ಮಂಗಳೂರು ಹಿಂಸಾಚಾರದಲ್ಲಿ ಪೊಲೀಸರು ಸುಮ್ಮನಿರುತ್ತಿದ್ದರೆ ಹಲವರ ಸಾವು ಸಂಭವಿಸುತ್ತಿತ್ತು

Sunday, December 22nd, 2019
lati charge

ಮಂಗಳೂರು : ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸ್ಟೇಟ್ ಬ್ಯಾಂಕ್ ಬಳಿ ಒಂದು ಕೆಎಸ್ ಆರ್ ಪಿ ಬಸ್ ಮಾತ್ರ ಇತ್ತು ಅದರಲ್ಲಿ ಸೀಮಿತ ಸಿಬ್ಬಂದಿಗಳು ಇದ್ದರು ಜತೆಗೆ ಮಂಗಳೂರು ದಕ್ಷಿಣ ಠಾಣೆಯ ಕರ್ತವ್ಯ ನಿರತ ಅಧಿಕಾರಿಗಳು ಇದ್ದರು, ಅಲ್ಲಿ ಕೆಲವು ಮುಸ್ಲಿಂ ಬಾಂಧವರು ಗುಂಪು ಸೇರಿದ್ದರು. ಪೊಲೀಸರು ಅವರಿಗೆ ನಿಷೇದಾಜ್ಞೆಯನ್ನು ಮನವರಿಕೆ ಮಾಡಿದ್ದರು. ಸ್ವಲ್ಪ ಹೊತ್ತಿನ ನಂತರ ಸುಮಾರು 100 ರಷ್ಟು ಯುವಕರ ಗುಂಪು ಸೇರಿ ಘೋಷಣೆ ಕೂಗ ತೊಡಗಿದರು ಅವರು ನಿಷೇದಾಜ್ಞೆಯ ನಡುವೆಯೂ ಪೊಲೀಸರನ್ನು […]

550 ಕೋಟಿ ಪ್ರಾಜೆಕ್ಟ್​ಗೆ ನರೇಂದ್ರ ಮೋದಿ ಚಾಲನೆ

Tuesday, September 18th, 2018
narendra-modi

ವಾರಣಾಸಿ: ಎರಡು ದಿನಗಳ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ನಿನ್ನೆ 69ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಆಚರಿಸಿಕೊಂಡ ಮೋದಿ, ಮಕ್ಕಳೊಂದಿಗೆ ಸಂವಾದ ನಡೆಸಿ ನಂತರದಲ್ಲಿ ಕಾಶಿ ವಿಶ್ವನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಪ್ರವಾಸದ ಕೊನೆಯ ದಿನವಾದ ಇಂದು ವಿದ್ಯುತ್ ಅಭಿವೃದ್ಧಿ ಯೋಜನೆ ಸೇರಿದಂತೆ ಸುಮಾರು 550 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ […]

ಶಿರೂರು ಶ್ರೀಗಳಿಗೆ ತನ್ನದೇ ಎರಡು ಮಕ್ಕಳಿದ್ದಾರೆ, ಅವರು ಮಧ್ವ ಪರಂಪರೆಯನ್ನು ಧಿಕ್ಕರಿಸಿ ಮೆರೆದ ಸ್ವಾಮೀಜಿ

Sunday, July 22nd, 2018
Shiroor seer

ಉಡುಪಿ : ಶಿರೂರು ಲಕ್ಷ್ಮೀವರ ಶ್ರೀಗಳ ಮೂಲ ಹೆಸರು ಹರೀಶ್ ಆಚಾರ್ಯ. ಹೆಬ್ರಿ ಬಳಿಯ ಮಡಾಮಕ್ಕಿ ಅವರ ಹುಟ್ಟೂರು. ಮಠ ಸಂಸ್ಕೃತಿ, ಮಧ್ವ ಪರಂಪರೆಯನ್ನು ಮೀರಿ ಬೆಳೆದ ಯತಿಯೆಂದರೆ ಅದು ಶಿರೂರು ಲಕ್ಷ್ಮೀವರ ಶ್ರೀಗಳು. ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲ ಮಠದಿಂದ ನಾಲ್ಕು ದನಗಳ ಕಳವು ಆಗುತ್ತದೆ. ಆ ಬಗ್ಗೆ ಪೊಲೀಸರಿಗೂ ದೂರು ಹೋಗುತ್ತದೆ. ಅದರೆ ಶಿರೂರು ಲಕ್ಷ್ಮೀವರ ಶ್ರೀಗಳು ಅಮೇಲೆ ಇಟ್ಟ ದಿಟ್ಟ ಹೆಜ್ಜೆ ಎಂದರೆ ತಾವೇ ಸ್ಚತ: ಕಾನೂನು ಪಾಲಕರಂತೆ ರಾತ್ರಿ ವೇಳೆ […]

ಜೆಡಿಎಸ್ ಪ್ರಜಾ ವಿರೋಧಿ ಪ್ರಜಾಪ್ರಭುತ್ವ ಎಷ್ಟು ಸರಿ?

Monday, May 21st, 2018
kumara swamy

ಮಂಗಳೂರು : ಕೇವಲ 37 ಸೀಟುಗಳನ್ನು ಗೆದ್ದುಕೊಂಡಿರುವ ಜೆಡಿಯಸ್, ಕಾಂಗ್ರೆಸ್ಸ್ ಬೆಂಬಲಕೊಡುತ್ತೇನೆ ಎಂದ ಮಾತ್ರಕ್ಕೆ ರಾಜ್ಯಭಾರಮಾಡವುದುದು ಎಷ್ಟು ಸರಿ. ಅಷ್ಷಕ್ಕೂ ಕಾಂಗ್ರೆಸ್ಸ್‌ಗಾಗಲಿ, ಜೆಡಿಯಸ್‌ಗಾಗಲೀ ಮತದಾರರು ಸ್ಪಷ್ಟ ಬಹುಮತ ನೀಡಿಲ್ಲ. ಚುನಾವಣಾ ಪೂರ್ವ ಮೈತ್ರಿಯಂತೂ ಮಾಡಿಕೊಂಡೇ ಇರಲಿಲ್ಲಿ. ಈಗ ನಡೆಯುತ್ತಿರುವುದು ಮತದಾರರಿಗೆ ಒಪ್ಪಿಗೆ ಇಲ್ಲದೆ ಎರಡು ಪಕ್ಷಗಳು ಸೇರಿ ಅಧಿಕಾರಕ್ಕಾಗಿ ಮಾಡುತ್ತಿರುವ ಪ್ರಜಾ ವಿರೋಧಿ ಕೆಲಸ ಎಂಬುದು ಜನತೆಗೆ ಸ್ಪಷ್ಟವಾಗಿದೆ. ಸಿದ್ದರಾಮಯ್ಯ 1999 ರಲ್ಲಿ  ದೇವೆಗೌಡರ ಜ್ಯಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರಿ ಆ  ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ […]

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ಥಳಾಂತರ ಎಂಬ 40 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೇಕಿದೆಯೇ

Monday, September 14th, 2015
Dc Complex

ಮಂಗಳೂರು : ಯಾರಾದರೂ ಒಬ್ಬ ನಾಗರಿಕ ಬಂದು ನಿಮ್ಮ ಬಳಿ ದಯವಿಟ್ಟು ಜಿಲ್ಲಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಹೊರಗೆ ಎಲ್ಲಿಯಾದರೂ ದೂರ ಶಿಫ್ಟ್ ಮಾಡಿಬಿಡಿ. ನಮಗೆ ಇಲ್ಲಿ ಬರಲು ತುಂಬಾ ಕಷ್ಟವಾಗುತ್ತದೆ ಎಂದು ಬರೆದು ಕೊಟ್ಟಿದ್ದಾನಾ ಅಥವಾ ಮಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಗೆ ಬಂದರೆ ಹೆಜ್ಜೆಗಳ ಅಂತರದಲ್ಲಿ ಸಿಗುವ ಅಷ್ಟೂ ಕಚೇರಿಗಳನ್ನು ತೆಗೆದು ಬೇರೆಡೆ ಹಾಕಿದರೆ ಅದಕ್ಕಿಂತ ಬೇರೆ ಉಪಕಾರ ಇಲ್ಲ ಎಂದು ಮಂಗಳೂರಿನ ನಾಗರಿಕನಿಗೆ ಅನಿಸುತ್ತಿದೆಯಾ? ಅಥವಾ ಪುತ್ತೂರು, ಬೆಳ್ತಂಗಡಿ, ಸುಳ್ಯ ದ ಜನರಿಗೆ […]

ಕನ್ನಡಿಗರಿಗೇ ಕನ್ನಡ ಬಾಷೆಯ ಮೇಲೆ ಅಭಿಮಾನ ಇಲ್ಲ !

Thursday, December 4th, 2014
Kannada

ಮಂಗಳೂರು : ಕರ್ನಾಟಕ ರಾಜ್ಯ ಸರಕಾರ ಭ್ರಮೆಯಲ್ಲಿ ಇದೆಯೋ ಅಥವಾ ವಾಸ್ತವಿಕತೆಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆಯೋ ಗೊತ್ತಾಗುತ್ತಿಲ್ಲ. ಇಲ್ಲದೇ ಹೋದರೆ 1994 ರಿಂದ ಬಂದ ಅಷ್ಟೂ ಸರಕಾರಗಳು ತಮ್ಮ ಜೋಳಿಗೆಯಲ್ಲಿದ್ದ ಭಾಷಾ ನೀತಿಯನ್ನು ನ್ಯಾಯಾಲಯದ ಅಂಗಳದಲ್ಲಿ ಬಿಚ್ಚಿಟ್ಟು ಖುಷಿ ನೋಡುತ್ತಿರಲಿಲ್ಲ. ಪ್ರತಿ ಸಾರಿ ನ್ಯಾಯಾಲಯದಿಂದ ಪೆಟ್ಟು ತಿಂದರೂ ಮತ್ತೇ ಮತ್ತೇ ಮೇಲ್ಮನವಿಯನ್ನು ಸಲ್ಲಿಸುವುದರ ಮೂಲಕ ಭಾಷಾ ನೀತಿಯನ್ನು ಗಾಳಿಗೆ ಬಿಟ್ಟ ಅಪವಾದದಿಂದ ದೂರ ಉಳಿಯುವ ಯತ್ನ ಮಾಡುತ್ತಿದೆ. ಆದರೆ ಈ ಬಾರಿ ರಾಜ್ಯ ಸರಕಾರಕ್ಕೆ ಅಂತಹ ಅವಕಾಶ ಸಿಗುವ […]

ಗುಟ್ಕಾ ಬ್ಯಾನ್ ಇರಲಿ ಆದರೆ ಅಡಿಕೆ ಬೆಳೆಗಾರನಿಗೆ ನ್ಯಾಯ ನೀಡಿ

Monday, July 1st, 2013
arecca tree

ಮಂಗಳೂರು : ವಿಶ್ವ ತಂಬಾಕುರಹಿತ ದಿನದಂದು ಗುಟ್ಕಾ ನಿಷೇಧಿಸುವ ಮೂಲಕ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಹಾಗೂ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿದ್ದ ಗುಟ್ಕಾ ನಿಷೇಧಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಜನರ ಆರೋಗ್ಯದ ಹಿತದೃಷ್ಟಿ ಯಿಂದಲೇ ಸುಪ್ರೀಂ ಕೋರ್ಟ್ ಗುಟ್ಕಾ ನಿಷೇಧಕ್ಕೆ ನಿರ್ದೇಶನ ನೀಡಿತ್ತು. ನೆರೆಯ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ಕೋರ್ಟ್ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ್ದರೂ ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿತ್ತು. ಕೊನೆಗೂ ಸುಪ್ರೀಂಕೋರ್ಟ್   ಆದೇಶ […]

ನಿಯಂತ್ರಣದ ಹಂಗಿಲ್ಲದೇ ಮುಂದೆ ನಡೆಯುವ ಸಿಬಿಎಸ್ಇ ಪಠ್ಯಗಳು

Monday, March 25th, 2013
CBSE Cylabase

ಮಂಗಳೂರು : ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಯೊಂದರಲ್ಲಿ ಇತ್ತೀಚೆಗೆ 4ನೇ ಕ್ಲಾಸಿನ ಇಂಗ್ಲಿಷ್ ಭಾಷಾ ಪಠ್ಯದ ಪಾಠವೊಂದನ್ನು ಕೈಬಿಡಲು ಶಾಲೆಯಲ್ಲಿಯೇ ನಿರ್ಧರಿಸಲಾಯಿತು. ಆ ಪಾಠದ ಶೀರ್ಷಿಕೆ `ದಿ ಗೋಸ್ಟ್ ಟ್ರಬಲ್’. ವಿದ್ಯಾರ್ಥಿ ಗಳಿಗೆ ಹೋಂ ವರ್ಕ್ ಮಾಡಲು ದೆವ್ವ ಸಹಕರಿಸುವ ಕತೆ ಆ ಪಾಠದಲ್ಲಿದೆ. ದೆವ್ವಗಳು ಕೂಡ ನಮ್ಮ ಬದುಕಿನಲ್ಲಿ ನೆರವಾಗುತ್ತವೆ ಎಂಬ ವಿಚಾರವನ್ನು ಒಳಗೊಂಡ ಆ ಪಾಠ ಮಕ್ಕಳ ಮನಸ್ಸಿನ ಮೇಲೆ ಅಷ್ಟೇನೂ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಆ ಪಾಠವನ್ನು ಕೈ […]

ಸ್ಥಳೀಯ ಚುನಾವಣೆಗೆ ಸಂಘರ್ಷದ ವಾತಾವರಣ ಬೇಕಾಗಿಲ್ಲ

Tuesday, February 26th, 2013
Mangalore City Corporation

ಮಂಗಳೂರು : ಅಂತೂ ಇಂತೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನ ನಿಗದಿಯಾಗಿದೆ. ಸರಕಾರ ಮತ್ತು ರಾಜ್ಯ ಚುನಾವಣೆ ಆಯೋಗದ ನಡುವೆ ನಡೆದ ಘನ ಘೋರ ಕದನದಲ್ಲಿ ಅಂತಿಮವಾಗಿ ಸರಕಾರವೇ ಸೋತಿದೆ. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿಯೇ ಚುನಾವಣೆ ನಡೆಸಿ ಎಂದು ಕೋರ್ಟ್ ಹೇಳಿದ ಬಳಿಕವೂ ಅದನ್ನು ನಡೆಸಲು ಮನಸ್ಸು ತೋರದ ಸರಕಾರ ಇದಕ್ಕಾಗಿ ಹಲವು ನೆಪಗಳನ್ನು ಮುಂದೊಡ್ಡಿತ್ತು. ಆದರೆ, ಅಂತಿಮವಾಗಿ ಗೆದ್ದಿರುವುದು ಚುನಾವಣೆ ಆಯೋಗವೇ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಎಂದರೆ ಜನ ಪ್ರತಿನಿಧಿಗಳೇ ಇಲ್ಲದೆ, ಅಧಿಕಾರಿಗಳದೇ […]

ಉದಾರ ಆರ್ಥಿಕ ನೀತಿಯಿಂದ ಒಳ್ಳೆಯದು ಮಾತ್ರ ಆಗೋದಿಲ್ಲ !

Wednesday, February 13th, 2013
Invest

ಮಂಗಳೂರು : ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಉದಾರ ಆರ್ಥಿಕ ನೀತಿಗಳಿಂದ ಒಳ್ಳೆಯದೇ ಆಗಿದೆಯೆಂದು ಹೇಳುವಂತಿಲ್ಲ. ಕೆಟ್ಟದ್ದೂ ಆಗಿದೆ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರವನ್ನು ಸರ್ಕಾರಿ ಏಕಸ್ವಾಮ್ಯದಿಂದ ಬಿಡುಗಡೆ ಗೊಳಿಸಿದ್ದರಿಂದ ಮಾರುಕಟ್ಟೆ ಮುಕ್ತವಾಗಿ ಉದ್ಯಮಕ್ಷೇತ್ರಕ್ಕೆ ಮತ್ತು ಗ್ರಾಹಕರಿಗೆ ಒಳ್ಳೆಯದೇ ಆಯಿತು. ಆದರೆ ಉದಾರವಾದಿ ನೀತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಉದ್ಯಮ, ಸೇವಾ ಕ್ಷೇತ್ರಗಳು ಖಾಸಗಿ ವಲಯದಿಂದ ಪೈಪೋಟಿ ಎದುರಿಸಲು ಅಗತ್ಯವಾದ ಬದಲಾವಣೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದದ್ದರಿಂದ ಅವೆಲ್ಲ ಇಂದು ನಷ್ಟಕ್ಕೆ ಒಳಗಾಗಿ […]