ಬೆಂಗಳೂರಲ್ಲಿ ನಡೆದ ಸಾಮೂಹಿಕ ರೇಪ್, ಪ್ರಮುಖ ಆರೋಪಿಯನ್ನು ಗುಂಡುಹಾರಿಸಿ ಬಂದಿಸಿದ ಪೊಲೀಸರು

2:13 PM, Wednesday, June 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Saboobಬೆಂಗಳೂರು : ನಗರದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶೂಬೂಜ್ ಪೇಪರ್ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ಅಲ್ಲಿಂದ ವಶಕ್ಕೆ ಪಡೆದಿದ್ದಾರೆ.  ಆದರೆ ಆತ ಪೊಲೀಸರಿಂದ ತಪ್ಪಿಸಲೆತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಶೂಬೂಜ್ ಯುವತಿಯ ಗುಪ್ತಾಂಗಕ್ಕೆ ಕಾಲಲ್ಲಿ ಒದ್ದು, ವಿಕೃತಿ ಮೆರೆದಿದ್ದ.

 

ಆತನನ್ನು ಕರೆ ತರುವಾಗ ಮೂತ್ರ ಬರುತ್ತಿದೆ ಎಂದು ಹೇಳಿದ್ದ ಒಂದು ವೇಳೆ ನಿಲ್ಲಿಸದೇ ಇದ್ದರೆ ಜೀಪ್ ಒಳಗಡೆಯೇ ಮೂತ್ರ ಮಾಡುತ್ತೇನೆ ಎಂದು ಪೊಲೀಸರಿಗೆ ಧಮ್ಕಿ ಹಾಕಿದ್ದ. ಆರ್ ಪುರಂ ಬಳಿಯ ರಾಂಪುರ ಕೆರೆ ಬಳಿಜೀಪಿನಿಂದ ಕೆಳಗಡೆ ಇಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಆ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ದೇವೇಂದರ್ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಶಿವರಾಜ್ ಅವರಿಗೆ  ಬಟನ್  ಚಾಕುವಿನಿಂದ ಇರಿದಿದ್ದಾನೆ. ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯ ಮಾಡಿದ್ದಾನೆ.

ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್‍ಐ ಶಿವರಾಜ್ ಶರಣಾಗುವಂತೆ ಸೂಚಿಸಿದ್ದಾರೆ. ಸೂಚನೆಯನ್ನು ಧಿಕ್ಕರಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬೆಂಗಳೂರಿನ ಗ್ಯಾಂಗ್ ರೇಪ್ ಪ್ರಕರಣ ದಲ್ಲಿ  ರಿದಯ್ ಬಾಬು, ರಕಿಬುಲ್ ಇಸ್ಲಾಂ, ಸಾಗರ್, ಮೊಹಮ್ಮದ್ ಬಾಬು ಶೇಕ್, ಅಕಿಲ್, ಇಬ್ಬರು ಮಹಿಳಾ ಆರೋಪಿಗಳಾದ ಕಾಜಲ್, ನಸ್ರತ್ ಅವರನ್ನು ಬಂಧಿಸಲಾಗಿತ್ತು. ಇವರ ಮಾಹಿತಿ ಮೇರೆಗೆ ನಿನ್ನೆ ರಫ್ಸನ್, ರಫ್ಸನ್ ಪತ್ನಿ ತಾನ್ಯಾ ಮತ್ತು ದಾಲೀಮ್ ಬಂಧನ ಮಾಡಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English