್‌, ಏರೋಪ್ಲೇನ್‌, ಟೈಟಾನಿಕ್‌, ಹಾಸ್‌ ಮೆರ್ರಿ ಗ್ರೌಂಡ್ಸ್‌, ಫಿಶ್‌ ಮೆರ್ರಿ, 3 ಡಿಶೋ ಸೇರಿದಂತೆ ಸುಮಾರು 25 ರೀತಿಯ ಅಮ್ಯೂಸ್‌ಮೆಂಟ್‌ ಐಟಂಗಳು ಮನತಣಿಸಲು ಸಿದ್ಧವಾಗಿವೆ. ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಹಾಗೂ ಯುರೋಪ್‌ನ ಅತ್ಯಾಧುನಿಕ ಅಮ್ಯೂಸ್‌ಮೆಂಟ್‌ಗಳಾದ ಡ್ರಾಗನ್‌, ಕಂಟ್ರಿ ಕಾರ್‌, ಬ್ಯಾಟರಿ ಕಾರ್‌ ಬುಲ್‌ ಮತ್ತು ಇನ್ನು ಹಲವಾರು ಅಮ್ಯೂಸ್‌ಮೆಂಟ್‌ಗಳನ್ನು ಅಳವಡಿಸಲಾಗಿದೆ. ಸಾಹಸಪ್ರವೃತ್ತಿಯವರು ರೋಡಿಯೋ ಬುಲ್‌, ಜೈರೋಸ್ಕೋಪ್‌ ಇತ್ಯಾದಿಗಳಲ್ಲಿ ಸವಾರಿ ಮಾಡಬಹುದು ಎಂದರು.

ಪ್ರತಿದಿನ ಸಂಜೆ 4ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ತೆರೆದಿರುವುದು. ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ದರ ಲಭ್ಯವಿದೆ. ಸ್ವೆಶಲ್‌ ಪ್ಯಾಕೇಜ್‌ ಟಿಕೆಟ್‌ಗಳೂ ಟಿಕೆಟ್‌ ಕೌಂಟರ್‌ನಲ್ಲಿ ಲಭ್ಯವಿರುತ್ತದೆ ಎಂದರು.

1 ಪ್ರತಿಕ್ರಿಯೆ - ಶೀರ್ಷಿಕೆ - ಕರಾವಳಿ ಉತ್ಸವ ಮೈದಾನಿನಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

  1. spfkhglc, krufxustpxce.com/

    3KBhbb qgizrenrpiym, [url=http://srilttdsbsxj.com/]srilttdsbsxj[/url], [link=http://rqjaomcfxfjd.com/]rqjaomcfxfjd[/link], http://luxxqwqvpgpw.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English