ಕಾಂಗ್ರೇಸ್ ತಮ್ಮ ಎಪ್ಪತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದರು : ನಂದನ ಮಲ್ಯ

5:53 PM, Tuesday, July 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ ದೊಡ್ಡ ಹಿಂದು ಎಂದು ತಿರುಗಾಡುತ್ತಾ. ಚುನಾವಣೆ ಮುಗಿದ ತಕ್ಷಣ ತನ್ನ ಹಿಂದು ವಿರೋಧಿಯಾಗಿ ಬದಲಾಗಿ ನಿಜಬಣ್ಣ ತೋರಿಸಿದರು ಎಂದು ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ನಂದನ ಮಲ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸತ್ತಿನಲ್ಲಿ ಹಿಂದುಗಳನ್ನು ಹಿಂಸೆ ಮಾಡುವವರು, ಅಸತ್ಯ ಮಾತಾಡುವವರು ಎಂದು ಹಿಂದೂ ಸಮಾಜವನ್ನು ಮೂದಲಿಸಿದರು. ಅಡ್ವಾಣಿ ಅವರ ಹಿಂದುತ್ವದ ಆಂದೋಲನವನ್ನು ಇದೀಗ ಹೊಸಕಿ ಹಾಕಿದ್ದೇವೆ ಎಂದು ತಮ್ಮ ಹಿಂದೂ ದ್ವೇಷವನ್ನು ಮತ್ತೆ ಸಾಬೀತುಪಡಿಸಿದರು. ಸಂಸತ್ತಿನಲ್ಲಿ ಏನೂ ಮಾತಾಡಿದರೂ ಕಾನೂನು ಸಂರಕ್ಷಣೆ ಸಿಗುತ್ತೆ ಎಂಬೂದನ್ನು ಅರಿತು ಈ ಅವಕಾಶವನ್ನು ದುರುಪಯೋಗ ಪಡಿಸಿ ಹಿಂದೂಗಳ ಅಪಮಾನ ಮಾಡಿದ್ದಾರೆ ಎಂದು ಮಲ್ಯ ಹೇಳಿದರು

ಇವರ ಇಂಡಿ ಘಟಬಂಧನದ DMK ಮುಖಂಡ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮವನ್ನು ಸಮೂಲ ಸರ್ವ ನಾಶ ಮಾಡಬೇಕು ಎಂದಾಗ ಇವರು ಸುಮ್ಮನಿದ್ದರು.

ಕೇರಳದಲ್ಲಿ ಮುಸ್ಲಿಂ ಲೀಗ್ ದೇವಸ್ಥಾನದ ಮುಂದೆ ಹಿಂದುಗಳನ್ನು ಸುಟ್ಟುಹಾಕಬೇಕು ಅಂದಾಗಲೂ ಮೌನ ವಾಗಿದ್ದರು, TMC ಯ ಮೇಯರ್ ಎಲ್ಲರನ್ನು ಮುಸ್ಲಿಂ ಮತಕ್ಕೆ ಮತಾಂತರ ಮಾಡಬೇಕು ಎಂದು ಸಾರ್ವಜನಿಕವಾಗಿ ಮಾತಾಡಿದರೂ ಕಾಂಗ್ರೇಸ್ ಮುಖಂಡರ ಮೌನ ಸಮ್ಮತಿ ಇತ್ತು.

ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದವರು, ಇವರ ಯುಪಿಎ ಸರಕಾರದಲ್ಲಿ ರಾಮ ದೇವರು ಕೇವಲ ಕಾಲ್ಪನಿಕ ಅಂತ ಅಫಿಡವಿಟ್ ಸಲ್ಲಿಸಿದ ಈ ಕಾಂಗ್ರೇಸ್ ತಮ್ಮ ಎಪ್ಪತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದರು ಎಂಬ ಪಟ್ಟಿ ಕೊಡಲಿ. ದ.ಕ. ಕಾಂಗ್ರೇಸ್ ನ ಹಿರಿಯರಾದ ರಮಾನಾಥ ರೈ ಅವರು ಈ ಬಾಲ ಬುದ್ದಿಯ ಕಾಂಗ್ರೇಸ್ ನಾಯಕರನ್ನು ತಿದ್ದುವ ಬದಲು ಅಧಿಕಾರದ ಆಸೆಗೆ ಅವರ ಗುಲಾಮಗಿರಿಗೆ ಇಳಿದದ್ದು ದುರಾದೃಷ್ಟ. ತನಗೆ ಶಾಸಕ ಸ್ಥಾನಕ್ಕಿಂತ ಹಿಂದುತ್ವವೇ ಮುಖ್ಯ ಎಂಬೂದನ್ನು ತತ್ವ ಆಗಿರಿಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದಿರುವ ನಮ್ಮ ಶಾಸಕರಾದ ಭರತ್ ಶೆಟ್ಟಿ ಅವರನ್ನು ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಐವನ್ ಡಿಸೋಜಾ ಮೂದಲಿಸಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೇಸ್ ನ ಈ ಓಲೈಕೆ ರಾಜಕಾರಣಕ್ಕೆ ಹಾಗೂ ಹಿಂದೂ ಧರ್ಮದ ವಿರೋಧಿ ರಾಜಕಾರಣಕ್ಕೆ ಧಿಕ್ಕಾರವಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ಅರುಣ್ ಜಿ ಶೆಟ್, ಯುವ ಮೋರ್ಚಾದ ಪ್ರಮುಖರಾದ ಭರತರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಪ್ರಕಾಶ್ ಗರೋಡಿ, ವರುಣ್ ಅಂಬಟ್, ನಿಶಾನ್ ಪೂಜಾರಿ, ಅವಿನಾಶ್ ಸುವರ್ಣ ಹಾಗೂ ರಕ್ಷಿತ್ ಪೂಜಾರಿ ಉಪಸ್ಥಿತರುದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English