ಗಾಜಾ ಪ್ರದೇಶದಲ್ಲಿ ಒಂಬತ್ತು ಮೈಲಿ ಉದ್ದದ ಉಗ್ರರ ಸುರಂಗ ಮಾರ್ಗ ಮತ್ತು ಒಂಬತ್ತು ಉಗ್ರರ ಮನೆ ನಾಶ

2:01 PM, Tuesday, May 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tunelsಗಾಜಾ  :  ಇಸ್ರೇಲ್ ಸೇನೆ ಗಾಜಾ ಪ್ರದೇಶದಲ್ಲಿ ಏರ್ ಸ್ಟ್ರೈಕ್ ನಡೆಸಿ 15 ಕಿಲೋಮೀಟರ್(ಒಂಬತ್ತು ಮೈಲಿ) ಉದ್ದದ ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳನ್ನುನಾಶಪಡಿಸಿದೆ.

ಇಸ್ರೇಲ್ ಸೇನೆ ಕಳೆದ ಒಂದು ವಾರದಿಂದ ಗಾಜಾ ಸಿಟಿ ಮೇಲೆ ನಿಂತರ ದಾಳಿ ನಡೆಸುತ್ತಿದೆ. ಇಸ್ರೇಲಿ ಮಿಲಿಟರಿ ಹಮಾಸ್‌ನ ಉಗ್ರಗಾಮಿಗಳ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.

ಗಾಜಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾಗಿದೆ. ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದು ಮೂರು ಕಟ್ಟಡಗಳು ನೆಲಸಮಗೊಂಡಿವೆ. ಏರ್ ಸ್ಟ್ರೈಕ್ ಗೂ ಮುನ್ನ 10 ನಿಮಿಷಗಳ ಮೊದಲು ಮಿಲಿಟರಿ ಎಚ್ಚರಿಕೆ ನೀಡಿತು. ಹೀಗಾಗಿ ಎಲ್ಲರೂ ಜಾಗ ಖಾಲಿ ಮಾಡಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ.

ವೈಮಾನಿಕ ದಾಳಿಯಿಂದಾಗಿ  ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. “ಸಂಘರ್ಷ ಹೀಗೆ ಮುಂದುವರಿದರೆ ಪರಿಸ್ಥಿತಿಗಳು ಹದಗೆಡುತ್ತವೆ ಎಂದು ಗಾಜಾ ಮೇಯರ್ ಯಾಹ್ಯಾ ಸರ್ರಾಜ್ ಅಲ್-ಜಜೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಗಾಜಾದ ಏಕೈಕ ವಿದ್ಯುತ್ ಕೇಂದ್ರವು ಇಂಧನದ ಕೊರತೆಯಿಂದಾಗಿ ಸ್ಥಬ್ಧಗೊಳ್ಳಲಿದೆ ಯು.ಎನ್. ಭೂಪ್ರದೇಶವು ಈಗಾಗಲೇ 8-12 ಗಂಟೆಗಳ ದೈನಂದಿನ ವಿದ್ಯುತ್ ಕಡಿತವನ್ನು ಅನುಭವಿಸುತ್ತದೆ. ಇನ್ನು ನೀರಿನ ಸರಬರಾಜು ಕಡಿಮೆಯಾಗಿದೆ ಎಂದರು.

ಗಾಜಾದಲ್ಲಿ ನೂರಾರು ವೈಮಾನಿಕ ದಾಳಿಯಲ್ಲಿ ಕನಿಷ್ಠ 188 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 55 ಮಕ್ಕಳು ಮತ್ತು 33 ಮಹಿಳೆಯರು ಸೇರಿದ್ದಾರೆ, 1,230 ಜನರು ಗಾಯಗೊಂಡಿದ್ದಾರೆ. ಇತ್ತ ಇಸ್ರೇಲ್ ಕಡೆ 5 ವರ್ಷದ ಬಾಲಕ ಮತ್ತು ಯೋಧ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಗಾಜಾದ ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್‌ ಮೇಲೆ 3,100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English