ಹಂಡೇಲು ಚಿನ್ನಾಭರಣ ದರೋಡೆ – ನಾಲ್ವರ ಬಂಧನ

Friday, November 27th, 2020
Handelu

ಮೂಡುಬಿದಿರೆ  : ಮನೆಯೊಂದಕ್ಕೆ ನುಗ್ಗಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, 22.860 ಗ್ರಾಂ ಚಿನ್ನಾಭರಣ ಹಾಗೂ ₹11 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಇಬ್ರಾಹಿಂ ಕಲಂದರ್ (38), ಮೊಹಮ್ಮದ್ ಹನೀಫ್ (48), ಶಿವಮೊಗ್ಗದ ಮೊಹಮ್ಮದ್ ಮುದಸ್ಸಿರ್ (20), ಮೂಡುಬಿದಿರೆಯ ಶಾಹೀಂ ಸಿದ್ದೀಕ್ (26) ಬಂಧಿತರು. ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಹಂಡೇಲು ಹತ್ತಿರದ ಸಾರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ನವೆಂಬರ್  11ರಂದು ಹಿಂಬದಿ ಬಾಗಿಲು ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಈ ಕುರಿತು […]

ಕುದ್ರೋಳಿ ಸಮೀಪ ಮೆಹೆಂದಿ ಕಾರ್ಯಕ್ರಮಕ್ಕೆ ಬಂದಿದ್ದ ರೌಡಿ ಶೀಟರ್ ಹತ್ಯೆ

Thursday, November 26th, 2020
Indrajeet

ಮಂಗಳೂರು : ರೌಡಿ ಶೀಟರ್ ವೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕುದ್ರೋಳಿ ಸಮೀಪದ ಕರ್ನಲ್‌ ಗಾರ್ಡನ್ ಬಳಿ ನಡೆದಿದೆ. ಬೊಕ್ಕಪಟ್ಣ ನಿವಾಸಿ ಇಂದ್ರಜಿತ್ (45) ಹತ್ಯೆಗೊಳಗಾದ ವ್ಯಕ್ತಿ ಎಂದು  ತಿಳಿದುಬಂದಿದೆ. ಈತ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಈತನ ಮೇಲೆ ತಲವಾರ್‌ ದಾಳಿ ನಡೆದಿತ್ತು ಎಂಬ ಮಾಹಿತಿ ಲಭಿಸಿದೆ. ಬುಧವಾರ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಗುರುವಾರ […]

ಚೆನ್ನ ಫಾರೂಕ್ ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಬಂಧನ

Saturday, November 7th, 2020
Chenne Farooq

ಬಂಟ್ವಾಳ :  ಚೆನ್ನ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್ ಐ ಅವಿನಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೊಕ್ಕೊಟ್ಟು ಸಮೀಪದಿಂದ ಬಂಧಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ವಾಸವಾಗಿರುವ ಹಫೀಸ್ ಯಾನೆ ಅಪ್ಪಿ ಹಾಗೂ ಅಕ್ಕರಂಗಡಿ ನಿವಾಸಿ ಇರ್ಶಾದ್ ಬಂಧಿತ ಆರೋಪಿಗಳು. ಮೆಲ್ಕಾರ್ ಸಮೀಪ ಫಾರೂಕ್ ಯಾನೆ ಚೆನ್ನ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್.ಐ ಅವಿನಾಶ್ ನೇತೃತ್ವದ ತಂಡ ಗುರುವಾರ ಸಂಜೆ ಬಂಧಿಸಿದೆ. ಮೂಲತಃ ನಂದಾವರ ನಿವಾಸಿ […]

ಮಂಗಳೂರು : ಕೇರಳ ಮೂಲದ ಉದ್ಯಮಿಯನ್ನು ಮನೆಯಲ್ಲೇ ಕೊಲೆಗೈದ ದುಷ್ಕರ್ಮಿಗಳು

Tuesday, November 3rd, 2020
Murder

ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 […]

ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ – ಭಾರಿ ಪ್ರಮಾಣದ ಖೋಟಾ ನೋಟು ವಶ

Monday, November 2nd, 2020
Counterfeit note

ವಿಟ್ಲ: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಣಿಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡ ತನಿಖೆ ನಡೆಸಿದಾಗ ಬರೋಬ್ಬರಿ 5,5೦ಲಕ್ಷ (500ರ ನೋಟುಗಳು) ನಕಲಿ ನೋಟುಗಳು ಪತ್ತೆಯಾಗಿದೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಸಂತೋಷ್ ಮತ್ತು ಸುರತ್ಕಲ್ ನ ನಝೀರ್ ಎಂಬಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಂತರ್ರಾಜ್ಯ ಖೋಟಾನೋಟು ಜಾಲ ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ಕಿಂಗ್ ಪಿನ್ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ […]

ಪೊಲೀಸರಿಗೆ ಮಾಹಿತಿ ನೀಡಿದ್ದೆ ಸ್ಟುಡಿಯೋ ಮಾಲೀಕ ನ ಕೊಲೆ ಯತ್ನಕ್ಕೆ ಕಾರಣವಾಯಿತೇ ?

Wednesday, October 28th, 2020
dinesh Shetty

ಬಂಟ್ವಾಳ : ಮೂವರು ದುಷ್ಕರ್ಮಿಗಳ ತಂಡ ಫರಂಗಿಪೇಟೆಯಲ್ಲಿ  ಫೊಟೋಗ್ರಾಫರ್ ಒಬ್ಬರ ಮೇಲೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ರಾತ್ರಿ ವೇಳೆ ನಡೆದಿದೆ. ಫರಂಗಿಪೇಟೆಯಲ್ಲಿರುವ ಪೂಂಜಾ ಕಾಂಪ್ಲೆಕ್ಸ್ ನಲ್ಲಿರುವ ತೃಷಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ರಾತ್ರಿ ತಲವಾರು ದಾಳಿ ನಡೆಸಿದ್ದಾರೆ. ದಿನೇಶ ಅವರ ಹೊಟ್ಟೆಯಭಾಗಕ್ಕೆ ಮೊದಲು ಇರಿಯಲಾಗಿದೆ. ಹಲ್ಲೆಯನ್ನು ತಡೆಯಲೆತ್ನಿಸಿದ್ದಾಗ ಕೈ ಬೆರಳು ತುಂಡಾಗಿದೆ ಮತ್ತು ತಲೆಯ ಹಿಂಬದಿಗೆ ಗಂಭೀರ ಗಾಯಗಳಾಗಿದೆ. ಗಂಭೀರ ಸ್ಥಿತಿಯಲ್ಲಿ  ಗಾಯಗೊಂಡ ದಿನೇಶ್ ಅವರನ್ನು ಮಂಗಳೂರು ಎಜೆ  […]

ಲವ್ ಜಿಹಾದ್ ಗೆ ಒಪ್ಪದಕ್ಕೆ ಗುಂಡಿಕ್ಕಿ ಯುವತಿಯ ಕೊಲೆ

Tuesday, October 27th, 2020
paridhabadh

ಚಂಡೀಗಢ: ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡಿ ಕೊನೆಗೆ ಹುಡುಗಿ ಒಪ್ಪದೇ ಇದ್ದುದಕ್ಕೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣ ಹರಿಯಾಣದ ಫರಿದಾಬಾದ್ ನಲ್ಲಿ ನಡೆದಿದೆ. ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ದುರುಳರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಅಪಹರಿಸಲು ಮುಂದಾಗಿದ್ದು, ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಗುಂಡು […]

ಸುರೇಂದ್ರ ಬಂಟ್ವಾಳ್ ಕೊಲೆ ಆರೋಪಿ ಸತೀಶ್ ಕುಲಾಲ್ ಮತ್ತು ಇನ್ನೊಬ್ಬ ಸಹಚರನ ಬಂಧನ

Sunday, October 25th, 2020
Surendra Bantwal

ಬಂಟ್ವಾಳ : ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ.20ರಂದು ರಾತ್ರಿ ಸುರೇಂದ್ರ ಬಂಟ್ವಾಳ್ ನನ್ನು ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ […]

ಸುರೇಂದ್ರ ಬಡ್ಡಿ ವ್ಯವಹಾರದ ಪಾಪದ ಹಣವನ್ನು ಕಿಶನ್ ಹೆಗ್ಡೆ ಕೊಲೆಗೆ ಬಳಸಿದ್ದ, ಅದಕ್ಕಾಗಿ ಕೊಲೆ ಶಂಕೆ

Thursday, October 22nd, 2020
suresh Kulal

ಬಂಟ್ವಾಳ : ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರವಾಗಿ ಸುರೇಂದ್ರ ಬಂಟ್ವಾಳ್ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು,  ಸುರೇಂದ್ರನ ಆಪ್ತ ಸ್ನೇಹಿತ  ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಆಡಿಯೋ ಕಳಿಸಿದ್ದು ಪೊಲೀಸರು ಸುಳಿವಿನ ಬೆನ್ನು ಹತ್ತಿದ್ದಾರೆ. ರೌಡಿ ಶೀಟರ್, ನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಎರಡು ಪ್ರತ್ಯೇಕ ತಂಡ ರಚಿಸಿ ಹಂತಕರ ಬೇಟೆ ಆರಂಭಿಸಿದ್ದಾರೆ. ಸುರೇಂದ್ರ ಬಂಟ್ವಾಳ್ ಅವರ ಆಪ್ತ ಸ್ನೇಹಿತ ಸತೀಶ್ ಕುಲಾಲ್ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಆಡಿಯೋ ಸಂದೇಶದ  […]

ಬೈಕ್ ನಲ್ಲಿ ಬಂದು ಬಾರ್ ಮಾಲೀಕನನ್ನ ಹತ್ಯೆಗೈದ ದುಷ್ಕರ್ಮಿಗಳು

Friday, October 16th, 2020
Manish Shetty

ಬೆಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಾರ್ ಮಾಲೀಕನನ್ನ ಹತ್ಯೆಗೈದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ. ನಗರದ ಪ್ರತಿಷ್ಠಿತ ಬ್ರಿಗೇಡ್ ರಸ್ತೆಗೆ ಹೊಂದಿಕೊಂಡಿರುವ ಆರ್‌.ಎಚ್‌.ಪಿ ರಸ್ತೆಯಲ್ಲಿರುವ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ (45 ವರ್ಷ) ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂಲಗಳ ಪ್ರಕಾರ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೀಷ್ ಅವರ ಬಾರ್ ಮುಂಭಾಗದಲ್ಲೇ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ […]