ಮಾವಿನಕಾಯಿ ಕೀಳಲು ಮರಹತ್ತಿದ ಯುವಕನಿಗೆ, ವಿದ್ಯುದಾಘಾತ
Friday, June 24th, 2022
ಮಂಗಳೂರು : ಯುವಕನೋರ್ವ ಮಾವಿನಕಾಯಿ ಕೀಳಲು ಮರಹತ್ತಿದ ಪರಿಣಾಮ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಮಹಮ್ಮದ್ ಇಲಿಯಾಸ್ (21) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ. ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ . ಮಾವಿನ ಮರದ ಮೇಲೆ […]