ಕದಿರೆಯ ಮಂಜುನಾಥ

Wednesday, January 19th, 2011
ಕದ್ರಿ ದೇವಸ್ಥಾನ

ಮಂಗಳೂರು : ‘ಓಂ ನಮೋ ಭಗವತೇ ಮಂಜುನಾಥಾಯ’ ಎಂಬ ಏಕಾದಶಾಕ್ಷರೀ ಮಂತ್ರವು ಪರಮ ಪಾವನವಾದುದು. ಈ ಮಂತ್ರದ ಬಲದಿಂದ ಸಿದ್ಧರೂ, ಯೋಗಿಗಳೂ ಮಂತ್ರ ಸಿದ್ಧಿಯಿಂದ ವಾಕ್ ಸಿದ್ಧಿಯಿಂದ ಪಡೆದಿದ್ದಾರೆ. ಅವತಾರ ಪುರುಷನಾದ ಪರಶುರಾಮನು ಈ ಮಂತ್ರ ಸಿದ್ಧಿಯಿಂದ ಪರಶಿವನ್ನೊಲಿಸಿಕೊಂಡಿದ್ದನು. ಭಕ್ತರ ಇಷ್ಟಾರ್ಥವನ್ನು ಪೂರೈಸಲು ಅವರವರ ಭಾವಕ್ಕೆ ತಕ್ಕಂತೆ ಒಲಿದುಕೊಳ್ಳುವ ದೇವದೇವನು ಪರಶುರಾಮನಿಗೆ ಮಂಜುನಾಥನಾಗಿ ಒಲಿದುಕೊಂಡಿದ್ದನು. ಭಗವಾನ್ ಮಂಜುನಾಥನು ಕದಲೀ ವನ ಮಧ್ಯದಲ್ಲಿರುವ ರಸಕೂಪದಲ್ಲಿ ಜ್ಯೋತಿರ್ಲಿಂಗ ಸ್ವರೂಪನಾಗಿ ಅವತರಿಸಿದ ಲೀಲೆಯೇ ಈ ಕದಲೀ ಕ್ಷೇತ್ರ ಮಹಾತ್ಮೈಯಾಗಿದೆ. ಈ ಕದಲೀ […]

ಶ್ರೀ ಸದಾಶಿವ ಗಣಪತಿ ದೇವಾಲಯ

Saturday, October 23rd, 2010
ಶ್ರೀ ಸದಾಶಿವ ಗಣಪತಿ

ಕ್ಷೇತ್ರ-ಪುರಾಣ:  ಶ್ರೀ ಸದಾಶಿವ ಗಣಪತಿ ದೇವಾಲಯ, ಸುರತ್ಕಲ್. ಮಂಗಳೂರು : ಸೃಷ್ಟಿಕರ್ತನಾದ ಪ್ರಜಾಪತಿಯು ಜಗತ್ತನ್ನು ನಿರ್ಮಿಸಿ ಅದರಲ್ಲಿ ಪ್ರಜಾಕೋಟಿಯನ್ನು ಸೃಷ್ಟಿಸುವುದರೊಂದಿಗೆ ಹಲವು ಯಜ್ಞವಿಧಾನಗಳನ್ನೂ ರೂಪೀಕರಿಸಿ, “ಈ ಯಜ್ಞಕಾರ್ಯಗಳನ್ನು ನೀವು ಶ್ರದ್ಧಾಪೂರ್ವಕ ನಡೆಸಿಕೊಂಡು ಬನ್ನಿ, ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ಹೇಳಿದನಂತೆ ಅದರಂತೆ ಈ ಕರ್ಮಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನೂ ಇದು ತನ್ನ ಕರ್ತವ್ಯ ವೆಂದು ಭಾವಿಸಿ, ತ್ಯಾಗಭೂಯಿಷ್ಟವಾದ ಯಜ್ಞ ಯಾಗಾದಿಗಳನ್ನು ನಡೆಸುತ್ತಾ ಕುಲ ಕ್ರಮಾಗತವಾದ ಧರ್ಮಕರ್ಮಗಳಲ್ಲಿಆಸಕ್ತನಾಗಿ ಜೀವನದ ಪರಮಲಕ್ಷ್ಯ ವನ್ನು ಸಾಧಿಸುತ್ತಿದ್ದನು. ಭೌತಿಕ ಸುಖಕ್ಕಿಂತಲೂ ಶ್ರೇಷ್ಟವಾದ ಆಧ್ಯಾತ್ಮಿಕ […]

ಭಾರ್ಗವನಿಗೊಲಿದ ಮಂಗಳಾದೇವಿ : ಸಂಪೂರ್ಣ ಲೇಖನ

Saturday, October 9th, 2010
ಮಂಗಳಾದೇವಿ

ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಇದೀಗ ನವಿರಾಗಿ ಅಲಂಕರಿಸಿಕೊಂಡು ನಗರಕ್ಕೆ ಶೋಭೆ ತಂದಿದೆ. ಜಾತ್ರಾ ಮಹೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಸಾವಿರಾರು ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದೆ. ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಪರಮ ಪವಿತ್ರ ಭಕ್ತಿಭಾವದಿಂದ ಪರಸ್ಪರ ಬಂಧಿಸಿರುವ ದೇವಸ್ಥಾನದ ಪೌರಾಣಿಕ ಹಿನ್ನೆಲೆ ನಿಜಕ್ಕೂ ರೋಮಾಂಚನಗೊಳಿಸುವಂತಾಗಿದೆ. ಒಂದು ಬಾರಿ, ಸಪ್ತ ಋಷಿಗಳು ಶ್ರೀ ಹರಿಯ ದರ್ಶನ ಪಡೆಯಲೆಂದು ವೈಕುಂಠಕ್ಕೆ ಬಂದಿದ್ದಾಗ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸಪ್ತಋಷಿಗಳನ್ನು ಒಳಹೋಗಲು ಬಿಡದೆ, […]

ರವಿ ಬೆಳಗರೆ

Friday, August 20th, 2010
ರವಿ ಬೆಳಗರೆ

ಪತ್ರಕರ್ತ, ಲೇಖಕ, ಚಿತ್ರ ನಟ ಹೀಗೆ ಹಲವು ರಂಗದಲ್ಲಿ ಸಾಧನೆ ಮಾಡಿದ ರವಿ ಬೆಳಗೆರೆ  ಬರೆದ ‘ಪಾಪಿಗಳ ಲೋಕದಲ್ಲಿ’ ಪುಸ್ತಕದಲ್ಲಿನ ಸೋಮ ಕಥೆ ಈಗಾಗಲೆ ಡೆಡ್ಲಿ ರೂಪದಲ್ಲಿ ಸಿನಿಮಾ ಆಗಿದೆ.  ನಿರ್ದೇಶಕ ರವಿ ಶ್ರೀವತ್ಸ ನೇರವಾಗಿ ರವಿಯ ಮತ್ತೊಂದು ಪುಸ್ತಕ ‘ಭೀಮಾ ತೀರದ ಹಂತಕರಿ’ ಯನ್ನು ಚಿತ್ರ ಮಾಡಲು ಹೊರಟಿದ್ದಾರೆ  2001ರಿಂದ 2003ರ ಅವಧಿಯಲ್ಲಿ ಪತ್ರಿಕೆಯೊಂದಕ್ಕೆ ರವಿ ಬೆಳೆಗೆರೆ ಬರೆದ ಅಂಕಣ  ಬರಹಗಳ ಗುಚ್ಛವೇ ‘ಭೀಮಾ ತೀರದ ಹಂತಕರು’ ಕೃತಿಯಾಗಿ ಹೊರಹೊಮ್ಮಿದೆ. ಈಗ ಇದನ್ನೆ ಚಿತ್ರ ಮಾಡುವ ಸಾಹಸಕ್ಕೆ […]