ಜೆಡಿಎಸ್ ಪ್ರಜಾ ವಿರೋಧಿ ಪ್ರಜಾಪ್ರಭುತ್ವ ಎಷ್ಟು ಸರಿ?

1:25 AM, Monday, May 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kumara swamyಮಂಗಳೂರು : ಕೇವಲ 37 ಸೀಟುಗಳನ್ನು ಗೆದ್ದುಕೊಂಡಿರುವ ಜೆಡಿಯಸ್, ಕಾಂಗ್ರೆಸ್ಸ್ ಬೆಂಬಲಕೊಡುತ್ತೇನೆ ಎಂದ ಮಾತ್ರಕ್ಕೆ ರಾಜ್ಯಭಾರಮಾಡವುದುದು ಎಷ್ಟು ಸರಿ. ಅಷ್ಷಕ್ಕೂ ಕಾಂಗ್ರೆಸ್ಸ್‌ಗಾಗಲಿ, ಜೆಡಿಯಸ್‌ಗಾಗಲೀ ಮತದಾರರು ಸ್ಪಷ್ಟ ಬಹುಮತ ನೀಡಿಲ್ಲ. ಚುನಾವಣಾ ಪೂರ್ವ ಮೈತ್ರಿಯಂತೂ ಮಾಡಿಕೊಂಡೇ ಇರಲಿಲ್ಲಿ. ಈಗ ನಡೆಯುತ್ತಿರುವುದು ಮತದಾರರಿಗೆ ಒಪ್ಪಿಗೆ ಇಲ್ಲದೆ ಎರಡು ಪಕ್ಷಗಳು ಸೇರಿ ಅಧಿಕಾರಕ್ಕಾಗಿ ಮಾಡುತ್ತಿರುವ ಪ್ರಜಾ ವಿರೋಧಿ ಕೆಲಸ ಎಂಬುದು ಜನತೆಗೆ ಸ್ಪಷ್ಟವಾಗಿದೆ.

ಸಿದ್ದರಾಮಯ್ಯ 1999 ರಲ್ಲಿ  ದೇವೆಗೌಡರ ಜ್ಯಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರಿ ಆ  ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಅಕಾಲಿಕವಾಗಿ ಪತನವಾಗಿತ್ತು. ಜೆಡಿಎಸ್‌ನಿಂದ ಸಿಡಿದೆದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ, ಮುಖ್ಯಮಂತ್ರಿಯಾದ ಬಳಿಕ ರಾಜಕೀಯ ಹಗೆ ತೀವ್ರ ಸ್ವರೂಪಕ್ಕೆ ತಿರುಗಿತ್ತು. ವೈರಿಗಳಂತೆ ಮಾತಿನ ಕಾದಾಟದಲ್ಲಿ ತೊಡಗಿದ್ದ ದೇವೇಗೌಡ-ಸಿದ್ದರಾಮಯ್ಯ, ಪರಮೇಶ್ವರ್ ಈಗ ಮತ್ತೆ ಒಂದಾಗಿದ್ದಾರೆ ಅಂದರೆ ಮತ್ತೆ 2006 ರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯದ ಜನತೆ ಮತ್ತೆ ತಯಾರಾಗಬೇಕಿದೆ ಎಂಬ ಪೂರ್ವಸೂಚನೆ.

ಕುಮಾರ ಸ್ವಾಮಿ ಹಾಗೂ ದೇವೇಗೌಡ ವಿಚಲಿತ ಸ್ವಭಾವದವರು  ಯಾಕೆಂದರೆ.  2005 ರಲ್ಲಿ ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದ ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ 18 ಜನವರಿ, 2006 ರಂದು , ತಮ್ಮ ತಂದೆ ಎಚ್.ಡಿ. ದೇವೇಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ 46 ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು. ಫೆಬ್ರುವರಿ 3,2006 ರಂದು  ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ 18 ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2007 ನವೆಂಬರ್ 2 ರಂದು ಬಿ.ಜೆ.ಪಿ.ಗೆ ಅಧಿಕಾರ ಹಸ್ತಾಂತರಿಸದೆ ಬಹುಮತ ಹಿಂಪಡೆದು ಬಿಜೆಪಿಗೆ ಮೊಸ ಮಾಡಿದರು.

2008 ರ ಚುನಾವಣೆಯಲ್ಲಿ ಬಿಜೆಪಿಗೆ 110 ಸ್ಥಾನಗಳು ಬಂದು ಕರ್ನಾಟಕದ ಅಧಿಕಾರವನ್ನು ಪಡೆದುಕೊಂಡಿತು.  2008 ರ ಅವಧಿಯಲ್ಲಿ ಬಿಜೆಪಿ ಒಳಗೆ ಆಂತರಿಕ ಕಚ್ಚಾಟವಾಗಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತ್ತು.

2013 ರಲ್ಲಿ ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು ಪಡೆಯಿತು. ಬಹುಮತಕ್ಕೆ ಬೇಕಾದ 113 ಕ್ಕೂ ಹೆಚ್ಚಾಗಿ 9 ಹೆಚ್ಚು ಸ್ಥಾನಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಅಂದು ಬಿಜೆಪಿಗೆ 40 ಸ್ಥಾನಗಳು ಮಾತ್ರ ದೊರಕಿದ್ದವು.

2018 ರಲ್ಲಿ  104 ಸ್ಥಾನಗಳನ್ನು ಪಡಕೊಂಡು ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಬಂದರೂ  2008 ರಂತೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಯೆಡ್ಯೂರಪ್ಪ ಕೇವಲ 3 ದಿನದ ಮುಖ್ಯ ಮಂತ್ರಿಯಾಗಿ ಹೊರನಡೆಯ ಬೇಕಾಯಿತು. 2008  ರ ಕಚ್ಚಾಟವನ್ನು ಜನ ನೆನಪಿನಲ್ಲಿಟ್ಟು ಕೊಂಡಿದ್ದಾರೇನೋ,  ಈ ಬಾರಿಯೂ  ಬಿಜೆಪಿಗೆ ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿ, ರಾಜ್ಯದಲ್ಲಿ ಜನ ವಿರೋಧಿ ಮೈತ್ರಿ ಸರಕಾರ ಬಂದಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English