ಕತಾರ್ ಕರ್ನಾಟಕ ಸಂಘದಿಂದ 86 ಸಾಧಕರಿಗೆ ಸನ್ಮಾನ

Thursday, January 12th, 2023
Share
mahesh gowda

ದೋಹಾ ಕತಾರ್: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಮಹೇಶ್ ಗೌಡ ಅವರನ್ನು ಭವ್ಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

2023 ರ ಜನವರಿ 6-8 ರ 3 ದಿನಗಳ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ 86 ಸಾಧಕರಿಗೆ ಸನ್ಮಾನಿಸಲಾಯಿತು. ಜನವರಿ 6 ರಂದು ನಡೆದ ಈ ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಾ. ಮಹೇಶ್ ಜೋಶಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ಕನ್ನಡದ ಖ್ಯಾತ ನಟ ಶ್ರೀ. ರಮೇಶ್ ಅರವಿಂದ್ ಅವರು ಉಪಸ್ಥಿತರಿದ್ದರು.

ಹೊರನಾಡಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಕ್ರಿಯ ಸೇವೆಗಾಗಿ ಶ್ರೀ ಮಹೇಶ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಳೆದ 14 ವರ್ಷಗಳಿಂದ ವಿದೇಶಿ ನೆಲದಲ್ಲಿ ಕನ್ನಡ ಸಂಸ್ಕ್ರತಿ, ಭಾಷೆಯನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಮತ್ತು ವಾರಾಂತ್ಯದ ಕನ್ನಡ ಕಲಿ ತರಗತಿಗಳು, ಕತಾರ್‌ನಲ್ಲಿರುವ ಭಾರತೀಯ ಶಾಲೆಗಳಿಗೆ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ನಿರಂತರ ಮನವಿಯೊಂದಿಗೆ ಎರಡು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು, ಹಾಗೂ ಕರ್ನಾಟಕ ಸರ್ಕಾರದ ಹೊರದೇಶಗಳ ಕಾರ್ಯಕ್ರಮಗಳಲ್ಲಿ ಬೆನ್ನೆಲುಬಾಗಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ ತಿರುಮೇನಹಳ್ಳಿ ಗ್ರಾಮದ ಪ್ರಸಿದ್ಧ ಕೃಷಿ ಕುಟುಂಬಕ್ಕೆ ಸೇರಿದವರಾದ ಖ್ಯಾತ ಕೃಷಿಕ ದಿವಂಗತ ಎನ್ ರಾಮಯ್ಯ ಮತ್ತು ಕಮಲಮ್ಮ ದಂಪತಿಗಳಿಗೆ ಜನಿಸಿದರು. ಅವರು ತಮ್ಮ ಪತ್ನಿ ಸುಮಾ ಮಹೇಶ್ ಮತ್ತು ಮಗಳು ದಿಯಾ ಮಹೇಶ್ ಮತ್ತು ಅರ್ಜುನ್ ಗೌಡ ಅವರೊಂದಿಗೆ ಕತಾರ್‌ನಲ್ಲಿ ನೆಲೆಸಿದ್ದಾರೆ, ಶ್ರೀಮತಿ ಸುಮಾ ಅವರು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಸಕ್ರಿಯ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕರ್ತೆಯೂ ಆಗಿದ್ದಾರೆ

ಕತಾರ್‌ನಲ್ಲಿ ಸಹಾಯದ ಅಗತ್ಯವಿರುವ ನಮ್ಮ ಭಾರತೀಯರು ಮತ್ತು ಕನ್ನಡಿಗರನ್ನು ಬೆಂಬಲಿಸಲು ಸಾಮಾಜಿಕ ಸೇವೆಗಳಲ್ಲಿ ತೊಡಗಿರುವ ಸಹಾನುಭೂತಿಯ ಸಮಾಜ ಸೇವಕ. ಮಹಾಮಾರಿ ಕರೋನಾ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದರು, ಈ ಕಾರ್ಯಕ್ಕೆ ಕತಾರ್‌ನ ಭಾರತದ ರಾಯಭಾರಿಯಿಂದ “ಕರೋನಾ ವಾರಿಯರ್” ಎಂದು ಬಿರುದು ಪಡೆದ ಹೆಗ್ಗಳಿಕೆ. ಅದೇ ಭವ್ಯ ವೇದಿಕೆಯಲ್ಲಿ ಕನ್ನಡದ ಖ್ಯಾತ ನಟ ಶ್ರೀ. ರಮೇಶ್ ಅರವಿಂದ್ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.

ಮೂವರು ಹೆಂಡಿರಿಂದ 60 ಮಕ್ಕಳನ್ನು ಪಡೆದ ಪಾಕಿಸ್ತಾನಿ ಪ್ರಜೆ, ನಾಲ್ಕನೇ ಮದುವೆಗೆ ಸಿದ್ಧತೆ !

Wednesday, January 4th, 2023
Share

ಲಾಹೋರ್ : 50ರ ಹರೆಯದ ಪಾಕಿಸ್ತಾನಿ ಪ್ರಜೆ ಜಾನ್ ಮುಹಮ್ಮದ್ ಖಿಲ್ಜಿ ಜನವರಿ 1ರಂದು ಭಾನುವಾರ ಬೆಳಗ್ಗೆ 60ನೇ ಮಗುವಿಗೆ ತಂದೆಯಾಗಿದ್ದಾನೆ. ಅಲ್ಲದೆ, ತನ್ನ ಗುರಿ 100 ಮಕ್ಕಳನ್ನು ಪಡೆಯುವುದು ಎಂದು ಆತ ಹೇಳಿಕೊಂಡಿವುದು ವರದಿಯಾಗಿದೆ.

60ನೇ ಮಗುವಿಗೆ ಹಾಜಿ ಖುಶಾಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಾಕಿಸ್ತಾನದ ಕ್ವೆಟ್ಟಾದ ಜಾನ್ ಮುಹಮ್ಮದ್ ಅವರಿಗೆ ಮೂವರು ಹೆಂಡತಿಯರಿದ್ದಾರೆ ಮತ್ತು ನಾಲ್ಕನೆಯವಳನ್ನು ಮದುವೆಯಾಗಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ನಾಲ್ಕನೆಯವಳನ್ನು ಹುಡುಕುತ್ತಿದ್ದೇನೆ ಎಂದು ಖಿಲ್ಜಿ ಹೇಳಿದರು.

ಜಾನ್ ಮುಹಮ್ಮದ್ ಅವರ ಹಿರಿಯ ಮಗಳು ಶಗುಫ್ತಾ ನಸ್ರೀನ್ ಅವರಿಗೆ ಈಗ 22 ವರ್ಷವಂತೆ, ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುತ್ತಾರೆ. ಕೆಲ ವರ್ಷಗಳ ಹಿಂದೆ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಶಗುಫ್ತಾ ಕೂಡ ಗಂಭೀರವಾಗಿ ಗಾಯಗೊಂಡಿದ್ದರು.

ಜಾನ್ ಮುಹಮ್ಮದ್ ಖಿಲ್ಜಿಯ ಐದು ಮಕ್ಕಳು ಸಾವನ್ನಪ್ಪಿದ್ದರೆ, 55 ಮಂದಿ ಜೀವಂತವಾಗಿದ್ದಾರೆ. ಈಗ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆ ಮತ್ತು ಹಣದುಬ್ಬರದಿಂದಾಗಿ ವೆಚ್ಚಗಳು ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.

ಜಾನ್ ಮುಹಮ್ಮದ್ ಬಲೂಚಿಸ್ತಾನ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿಯಾದ ಕ್ವೆಟ್ಟಾದ ಪೂರ್ವ ಹೊರವಲಯದಲ್ಲಿರುವ ಮಣ್ಣಿನ ಗೋಡೆಯ ಇಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 2016 ರಲ್ಲಿ ಜನಗಣತಿ ಅಧಿಕಾರಿಗಳು ಅವರ ಮಕ್ಕಳ ಪಟ್ಟಿಯನ್ನು ಪಡೆದಾಗ ಜಾನ್ ಮುಹಮ್ಮದ್ ಅವರು ಬೆಳಕಿಗೆ ಬಂದರು. ಅವರ ಪುತ್ರಿಯರು ಮತ್ತು ಪುತ್ರರ ದೀರ್ಘ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇದು ದೇವರ ಆಶೀರ್ವಾದ ಎಂದು ಜಾನ್ ಮುಹಮ್ಮದ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು 100 ಮಕ್ಕಳ ತಂದೆಯಾಗಲು ಬಯಸುತ್ತಾರೆ. ಶೀಘ್ರದಲ್ಲೇ ನಾಲ್ಕನೇ ಮದುವೆಯಾಗುವುದಾಗಿ ಹೇಳಿದ್ದಾರೆ. ಜಾನ್ ಮುಹಮ್ಮದ್ ಯಾವುದೇ ಪೂರ್ವಜರ ಆಸ್ತಿ ಅಥವಾ ಯಾವುದೇ ದೊಡ್ಡ ವ್ಯವಹಾರವನ್ನು ಹೊಂದಿಲ್ಲ. ಅವರು ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಉಪನಗರಗಳಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾರೆ.

ಫಿಫಾ ಫುಟ್‌ಬಾಲ್‌ ಫೈನಲಿನಲ್ಲಿ ಅರ್ಜೆಂಟೀನಾಗೆ ಮೂರನೇ ಬಾರಿ ಚಾಂಪಿಯನ್‌ ಪಟ್ಟ

Tuesday, December 20th, 2022
Share

ಲುಸೈಲ್: ಫಿಫಾ ಫುಟ್‌ಬಾಲ್‌ ಫೈನಲಿನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್‌ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

1978, 1986ರಲ್ಲಿ ಅರ್ಜೆಂಟೀನಾ ಚಾಂಪಿಯನ್‌ ಆಗಿ ಹೊರ ಹೊಮ್ಮಿತ್ತು. 2014ರಲ್ಲಿ ಜರ್ಮನಿ ವಿರುದ್ಧ ಫೈನಲ್‌ನಲ್ಲಿ ಅರ್ಜೆಂಟೀನಾ ಸೋತಿತ್ತು. ಈಗ 36 ವರ್ಷದ ಬಳಿಕ ಮೂರನೇ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಫ್ರಾನ್ಸ್‌ ವಿರುದ್ಧದ ಪಂದ್ಯ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು. 23ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್‌ ಮೂಲಕ ಮೊದಲ ಗೋಲು ಹೊಡೆದರು. ಇದರ ಬೆನ್ನಲ್ಲೇ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಹೊಡೆದರು. 80ನೇ ನಿಮಿಷದಲ್ಲಿ ಕಿಲಿಯನ್‌ ಎಂಬಾಪೆ ಪೆನಾಲ್ಟಿ ಮೂಲಕ ಫ್ರಾನ್ಸ್‌ ಪರ ಮೊದಲ ಗೋಲು ಬಾರಿಸಿದರು. ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ನಿಗದಿತ 90 ನಿಮಿಷದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ 30 ನಿಮಿಷಗಳ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿತ್ತು. ಈ ವೇಳೆ ಮೆಸ್ಸಿ 109ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್‌ಗೆ ಮುನ್ನಡೆ ತಂದುಕೊಟ್ಟರು. ಆದರೆ 118ನೇ ನಿಮಿಷದಲ್ಲಿ ಎಂಬಾಪೆ ಪೆನಾಲ್ಟಿ ಮೂಲಕ ಗೋಲು ಹೊಡೆದು ಮತ್ತೆ ತಿರುವು ನೀಡಿದರು.

120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್‌ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್‌ ಪ್ರವೇಶಿಸಿತ್ತು.

ಮಸ್ಕತ್ ನ ಶ್ರೀ ಗಣೇಶ ಉತ್ಸವ ಸಮಿತಿಯು 38 ನೇ  ವರ್ಷದ ಶ್ರೀ ಗಣೇಶ ಉತ್ಸವ

Monday, September 12th, 2022
Share
ಮಸ್ಕತ್

ಮಸ್ಕತ್ : ಒಮಾನಿನ  ರಾಜಧಾನಿಯಾದ  ಮಸ್ಕತ್ ನಗರದ  ಶ್ರೀ    ಗಣೇಶ  ಉತ್ಸವ    ಸಮಿತಿಯು   ಈ ವರ್ಷ  38 ನೇ  ವರ್ಷದ   ಶ್ರೀ ಗಣೇಶ  ಚತುರ್ಥಿ   ಹಬ್ಬಾಚರಣೆಯನ್ನು  ಅದ್ದೂರಿಯಿಂದ  ನಡೆಸಿಕೊಟ್ಟಿತು.  ಇದು ಸಮಿತಿಯ ಸದಸ್ಯರಿಗೆ ಮಾತ್ರವಲ್ಲದೆ  ಮಸ್ಕತ್ತಿನ ಆಸ್ತಿಕ ಬಾಂಧವರೆಲ್ಲರಿಗೂ ಒಂದು ಹೆಮ್ಮೆಯ ವಿಷಯವಾಗಿದೆ.

ಶ್ರೀ    ಗಣೇಶ  ಉತ್ಸವ    ಸಮಿತಿಯು  ಈ ಹಿಂದೆ  ” ಮಸ್ಕತ್  ತುಳುಕೂಟ”  ಎಂಬ ಹೆಸರಿನಲ್ಲಿ  ಪ್ರಸಿದ್ಧವಾಗಿತ್ತು.  ಶ್ರೀ    ಗಣೇಶ  ಉತ್ಸವ    ಸಮಿತಿಯು,  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ನಡೆಸದಿದ್ದರೂ  – ತನ್ನ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಪರಂಪರೆಯನ್ನು  ಮುಂದುವರಿಸುತ್ತಲೇ ಬಂದಿದೆ 

ಸಮಿತಿಯ ನಿರ್ಧಾರದಂತೆ ಹಾಗೂ  ಶ್ರೀ ಗಣೇಶನ ಅನುಗ್ರಹದಿಂದ  ಈ ವರ್ಷದ  ಕಾರ್ಯಕ್ರಮ  ದಿನಾಂಕ   31  ಆಗಸ್ಟ್ , ಸೆಪ್ಟೆಂಬರ್   1 ಹಾಗೂ  2 ನೇ  ದಿನಗಳಂದು    ಮಸ್ಕತ್ತಿನ  ಶಿವ ದೇವಾಲಯದ  ಪ್ರಾಂಗಣದಲ್ಲಿ   ಸುಸೂತ್ರವಾಗಿ  ನೆರವೇರಿತು.

ಭಾರತದಿಂದ ತಾಜಾ ಹೂವಿನ ವ್ಯವಸ್ಥೆಯನ್ನು ಸಮಿತಿಯ ಸದಸ್ಯರಾದ ಶ್ರೀ ಶಶಿಧರ್ ಶೆಟ್ಟಿ ಮಲ್ಲಾರ್ ಅವರ   ಸಹಕಾರದೊಂದಿಗೆ ಮಾಡಲಾಯಿತು.   ಅದಲ್ಲದೆ   ತಮಗೆ  ವಹಿಸಿ ಕೊಡಲಾದ   ಕರ್ತವ್ಯಗಳನ್ನು   ಸಮಿತಿಯ ಎಲ್ಲಾ  ಸದಸ್ಯರು   ಅಚ್ಚುಕಟ್ಟಾಗಿ ನೆರವೇರಿಸಿದ್ದರು.   ಸದಸ್ಯರು ಮತ್ತು ಸ್ವಯಂಸೇವಕರೆಲ್ಲರೂ  ಹಿಂದಿನ ರಾತ್ರಿಯೇ ಒಟ್ಟು ಸೇರಿ  ಪೂಜಾ ಸ್ಥಳವನ್ನು ತಾಜಾ ಹೂವುಗಳಿಂದ  ಸುಂದರವಾಗಿ ಅಲಂಕರಿಸಿದ್ದು , ಸಂಪೂರ್ಣ ಪ್ರಾಂಗಣ  ಹೂವುಗಳ  ಸುವಾಸನೆಯಿಂದ  ಕೂಡಿತ್ತು

ಶ್ರೀ ಗಣೇಶನ  ಶ್ರೀಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ  ಆರಂಭವಾದ   ಮೂರು ದಿನಗಳ  ಕಾರ್ಯಕ್ರಮ  ಸಕಲ  ವೈದಿಕ ವಿಧಿ   ವಿಧಾನಗಳನ್ನೊಳಗೊಂಡು    ಸಂಪೂರ್ಣವಾಗಿ   ಭಕ್ತಿ ಪುರಸ್ಸರ ವಾತಾವರಣದೊಂದಿಗೆ  ಪ್ರಾರಂಭವಾಯಿತು. ವೇದ ಮೂರ್ತಿ ಶ್ರೀ ಶಂಕರ ನಾರಾಯಣ  ಅಡಿಗರ  ನೇತೃತ್ವದಲ್ಲಿ   ಗಣಹೋಮ ಹಾಗೂ ಇತರೆ   ಪೂಜಾ ಕಾರ್ಯಕ್ರಮಗಳು  ಮಾತ್ರವಲ್ಲದೆ,  ೧೦೮ ತೆಂಗಿನಕಾಯಿ ಸಮರ್ಪಣೆ,  ಲಡ್ಡು ಸೇವೆ  ಮುಂತಾದ ಸೇವಾ  ಕಾರ್ಯಕ್ರಮಗಳನ್ನು ಕೂಡಾ ಸಮಿತಿಯ ಹಾಗೂ  ಸೇವಾರ್ಥಿಗಳ   ಪರವಾಗಿ ವಿದ್ಯುಕ್ತವಾಗಿ   ನಡೆಸಲಾಯಿತು .  ಶ್ರೀ ಗುರುರಾಜ್ ಪೆಜತ್ತಾಯ  ರು ಪೂಜಾ ಕಾರ್ಯಗಳಲ್ಲಿ ಶ್ರೀ ಅಡಿಗರಿಗೆ  ಉತ್ತಮ  ಸಹಾಯ ಸಹಕಾರ ನೀಡಿದರು.

 ಶ್ರೀ ವೈದ್ಯನಾಥನ್  ಶಿಷ್ಯರಿಂದ    ವೇದ ಪಠಣ , ಓಂ ಶ್ರೀ ಗಣೇಶ  ಮಂಡಳಿ  ತಂಡದವರಿಂದ ಗಣೇಶ ಸಹಸ್ರನಾಮ ಪಠಣ,  ಸುಶ್ರಾವ್ಯ ಭಜನೆ ,ಶ್ರೀ ಗಣೇಶ  ಪಂಚರತ್ನ ಗಾಯನ,   ಮುಂತಾದವುಗಳಲ್ಲೂ ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರು, ಅನೇಕ ಭಜನಾ ಮಂಡಳಿಗಳು, ನೃತ್ಯ ಸಂಯೋಜಕರು ಭಾಗವಹಿಸಿ  ಶ್ರೀ ಗಣೇಶನ ಕೃಪೆಗೆ ಪಾತ್ರರಾದರು.

 ಮಸ್ಕತ್ತಿನ  ಓಂ ಶ್ರೀ ಗಣೇಶ  ವೃಂದ, ಚಿನ್ಮಯ ಬಾಲ ವಿಹಾರ, ಇಸ್ಕಾನ್  ತಂಡ,ಮಾತಾ ಅಮೃತಾನಂದಮಯಿ ಭಜನಾ ಮಂಡಳಿ, ಡಿವೈನ್ ಸ್ಪಾರ್ಕ್ ತಂಡ, ಮುಕ್ತ ಕಲಾಲ್ ಹಾಗೂ ತಂಡ, ಶ್ರೀಮತಿ ಸ್ವರ್ಣಲತಾ ಹೆಬ್ಬಾರ್, ಶ್ರೀಮತಿ ಐಶ್ವರ್ಯ  ಹರಿ, ಟವೆಲ್  ಭಜನಾ ತಂಡ, ಆರ್ಟ್ ಆಫ್ ಲಿವಿಂಗ್  ತಂಡ, ಮಸ್ಕತ್ ಜಿ ಎಸ್  ಬಿ  ಭಜನಾ ತಂಡ, ಶ್ರೀ ಸತ್ಯ ಸಾಯಿ ಭಕ್ತರ  ತಂಡ, ಕುಮಾರಿ  ಶ್ರೇಯಾ ಹಾಗೂ ತಂಡ, ಶ್ರೀಮತಿ ನಳಿನಿ ಕಣ್ಣನ್ ಶಿಷ್ಯರು, ಭಕ್ತಿ ಲಹರಿ ಮಕ್ಕಳ ತಂಡ, ಶ್ರೀ ಕಾಂತಿ ಭಾಯಿ ಚಾವಡಾ , ಶ್ರೀಮತಿ ಜಯಶ್ರೀ ಹಾಗೂ ಶಿಷ್ಯರು, ಕೇರಳ ಜಿ  ಎಸ್ ಬಿ ತಂಡ  ಮುಂತಾದ   ಭಕ್ತವೃಂದಗಳು    ಮೂರೂ  ದಿನಗಳ  ಭಜನಾ ಕಾರ್ಯಕ್ರಮಗಲ್ಲಿ  ಸಕ್ರಿಯವಾಗಿ  ಭಾಗವಹಿಸಿದವು.   ಅದಲ್ಲದೆ  ಶ್ರೀಮತಿ  ಪ್ರಮೀಳಾ ರಮೇಶ್ ಹಾಗೂ  ಶ್ರೀಮತಿ ತೀರ್ಥ  ಕಟೀಲ್    ಇವರುಗಳು  ಶ್ರೀ ಮೂರ್ತಿಯ ಸನ್ನಿಧಾನದಲ್ಲಿ  ನೃತ್ಯ ಪ್ರದರ್ಶನ  ಮಾಡಿ  ಕೃತಾರ್ಥರಾದರು.  ಶ್ರೀಮತಿ ಧನ್ಯಾ  ರತೀಶ್  ಇವರು ತಮ್ಮ ಶಿಷ್ಯರಿಂದೊಡಗೂಡಿ  ವೀಣೆಯ ವೃಂದ ವಾದನ ನೆರವೇರಿಸಿದ್ದು  ಒಂದು  ವಿಶೇಷವಾಗಿತ್ತು.

ಮೂರೂ ದಿನಗಳು  ನಡೆದ ಈ  ಎಲ್ಲಾ  ಕಾರ್ಯಕ್ರಮಗಳು  ಆಸ್ತಿಕರಿಗೆ ಸಂಗೀತ – ನೃತ್ಯದ  ರಸದೌತಣವನ್ನಲ್ಲದೆ,  ಅದ್ಭುತ  ಭಕ್ತಿಭಾವದ ವಾತಾವರಣವನ್ನೇ ನಿರ್ಮಿಸಿದ್ದವು.

ಎಲ್ಲಾ ಮೂರೂ ದಿನಗಳಂದು  ಮಧ್ಯಾಹ್ನದ ಮಹಾ ಮಂಗಳಾರತಿ  ಹಾಗೂ  ರಾತ್ರಿಯ  ಮಹಾ ಮಂಗಳಾರತಿ, ರಂಗಪೂಜೆ ನಡೆಯಿತು.    ಮೂರನೇ ದಿನ  ಮಹಾ ಮಂಗಳಾರತಿ, ಪುಷ್ಪಾರ್ಚನೆಗಳ ನಂತರ  ಶ್ರೀ ಗಣೇಶನ  ಶ್ರೀಮೂರ್ತಿಯ ವಿದ್ಯುಕ್ತ  ವಿಸರ್ಜನೆ  ಕಾರ್ಯಕ್ರಮ ನಡೆಯಿತು.

ಪ್ರತಿ ದಿನವೂ ಮಧ್ಯಾಹ್ನ  ಹಾಗೂ ರಾತ್ರಿ  – ಈ ಎರಡೂ  ಹೊತ್ತಿನ ಹಬ್ಬದ ಭೋಜನ ವ್ಯವಸ್ಥೆಯನ್ನೂ  ಕೂಡಾ   ಮಾಡಲಾಗಿತ್ತು.

ಒಮಾನಿನಲ್ಲಿ  ಭಾರತದ  ರಾಯಭಾರಿಯಾಗಿರುವ  ಶ್ರೀ  ಅಮಿತ್ ನಾರಂಗ್  ಅವರು ತಮ್ಮ ಧರ್ಮ ಪತ್ನಿಯೊಂದಿಗೆ  ಈ ಕಾರ್ಯಕ್ರಮಕ್ಕೆ  ಆಗಮಿಸಿ  ಮಸ್ಕತ್ ಗಣೇಶೋತ್ಸವದ ಶೋಭೆಯನ್ನು ಮತ್ತಷ್ಟು  ಹೆಚ್ಚಿಸಿದರು .  ಅದಲ್ಲದೆ  ಒಮಾನ್ ದೇಶದ   ಅನೇಕ  ಗಣ್ಯ ವ್ಯಕ್ತಿಗಳು ಈ ವರ್ಷದ ಕಾರ್ಯಕ್ರಮದಲ್ಲಿ  ಭಕ್ತಿಯಿಂದ  ಭಾಗವಹಿಸಿದರು

ಶ್ರೀ ಗಣೇಶ  ಉತ್ಸವ ಸಮಿತಿಯು  – ಶ್ರೀ ಎಸ್ . ಕೆ . ಪೂಜಾರಿ(ಅಧ್ಯಕ್ಷರು) ಇವರ ನೇತೃತ್ವದಲ್ಲಿ  , ಸದಸ್ಯರಾದ ಶ್ರೀ ಶಶಿಧರ್ ಶೆಟ್ಟಿ ಮಲ್ಲಾರ್  , ಶ್ರೀ  ಉಮೇಶ್ ಬಂಟ್ವಾಳ್,  ಶ್ರೀ   ಕರುಣಾಕರ್ ರಾವ್,  ಶ್ರೀ ನಾಗೇಶ್ ಶೆಟ್ಟಿ, ಡಾಕ್ಟರ್   ಶ್ರೀ ಸೀ.ಕೆ. ಅಂಚನ್, ಶ್ರೀ  ರವಿ ಕಾಂಚನ್  ,ಶ್ರೀ  ಮಂಗಲ್  ದಾಸ್ ಕಾಮತ್ ,  ಶ್ರೀ  ಗುರುದಾಸ್  ಪೆಜತ್ತಾಯ   ಇವರೆಲ್ಲರ ಸಹಕಾರದೊಂದಿಗೆ ಈ  ವರ್ಷದ  ಗಣೇಶೋತ್ಸವನ್ನು ವಿಜೃಂಭಣೆಯಿಂದ ನೆರವೇರಿಸಿತು   .ಅದಲ್ಲದೆ ಈ ವರ್ಷ   ಶ್ರೀ ದೇವಾನಂದ್ ಕೆ ಅಮೀನ್  ಹಾಗೂ ಶ್ರೀ  ಸುಕುಮಾರ್ ಅಂಚನ್  ಇವರುಗಳು  ಹೊಸದಾಗಿ ಶ್ರೀ ಗಣೇಶ  ಉತ್ಸವ  ಸಮಿತಿಯ  ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.

ಮಸ್ಕತ್ತಿನಲ್ಲಿ ಶ್ರೀ  ಗಣೇಶ  ಚತುರ್ಥಿಯ ಉತ್ಸವವನ್ನು  ಎರಡು ವರ್ಷಗಳ  ನಂತರ   ಈ ಬಾರಿ ಸಾರ್ವಜನಿಕವಾಗಿ ,   ವಿಧಿ ವಿಧಾನಗಳೊಂದಿಗೆ,  ವಿಜೃಂಭಣೆಯಿಂದ  ನೆರವೇರಿಸಿ   ಶ್ರೀ ಗಣೇಶೋತ್ಸವ  ಸಮಿತಿಯ  ಸದಸ್ಯರೆಲ್ಲರೂ  ಧನ್ಯತಾ ಭಾವದಿಂದ ಬೀಗುವುದನ್ನು  ಕಾಣಬಹುದಿತ್ತು.

ವರದಿ   :   ಕರುಣಾಕರ್ ರಾವ್.     

ಕನ್ನಡತಿ ಸುಮಾ ಮಹೇಶ್ ಗೌಡ ರವರಿಗೆ ಗಲ್ಫ್ ಮಾಧ್ಯಮಂ ಶೆ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿ 2022

Saturday, July 9th, 2022
Share

ದೋಹಾ : ದೋಹಾದಲ್ಲಿ ನಡೆದ ಗಲ್ಫ್ ಮಾಧ್ಯಮಂ ಶೆ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿ 2022 ಸಮಾರಂಭದಲ್ಲಿ ಶ್ರೀಮತಿ ಸುಮಾ ಮಹೇಶ್ ಗೌಡ ಅವರಿಗೆ “ಜ್ಯೂರಿ ವಿಶೇಷ ಪ್ರಶಸ್ತಿ – ಸಮಾಜ ಸೇವೆ”ಪ್ರಶಸ್ತಿ ಅನ್ನು ನೀಡಿತು.

ಜೂನ್ 30, 2022 ರಂದು ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಪ್ರಸಿದ್ಧ ಗಾಯಕಿ ಮತ್ತು ನಟಿ ಮಮತಾ ಮೋಹನ್ ದಾಸ್ ಹಾಗೂ ಇತರ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ಸುಮಾ ಅವರು ಬೆಂಗಳೂರು ಮೂಲದವರು ಹಾಗೂ ಇವರು ಖ್ಯಾತ ಒಲಂಪಿಯನ್ ಫುಟ್ಬಾಲರ್ ಶ್ರೀ ಕೆಂಪಯ್ಯನವರ ದ್ವಿತೀಯ ಪುತ್ರಿ. ಇವರು ಭಾರತೀಯ ಬೇನೇವೊಳೆಂಟ್ ಫೋರಂ ಕೌನ್ಸೆಲಿಂಗ್ ಹೌಸ್ ನಾ ಕೌನ್ಸಿಲಿಂಗ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಇತ್ತೀಚೆಗೆ ಅವರು ಅನೇಕ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳನ್ನು ನಿರ್ದೇಶಿಸಿ ಮತ್ತು ನಿರೂಪಣೆ ಮಾಡಿ ಕಾರ್ಯಕ್ರಮಗಳ ಯಶಸ್ವಿಗೆ ಮುಖ್ಯ ಪಾತ್ರವಹಿಸುತ್ತಾರೆ

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ನಿಧನ

Friday, May 13th, 2022
Share

ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶೇಖ್ ಖಲೀಫಾ ಬಿನ್ ಜಾಯೆದ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಸಾವಿಗೆ ಸಂತಾಪ ಸೂಚಿಸಿ, ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

ಶುಕ್ರವಾರದಿಂದ ಧ್ವಜಗಳನ್ನು ಅರ್ಧಮಟ್ಟಕ್ಕಿಳಿಸುವುದು ಮತ್ತು ಮೊದಲ ಮೂರು ದಿನಗಳವರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

ಶೇಖ್ ಖಲೀಫಾ ಅವರು ನವೆಂಬರ್ 2004ಲ್ಲಿ ಯುಎಇಯ ಎರಡನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ತಂದೆಯ ನಂತರ ಫೆಡರೇಶನ್‌ನ ಏಳು ಎಮಿರೇಟ್‌ಗಳಲ್ಲಿ ಶ್ರೀಮಂತ ಅಬುಧಾಬಿಯ 16ನೇ ಆಡಳಿತಗಾರರಾಗಿದ್ದರು.

ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2014 ರಿಂದ ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಂಡಿದ್ದರು. ಪಾರ್ಶ್ವವಾಯು ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ತಾಲಿಬಾನಿಗಳ ಕೈಗೆ ಆಫ್ಘನ್​ ಅಧಿಕಾರ, ಉಗ್ರರ ಹೊಸ ಸರ್ಕಾರಕ್ಕೆ ಸಿದ್ಧತೆ

Sunday, August 22nd, 2021
Share

Afgahniಕಾಬೂಲ್ : ಅಫ್ಘಾನ್ ನಾಗರಿಕರನ್ನು ಲೂಟಿ ಮಾಡಿ ಅವರನ್ನು ವಿರೋಧಿಸಿದವರನ್ನು ಕೊಂದು ಈಗ ಅಫ್ಘಾನ್ ಸಂಪತ್ತನ್ನು ವಶ ಪಡಿಸಿಕೊಂಡಿರುವ ಉಗ್ರರಿಗೆ ಮತ್ತಷ್ಟು ಬಲ ಬಂದಿದೆ. ತಮ್ಮ ನಿಲುವನ್ನು ವಿಶ್ವಕ್ಕೆ ತೋರಿಸಲು ತಮ್ಮವರದ್ದೇ ಸರಕಾರ ಮಾಡಲು ಸಿದ್ಧತೆ ಮಾಡಿದ್ದಾರೆ.  ಕಳೆದ 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ಅಲ್ಲದೆ, ತಾಲಿಬಾನಿ ನಾಯಕರು ಶೀಘ್ರದಲ್ಲೇ ಹೊಸ ಸರ್ಕಾರವನ್ನೂ ಘೋಷಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಕಾಬೂಲ್‌ ನಲ್ಲಿ ನಡೆಯುತ್ತಿರುವ ಸ್ಥಳಾಂತರಿಸುವಿಕೆ ಮತ್ತು ಯುಎಸ್ ಭದ್ರತೆಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರ ಇಂದು ಸಂಜೆ 4 ಗಂಟೆಗೆ ಅಮೆರಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯ ನ ಮಾಡಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜನಪ್ರಿಯತೆ ತೀವ್ರ ಕುಸಿದಿದೆ. ಅವರ 7 ತಿಂಗಳ ಅಧ್ಯಕ್ಷತೆಯ ಅವಧಿಯಲ್ಲಿ ಅವರ ಅನುಮೋದನೆಯ ರೇಟಿಂಗ್‌ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಈ ಹಿನ್ನೆಲೆ ಬೈಡೆನ್‌ ಅವರನ್ನು ಬದಲಿಸಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುವ ಬಗ್ಗೆ ಒಲವು ವ್ಯಕ್ತವಾಗುತ್ತಿದೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದ ನೀರಜ್ ಚೋಪ್ರಾ

Saturday, August 7th, 2021
Share

neeraj Chopraಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಡೆದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ.

ಇದರೊಂದಿಗೆ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.

ಹಾಗೆಯೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನದ ಪದಕ ತಮ್ಮದಾಗಿಸಿದರು.

ನೀರಜ್ ಮೊದಲ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀಟರ್, 87.58 ಮೀಟರ್, ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ನಾಲ್ಕನೇ ಹಾಗೂ ಐದನೇ ಯತ್ನ ‘ಫೌಲ್’ ಆದರೂ ನೀರಜ್ ಗರಿಷ್ಠ ಸಾಧನೆಯನ್ನು ಪದಕ ಸುತ್ತಿನಲ್ಲಿದ್ದ ಯಾವ ಸ್ಪರ್ಧಿಯಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಮೇಕೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ, ಬಳಿಕ ಹತ್ಯೆ

Friday, July 30th, 2021
Share

Goat ಇಸ್ಲಾಮ್‍ಬಾದ್:  ಮೇಕೆಯನ್ನು ಹತ್ತಿರದ ಕಾಂಪೌಂಡ್ ಬಳಿ ಕರೆದುಕೊಂಡು ಹೋಗಿ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಅವರು  ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದ್ದು, ಹೀನ ಕೃತ್ಯದ ಬಳಿಕ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಕಿಸ್ತಾನದ ನಟಿ ಮಥಿರಾ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಾಣಿಗಳು ಸಹ ಬುರ್ಕಾ ಧರಿಸುವ ಅಗತ್ಯವಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದಿದ್ದಾರೆ. ಅಲ್ಲದೆ ಪಾಕ್‍ನಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಕುರಿತಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ನನ್ನು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಬೆತ್ತಲೆ ಪ್ರಾಣಿಗಳು ಪುರುಷರ ಮಲೆ ಪ್ರಭಾವ ಬೀರುತ್ತದೆಯೇ? ಇದೀಗ ನಮ್ಮ ಹ್ಯಾಂಡ್‍ಸಮ್ ಪ್ರಧಾನಿ ಸಹ ಸಂಪೂರ್ಣ ಮುಚ್ಚಿಕೊಳ್ಳುವಂತೆ ಮೇಕೆಗಳನ್ನು ಸಹ ಕೇಳುತ್ತಾರೆ. ಏಕೆಂದರೆ ಕೆಲ ಅಮಾಯಕರು ಅದರಿಂದ ಪ್ರಚೋದನೆಗೆ ಒಳಗಾಗಬಹುದು ಎಂದು ಟ್ವೀಟ್ ಮಾಡಿ ನೆಟ್ಟಿಗರು ಪ್ರಧಾನಿ ಹೇಳಿಕೆಗೆ ವ್ಯಂಗ್ಯ ಮಾಡುತ್ತಿದ್ದಾರೆ.

 

 

ಅಮೆರಿಕ ಸೇನೆ ಹಿಂದೆ ಸರಿಯುತ್ತಿದ್ದಂತೆ, ಅಫ್ಘಾನಿಸ್ತಾನ ಈಗ ತಾಲಿಬಾನ್ ಉಗ್ರರ ವಶವಾಗುತ್ತಿದೆ

Thursday, July 15th, 2021
Share

Afghan ಕಾಬುಲ್:  ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಪೂರ್ತಿ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದೆ. ಈಗಾಗಲೇ ದೇಶದ ಶೇ. 85ಕ್ಕೂ ಅಧಿಕ ಭಾಗ ತಾಲಿಬಾನ್ ಆಡಳಿತಕ್ಕೆ ಮರಳಿದೆ ಎಂದು ಹೇಳಲಾಗಿದೆ. ನಿಜಕ್ಕೂ ಆ ತಾಲಿಬಾನ್ ಆಡಳಿತ ಬಂದರೆ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತೆ ಆಗಿ, ವಿಶ್ವಕ್ಕೆ ದೊಡ್ಡ ಹೊಡೆತ ಬೀಳಲಿದೆ.

ತಾಲಿಬಾನ್ 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ಜನ್ಮತಾಳಿದ ಸಂಘಟನೆ. ಸಂಘಟನೆ ತನ್ನದೇ ಆದ ಉಗ್ರ ನಿಯಮಗಳನ್ನು ಹೊಂದಿದೆ. 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಆಕ್ರೋಶಗೊಂಡ ಅಮೆರಿಕ, ಉಗ್ರರನ್ನು ಮಟ್ಟಹಾಕುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. 20 ವರ್ಷಗಳ ಕಾಲ ಅಲ್ಲಿಯೇ ನೆಲೆ ನೆಲೆಸಿದ್ದ ಅಮೆರಿಕ ಸೇನೆ ಈ ವರ್ಷದ ಮೇ 1ರಿಂದ ಹಿಂದೆ ಸರಿದಿದೆ. ಸೈನಿಕರು ತಮ್ಮ ದೇಶಕ್ಕೆ ವಾಪಸಾಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡಿರುವ ತಾಲಿಬಾನ್ ಉಗ್ರರು ಮತ್ತೊಮ್ಮೆ ಅಫ್ಘಾನ್ನಲ್ಲಿ ತಮ್ಮ ಆಡಳಿತ ಸ್ಥಾಪನೆ ಆರಂಭಿಸಿದ್ದಾರೆ.

ಇತ್ತೀಚೆಗೆ ಉತ್ತರ ಅಫ್ಘಾನಿಸ್ತಾನದಲ್ಲಿ ದೂರದ ಜಿಲ್ಲೆಯನ್ನು ವಶಪಡಿಸಿಕೊಂಡ ತಾಲಿಬಾನ್, ಜಿಲ್ಲೆಯ ಇಮಾಮ್‌ಗೆ ಪತ್ರದ ರೂಪದಲ್ಲಿ ಆದೇಶ ನೀಡಿದೆ. ಜಿಲ್ಲೆಯ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಬಜಾರ್ಗೆ ಹೋಗಬಾರದು. ಪುರುಷರು ತಮ್ಮ ಗಡ್ಡವನ್ನು ಕ್ಷೌರ ಮಾಡಬಾರದು. ಯಾರೂ ಧೂಮಪಾನ ಮಾಡುವಂತಿಲ್ಲ ಎನ್ನುವ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮವನ್ನು ಯಾರಾದರೂ ಮುರಿದರೆ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಲಾಗಿದೆ.

1996 ರಿಂದ 2001 ರವರೆಗೆ, ತಾಲಿಬಾನ್ ಸರಿಸುಮಾರು ಮುಕ್ಕಾಲು ಭಾಗದಷ್ಟು ಅಫ್ಘಾನಿಸ್ತಾನದ ಮೇಲೆ ಅಧಿಕಾರವನ್ನು ಹೊಂದಿತ್ತು ಮತ್ತು ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವನ್ನು ಜಾರಿಗೊಳಿಸಿತ್ತು. ಆ ಸಮಯದಲ್ಲಿ ಅಲ್ಲಿ ಯಾರೂ ಟಿವಿ ಬಳಸುವಂತಿಲ್ಲ, ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವಂತಿಲ್ಲ, 10 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಶಾಲೆಗೆ ತೆರಳುವಂತಿಲ್ಲ ಎನ್ನುವಂತಹ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈಗ ತಾಲಿಬಾನ್ ಆಡಳಿತ ಹೆಚ್ಚಲಾರಂಭಿಸಿದ್ದು, ಮತ್ತೆ ಹಳೆಯ ಸ್ಥಿತಿಗೆ ಮರಳುವುದು ಗ್ಯಾರೆಂಟಿ ಎನ್ನಲಾಗಿದೆ.