ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದ ನೀರಜ್ ಚೋಪ್ರಾ

Saturday, August 7th, 2021
neeraj Chopra

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಡೆದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ. ಹಾಗೆಯೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ […]

ಕುಸ್ತಿ ಫೈನಲ್‌ನಲ್ಲಿ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾಗೆ ಬೆಳ್ಳಿ ಪದಕ

Thursday, August 5th, 2021
Ravi Kumar

ಟೋಕಿಯೊ:  ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಭಾರತದ ಯುವ ಕುಸ್ತಿಪಟು ರವಿಕುಮಾರ್ ದಹಿಯಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ರಶ್ಯದ ಝಾವೂರ್ ಉಗೆವ್ ವಿರುದ್ಧ 4-7 ಅಂತರದಿಂದ ಸೋತಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ರವಿ ಬೆಳ್ಳಿ ಗೆಲ್ಲುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕ ಗೆದ್ದಂತಾಗಿದೆ. ರವಿ ಕುಮಾರ್ ಒಲಿಂಪಿಕ್ಸ್ ನಲ್ಲಿ ಕುಸ್ತಿ […]

ಪತ್ನಿ ಮತ್ತು ತಾಯಿಯನ್ನು ಕೊಂದ ಶಾಟ್‌ಪುಟ್‌ ಆಟಗಾರ

Wednesday, August 26th, 2020
iqbal Singh

ವಾಷ್ಟಿಂಗ್ಟನ್‌: ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿ ಶಾಟ್‌ಪುಟ್‌ ಆಟಗಾರ ಇಕ್ಬಾಲ್‌ ಸಿಂಗ್ ಎಂಬಾತ ತಮ್ಮ ಪತ್ನಿ ಮತ್ತು ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾರೆ. 62 ವರ್ಷದ ಇಕ್ಬಾಲ್‌ ಸಿಂಗ್‌ ಬೊಪರಾಯ್‌  ಪ್ರಸ್ತುತ ಅಮೆರಿಕ ನಿವಾಸಿ. ಪೆನ್ಸಿಲ್ವೇನಿಯದ ಡೆಲಾವೇರ್‌ ಕೌಂಟಿಯ, ನ್ಯೂಟೌನ್‌ ಸ್ಕ್ವೇರ್‌ನಲ್ಲಿ ರವಿವಾರ ಬೆಳಗ್ಗೆ ಘಟನೆ ನಡೆದಿದೆ. 1983ರ ಕುವೈಟ್‌ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ನ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಇಕ್ಬಾಲ್‌ ಸಿಂಗ್‌ ಬೊಪರಾಯ್‌ ಈಗ ಕೊಲೆ ಗಾರ!. ಆದರೆ ಕಾರಣವೇನೆಂದು ತಿಳಿದುಬಂದಿಲ್ಲ. ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿರುವ ಆ ಮನೆಯ ಮೊದಲನೇ […]

ಕೊರೊನಾ ಭೀತಿ ಹಿನ್ನೆಲೆ : ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

Friday, March 13th, 2020
IPL

ನವದೆಹಲಿ : ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು […]

ಸಚಿನ್‌ ತೆಂಡುಲ್ಕರ್‌ ಮತ್ತೊಂದು ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ

Wednesday, March 11th, 2020
sachin

ಮುಂಬೈ : ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸಿ ಸಚಿನ್‌ ತೆಂಡುಲ್ಕರ್‌ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುತ್ತಿರುವ ವಿರಾಟ್‌ ಕೊಹ್ಲಿ, ಹೊಸತೊಂದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು 133 ರನ್‌ ಬಾರಿಸಿದರೆ, ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಏಕದಿನದಲ್ಲಿ 12,000 ರನ್‌ ಗಡಿಮುಟ್ಟಿದ ದಾಖಲೆ ಸಾಧಿಸಲಿದ್ದಾರೆ. ಸದ್ಯ ಅವರು 239 ಇನಿಂಗ್ಸ್‌ ಆಡಿದ್ದಾರೆ. ದ.ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಅವರಿಗೆ 133 ರನ್‌ ಗಳಿಕೆ ಕಷ್ಟವಲ್ಲ ಎಂದು ಭಾವಿಸಲಾಗಿದೆ. ಸಚಿನ್‌ ತೆಂಡುಲ್ಕರ್‌ 12,000 […]

ವಿಶ್ವಕಪ್ ಫೈನಲ್ ಆಡಿದ ಅತಿ ಕಿರಿಯ ಆಟಗಾರ್ತಿ : ಉಜ್ವಲ ಭವಿಷ್ಯ ಸಾರಿದ ಶಫಾಲಿ ವರ್ಮಾ

Monday, March 9th, 2020
shifali

ಮೆಲ್ಬೋರ್ನ್ : ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿರಬಹುದು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದ ಫೈನಲ್ ಪಂದ್ಯದಲ್ಲಿ 85 ರನ್ ‌ಅಂತರದ ಭರ್ಜರಿ ಗೆಲುವು ಬಾರಿಸಿದ ಆತಿಥೇಯ ಆಸ್ಟ್ರೇಲಿಯಾ, ದಾಖಲೆಯ ಐದನೇ ವಿಶ್ವಕಪ್ ಕಿರೀಟ ಎತ್ತಿ ಹಿಡಿದಿತ್ತು. ಇದರೊಂದಿಗೆ ಭಾರತೀಯ ಮಹಿಳಾ ತಂಡದ ಚೊಚ್ಚಲ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. ಆದರೂ ರನ್ನರ್ ಅಪ್ ಸಾಧನೆ ಮೆರೆಯುವ ಮೂಲಕ ದೊಡ್ಡ ಸಾಧನೆ ಮಾಡಿದೆ. ಈ ಮಧ್ಯೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ […]

55 ಎಸೆತಗಳಲ್ಲಿ ಅಜೇಯ 158 ರನ್ : ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆ

Saturday, March 7th, 2020
hardhik-pande

ಮುಂಬೈ : ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕ್ರೀಡಾಂಗಣಕ್ಕೆ ಕಮ್‍ಬ್ಯಾಕ್ ಮಾಡಿದ ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಟೀಂ ಇಂಡಿಯಾ ತಂಡಕ್ಕೆ ತಮ್ಮನ್ನು ಆದಷ್ಟು ಬೇಗ ಆಯ್ಕೆ ಮಾಡುವಂತೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬಿರುಸಿನಿಂದ ಬ್ಯಾಟ್ ಬೀಸುತ್ತಿದ್ದಾರೆ. ದೇಶೀಯ ಟೂರ್ನಿಯ ಡಿವೈ ಪಾಟೀಲ್ ಟಿ20 ಕಪ್ ಭಾಗವಾಗಿ ನಡೆಯುತ್ತಿರುವ ಪಂದ್ಯಗಳಲ್ಲಿ ಹಾರ್ದಿಕ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಬರೋಬ್ಬರಿ 20 ಸಿಕ್ಸರ್ ಸಿಡಿಸಿ […]

ನಕಲಿ ಪಾಸ್‌ಪೋರ್ಟ್ ‌: ಬ್ರೆಜಿಲ್‌ನ ಖ್ಯಾತ ಫ‌ುಟ್‌ಬಾಲ್‌ ತಾರೆ ರೊನಾಲ್ಡಿನೊ ಬಂಧನ

Friday, March 6th, 2020
brezil

ರಿಯೋ ಡಿ ಜನೈರೊ : ನಕಲಿ ಪಾಸ್‌ಪೋರ್ಟ್‌ ಬಳಸಿದ ಪ್ರಕರಣದಲ್ಲಿ ಬ್ರೆಜಿಲ್‌ನ ಖ್ಯಾತ ಫ‌ುಟ್‌ಬಾಲ್‌ ತಾರೆ ರೊನಾಲ್ಡಿನೊ ಹಾಗೂ ಅವರ ಸಹೋದರ ರೊಬೆರ್ಟೊ ಆಸ್ಸಿಸ್‌ ಅವರನ್ನು ಪೆರುಗ್ವೆಯಲ್ಲಿ ಬಂಧಿಸಲಾಗಿದೆ. 39 ವರ್ಷದ ರೊನಾಲ್ಡಿನೊ ಹಾಗೂ ಅವರ ಸಹೋದರನನ್ನು ಪೆರುಗ್ವೆಯ ಯಾಚ್‌ ರೆಸಾರ್ಟ್‌ನ ಕೊಠಡಿಯಲ್ಲಿ ಪೊಲೀಸರು ಹಠಾತ್‌ ದಾಳಿ ನಡೆಸಿ ಬಂಧಿಸಿದರು. “ರೊನಾಲ್ಡಿನೊ ಕ್ರೀಡಾಪಟು, ಅವರನ್ನು ಗೌರವಿಸುತ್ತೇನೆ, ಆದರೆ ನಕಲಿ ಪಾಸ್‌ಪೋರ್ಟ್‌ ಹೊಂದಿರುವುದು ಕ್ರಿಮಿನಲ್‌ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಯಾರೇ ಆಗಿದ್ದರೂ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು […]

ವರುಣನ ಆರ್ಭಟದಿಂದ ಪಂದ್ಯ ರದ್ದು : ಫೈನಲ್ ಗೇರಿದ ಭಾರತ ವನಿತೆಯರ ತಂಡ

Thursday, March 5th, 2020
cricket

ಸಿಡ್ನಿ : ಭಾರತ-ಇಂಗ್ಲೆಡ್ ವನಿತಾ ತಂಡಗಳ ನಡುವಿನ ಬಹುನಿರೀಕ್ಷಿತ ಟಿ-20 ಸೆಮಿಫೈನಲ್ ಪಂದ್ಯ ಯಾವುದೇ ಎಸೆತವನ್ನು ಕಾಣದೆ ಮಳೆಯಿಂದ ರದ್ದಾಗಿದೆ. ಹೀಗಾಗಿ ಲೀಗ್ ನಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದ ಭಾರತ ಫೈನಲ್ ಗೇರಿದೆ. ಲೀಗ್ ನಲ್ಲಿ ನಡೆದ ಎಲ್ಲಾ ನಾಲ್ಕು ಪಂದ್ಯವನ್ನು ಗೆದ್ದ ಭಾರತ ಅಜೇಯವಾಗಿ ಫೈನಲ್ ಗೇರಿದ ಸಾಧನೆ ಮಾಡಿದೆ. ಮೊದಲ ಪಂದ್ಯ ಸೋತರೂ ನಂತರದ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಮಳೆಯ ಕಾರಣದಿಂದ ಸರಣಿಯಿಂದ ಹೊರಬಿದ್ದಿದೆ. ಎರಡನೇ ಸೆಮಿ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು […]

ಐಪಿಎಲ್‌ ಬಹುಮಾನ ಮೊತ್ತ ಅರ್ಧರಷ್ಟು ಕುಸಿತ : ಕಾರಣ ಕೊಟ್ಟ ಬಿಸಿಸಿಐ

Wednesday, March 4th, 2020
IPL

ಮುಂಬೈ : ಭಾರತದ ಆರ್ಥಿಕ ಹಿಂಜರಿತದ ಬಿಸಿ ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೂ (ಬಿಸಿಸಿಐ) ತಟ್ಟಿದಂತಿದ್ದು, ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಾಕ್‌ಔಟ್‌ ಹಂತ ತಲುಪಿದ ತಂಡಗಳಿಗೆ ನೀಡಲಾಗುವ ಬಹುಮಾನ ಮೊತ್ತದಲ್ಲಿ ಶೇ. 50 ರಷ್ಟನ್ನು ಕಡಿಮೆ ಮಾಡಲು ಮುಂದಾಗಿದೆ. 2008ರಲ್ಲಿ ಶುರುವಾದ ಐಪಿಎಲ್‌ ಟೂರ್ನಿಯು ಜಗತ್ತಿನ ಉಳಿದೆಲ್ಲಾ ಟಿ20 ಲೀಗ್‌ಗಳಿಗೆ ಹೋಲಿಸಿದರೆ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಹಣದ ಹೊಳೆಯನ್ನೇ ಹರಿಸಿದೆ. ಆದರೆ, ಇದೇ ಮೊದಲ ಬಾರಿ […]