ಸರ್ಕಾರಿ ಅಧಿಕಾರಿಗಳ ಮನೆಗೆ ಎಸಿಬಿ ಅಧಿಕಾರಿಗಳ ದಾಳಿ, ಬಾತ್‌ ರೂಮ್ ಪೈಪಿನಲ್ಲೂ ಹಣ

8:43 PM, Wednesday, November 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

Jewarshiಬೆಂಗಳೂರು : ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಒಟ್ಟು 68 ಸ್ಥಳಗಳಲ್ಲಿ 503 ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಸರ್ಕಾರಿ ನೌಕರರು ಹೊಂದಿರುವ ಆಸ್ತಿಗಳ ಮೌಲ್ಯ, ಅವರು ಹೊಂದಿರುವ ಚಿನ್ನಾಭರಣಗಳು, ಇತರೆ, ಬ್ಯಾಂಕ್ ಠೇವಣಿಗಳ ಕುರಿತ ವಿವರಗಳು ಇಲ್ಲಿದೆ.

1) ಎಂ. ಆರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ
ಕಲಬುರಗಿಯಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 1 ಸ್ಕೂಲ್ ಐಸ್, 2 ಟ್ರ್ಯಾಕ್ಟರ್‌ಗಳು, 54,50,000/ ರೂ ನಗದು, ಸುಮಾರು 100 ಗ್ರಾಂ ಚಿನ್ನಾಭರಣಗಳು, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ, ತನಿಖೆ ಮುಂದುವರೆದಿದೆ.

2) ಟಿ. ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ

ಶಿವಮೊಗ್ಗ ನಗರದಲ್ಲಿ 2 ಮನೆಗಳು, ವಿವಿಧ ಕಡೆಗಳಲ್ಲಿ 4 ನಿವೇಶನಗಳು, 9 ಕೆಜಿ 400 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಾನುಗಳು, 2 ವಿವಿಧ ಕಂಪನಿಯ ಕಾರುಗಳು, 3 ದ್ವಿಚಕ್ರ ವಾಹನಗಳು, 2 ಎಕರೆ ಕೃಷಿ ಜಮೀನು, 15,94,000/ ರೂ ನಗದು ಹಾಗೂ 20 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

3) ಶ್ರೀನಿವಾಸ್, ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಐಸಿ-3, ಕೆ.ಆರ್. ಪೇಟೆ

ಮಂಡ್ಯ ಜಿಲ್ಲೆಯಲ್ಲಿ 1 ವಾಸದ ಮನೆ, ಮೈಸೂರು ನಗರದಲ್ಲಿ 1 ಫ್ಲಾಟ್, ಮೈಸೂರು ನಗರದಲ್ಲಿ 2 ನಿವೇಶನಗಳು, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, 2 ವಿವಿಧ ಕಂಪನಿಯ ಕಾರುಗಳು, 2 ದ್ವಿ ಚಕ್ರ ವಾಹನಗಳು, 1 ಕೆಜಿ ಚಿನ್ನಾಭರಣಗಳು, 8 ಕೆಜಿ 840 ಗ್ರಾಂ ಬೆಳ್ಳಿ ಸಾಮಾನುಗಳು, 9.85,000 ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ 22 ಲಕ್ಷ ರೂ.ಗಳ ಠೇವಣಿ ಹಾಗೂ 8 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

4) ಕೆ. ಎಸ್. ಅಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು

ಮಂಗಳೂರು ನಗರದಲ್ಲಿ 1 ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನಗಳು, 2 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 1 ಕೆಜಿ ಬೆಳ್ಳಿ ಆಭರಣಗಳು ಹಾಗೂ 10 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ, ತನಿಖೆ ಮುಂದುವರೆದಿದೆ.

5) ಎಲ್. ಸಿ. ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಷೀನ್

ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದ 1 ವಾಸದ ಮನೆ, ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು, 1 ಕೆಜಿ 76 ಗ್ರಾಂ ಚಿನ್ನಾಭರಣಗಳು, 7 ಕೆಜಿ 284 ಗ್ರಾಂ ಬೆಳ್ಳಿ ಸಾಮಾನುಗಳು, ನಗದು 43,00,000/ ರೂ ನಗದು ಹಾಗೂ ಸುಮಾರು 14 ಲಕ್ಷರೂಗಳ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

6) ಜಿ. ವಿ. ಗಿರಿ, ಗ್ರೂಪ್-ಡಿ ನೌಕರ, ಟಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ

ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ವಿವಿಧ ಕಂಪನಿಯ ಕಾರುಗಳು, 4 ದ್ವಿಚಕ್ರ ವಾಹನಗಳು, 8 ಕೆಜಿ ಬೆಳ್ಳಿ ಸಾಮಾನುಗಳು, 1 ಲಕ್ಷ 18 ಸಾವಿರ ನಗದು ಹಾಗೂ ಸುಮಾರು 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ, ತನಿಖೆ ಮುಂದುವರೆದಿದೆ.

7) ಶ್ರೀ. ಎಸ್. ಎಸ್. ರಾಜಶೇಖರ್, ಪಿಪಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ

ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ 1 ಫ್ಲ್ಯಾಟ್, ಯಲಹಂಕದಲ್ಲಿನ ಶಿವನಹಳ್ಳಿಯಲ್ಲಿ 2 ಅಂತಸ್ತಿನ ಒಂದು ಫ್ಲ್ಯಾಟ್ ಮತ್ತು ತಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, 1 ಕಾರ್, 1 ದ್ವಿಚಕ್ರ ವಾಹನ ಹಾಗೂ ಸುಮಾರು 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

8) ಮಾಯಣ್ಣ, ಪ್ರಥಮ ದರ್ಜೆ ಸಹಾಯಕರು, ಆರ್ಟಿಎಂಪಿ ಕೇಂದ್ರ ಕಚೇರಿ, ಎನ್. ಆರ್.ವೃತ್ತ, ಬೆಂಗಳೂರು

ಬೆಂಗಳೂರು ನಗರದಲ್ಲಿ 4 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 6 ನಿವೇಶನಗಳು, 2 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನಗಳು, 1 ಕಾರು, ನಗದು ಹಣ 59,000/- ರೂಗಳು, 10 ಲಕ್ಷ ರೂ. ನಿಶ್ಚಿತ ಠೇವಣಿ(ಎಫ್.ಡಿ), ಉಳಿತಾಯ ಖಾತೆಯಲ್ಲಿ 1,50,000/- ರೂಗಳು, ಸುಮಾರು 500 ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ ಹಾಗೂ ಸುಮಾರು 12 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ, ತನಿಖೆ ಮುಂದುವರೆದಿದೆ.

9) ಕೆ. ಎಸ್. ಶಿವಾನಂದ್, ಸಬ್ ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ

ಮಂಡ್ಯ ನಗರದಲ್ಲಿ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 1  ನಿವೇಶನ, 1 ಕಾರು, 2 ದ್ವಿ ಚಕ್ರ ವಾಹನ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು, ಹಾಗೂ ಸುಮಾರು 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

10) ಸದಾಶಿವ ರಾಯಪ್ಪ ಮರಲಿಂಗಣ್ಣನವರ್‌, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ

ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆಜಿ 135 ಗ್ರಾಂ ಚಿನ್ನಾಭರಣಗಳು, ನಗದು ಹಣ 22,000/- ರೂಗಳು ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

11) ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ

ಬೈಲಹೊಂಗಲ ನಗರದಲ್ಲಿ 2 ವಾಸದ ಮನೆ, 4 ನಿವೇಶನಗಳು, 4 ವಿವಿಧ ಕಂಪನಿಯ ಕಾರುಗಳು, ದ್ವಿ ಚಕ್ರ ವಾಹನಗಳು, 263 ಗ್ರಾಂ ಚಿನ್ನಾಭರಣಗಳು, 945 ಗ್ರಾಂ ಬೆಳ್ಳಿ ಸಾಮಾನುಗಳು, 1,50,000/- ರೂ ಮೌಲ್ಯದ ಬ್ಯಾಂಕ್ ಡೆಪಾಸಿಟ್ ಮತ್ತು ಷೇರ್‌ಗಳು, ನಗದು ಹಣ 110.000/ ಗಳು ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

12) ನಾಥಾಚಿ ಪೀರಾಜ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-2, ಹಾಂ, ಬೆಳಗಾವಿ ಜಿಲ್ಲೆ

ಬೆಳಗಾವಿ ನಗರದಲ್ಲಿ 1 ವಾಸದ ಮನೆ, ಬೆಳಗಾವಿ ನಗರದಲ್ಲಿ 2 ನಿವೇಶನ, 1 ಕಾರು, 1 ದ್ವಿ ಚಕ್ರ ವಾಹನ, 239 ಗ್ರಾಂ ಚಿನ್ನಾಭರಣಗಳು, 1 ಕೆ.ಜಿ 803 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 38,000/- ರೂಗಳು ಹಾಗೂ ಸುಮಾರು 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

13) ಲಕ್ಷ್ಮೀನರಸಿಂಹಯ್ಯ, ರಾಜಸ್ವ ನಿರೀಕ್ಷಕರು, ಕಸಬಾ-2 ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು

ಗ್ರಾಮಾಂತರ ಜಿಲ್ಲೆ, ವಿವಿಧ ಕಡೆಗಳಲ್ಲಿ 5 ವಾಸದ ಮನೆಗಳು, ವಿವಿಧ ಕಡೆಗಳಲ್ಲ. 6 ನಿವೇಶನಗಳು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 25 ಗುಂಟೆ ಜಮೀನು, 765 ಗ್ರಾಂ ಚಿನ್ನಾಭರಣಗಳು, 15 ಕೆಜಿ ಬೆಳ್ಳಿ ಸಾಮಾನುಗಳು, 1 ಕಾರು, 2 ದ್ವಿಚಕ್ರ ವಾಹನಗಳು, ನಗದು ಹಣ 113,000/- ರೂಗಳು ಪತ್ತೆಯಾಗಿರುತ್ತದೆ. ತನಿಖೆ ಮುಂದುವರೆದಿದೆ.

14) ವಾಸುದೇವ್, ಆರ್. ಎನ್, ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಬೆಂಗಳೂರು ನಗರದಲ್ಲಿ 5 ವಾಸದ ಮನೆಗಳು, ನೆಲಮಂಗಲ ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ 4 ಮನೆಗಳು, ಬೆಂಗಳೂರು ನಗರದಲ್ಲಿ ಈ ನಿವೇಶನಗಳು, ನೆಲಮಂಗಲ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಒಟ್ಟು 10 ಎಕರೆ 20 ಗುಂಟೆ ಕೃಷಿ ಜಮೀನು, 850 ಗ್ರಾಂ ಚಿನ್ನಾಭರಣಗಳು, ನಗದು ಹಣ 15,00,000/- ರೂಗಳು ಹಾಗೂ ಸುಮಾರು 9 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿದೆ.

15) ಅ. ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನಗಳು

ಬೆಂಗಳೂರು ನಗರದಲ್ಲಿ 3 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 9 ನಿವೇಶನಗಳು, ಚಿಂತಾಮಣಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 5 ಎಕರೆ 30 ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲ್ಲೂಕಿನ 1 ಪೆಟ್ರೋಲ್ ಬಂಕ್, 383 ಗ್ರಾಂ ಚಿನ್ನಾಭರಣಗಳು, 3395 ಗ್ರಾಂ ಬೆಳ್ಳಿ ಸಾಮಾನುಗಳು. 3,00,000/ ನಗದು ಹಣ  ಪತ್ತೆಯಾಗಿರುತ್ತದೆ. ತನಿಖೆ ಮುಂದುವರೆದಿದೆ.

ಬಾತ್‌ ರೂಮ್ ಪೈಪಿನಲ್ಲೂ ಹಣ

ಜೇವರ್ಗಿ ಯ ಲೋಕೋಪಯೋಗಿ ಇಲಾಖೆಯ ಜಾಯಿಂಟ್ ಎಂಜಿನಿಯರ್ ಆದ ಶಾಂತಗೌಡ ಬಿರಾದಾರ ಅವರ ಮನೆಯ ಮೂಲೆ ಮೂಲೆಗಳಲ್ಲಿ ಹಣ ಅಡಗಿಸಿಟ್ಟಿದ್ದರು  ಮನೆಯನ್ನು ಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಒಂದು ಶಾಕ್‌ ಕಾದಿತ್ತು. ಶಾಂತಗೌಡ ಬಿರಾದಾರ ಮನೆಯ ಬಾತ್‌ ರೂಮ್‌ ನ್ನು ಬಿಡದೇ ಹಣ ಬಚ್ಚಿಟ್ಟಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಬಾತ್‌ ಪೈಪ್ ನ್ನು ಕತ್ತರಿಸಿ ಹಣ ತೆಗಸಿದ್ದಾರೆ.ಬಾತ್ ರೂಮ್ ಪೈಪನಲ್ಲಿ ಒಟ್ಟು 13 ಲಕ್ಷ 50 ಸಾವಿರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮನೆಯಲ್ಲಿ ಒಟ್ಟು 55 ಲಕ್ಷ ರೂ ನಗದು ಹಣ ಪತ್ತೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English