ತಾಯಿ-ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಸಮಸ್ಯೆ ಕೇಳಿದ್ದೇ ತಪ್ಪಾಯಿತು : ಯಡಿಯೂರಪ್ಪ

12:38 PM, Friday, March 15th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಒಂದು-ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಿದ್ದರು ಎಂದು ಒಳಗೆ ಕರೆದುಕೊಂಡು ಹೋಗಿ ಏನಮ್ಮಾ ಸಮಸ್ಯೆ ಎಂಂದು ತಾಯಿ-ಮಗಳು ಇಬ್ಬರನ್ನೂ ಕೇಳಿದೆ. ನಮಗೆ ತುಂಬಾ ಅನ್ಯಾಯ ಆಗಿದೆ ಎಂದು ಹೇಳಿದ್ರು. ಅಮ್ಮ-ಮಗಳ ಕತೆ ಕೇಳಿ ನಾನು ಪೊಲೀಸ್ ಕಮಿಷನರ್‌ ದಯಾನಂದ್‌ ಗೆ ಫೋನ್ ಮಾಡಿ ಮಾತನಾಡಿ. ಇವರಿಗೆ ಅನ್ಯಾಯ ಆಗಿದೆಯಂತೆ ನ್ಯಾಯ ಒದಗಿಸಿಕೊಡಿ ಎಂದು ತಾಯಿ-ಮಗಳು ಇಬ್ಬರನ್ನೂ ಕಳುಹಿಸಿಕೊಟ್ಟಿದ್ದೆ. ಅದಾದ ಮೇಲೆ ನನ್ನ ವಿರುದ್ಧವೇ ಅಲ್ಲೇ ಏನೇನೋ ಮಾತನಾಡಲು ಶುರು ಮಾಡಿದ್ದರು. ನಾನು ಅದಕ್ಕೆ ಹೇಳಿದೆ ಈ ಯಮ್ಮಂಗೆ ಆರೋಗ್ಯ ಏನೂ ಸರಿ ಇದ್ದ ಹಾಗೆ ಕಾಣಲ್ಲ. ಹೆಚ್ಚು ಮಾತನಾಡುವ ಉಪಯೋಗ ಇಲ್ಲ ಎಂದು ನಾನು ಅವರನ್ನು ಕಮಿಷನರ್ ಬಳಿ ಕಳುಹಿಸಿಕೊಟ್ಟೇ. ಕಮಿಷನರ್ ಮಾತನಾಡುವ ಪ್ರಯತ್ನ ಮಾಡಿದ್ದಾರೆ.

ಈಗ ಇದನ್ನು ಬೇರೆ ರೀತಿ ಮಾಡಿ ಎಫ್‌ ಐಆರ್‌ ಆಗಿದೆ ಅಂತ ಗೊತ್ತಾಯ್ತು. ಅದನ್ನು ಕಾನೂನು ಪ್ರಕಾರ ಎದುರಿಸೋಣ. ಆದ್ರೆ ಯಾವ ರೀತಿ ಒಬ್ಬರಿಗೆ ಉಪಕಾರ ಮಾಡಲು ಹೋದರೆ ಈ ರೀತಿ ಆಗುತ್ತೆ ಅಂತ. ಕಷ್ಟ ಇದೆ ಎಂದಿದಕ್ಕೆ ಸ್ವಲ್ಪ ದುಡ್ಡು ಕೂಡ ಕೊಟ್ಟು ಕಳಿಸಿದ್ದೆ. ಇರಲಿ ನೋಡೋಣ ಎದುರಿಸೋಣ. ಇದೆಲ್ಲ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಯಡಿಯೂರಪ್ಪ ನಕ್ಕು ಉತ್ತರಿಸಿ ಇದನ್ನು ರಾಜಕೀಯ ಹುನ್ನಾರ ಎಂದು ಹೇಳಲು ಹೋಗುವುದಿಲ್ಲ ಎಂದಿದ್ದಾರೆ.

ಇನ್ನು ದೂರಿನ ಬಗ್ಗೆ ಸತ್ಯಾಸತ್ಯತೆಗಳನ್ನು ಸರ್ಕಾರ ಪರಿಶೀಲನೆ ನಡೆಸಲಿದೆ. ಏಕೆಂದರೆ ಈಗಾಗಲೇ ಗೃಹ ಸಚಿವ ಜಿ ಪರಮೇಶ್ವರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅವರೊಬ್ಬ ಮಾಜಿ ಮುಖ್ಯಮಂತ್ರಿ ಹೀಗಾಗಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ ಎಂದಿದ್ದಾರೆ. ಆ ಮಹಿಳೆ ಮಾನಸಿಕ ಅಸ್ವಸ್ಥತರು ಅಂತಾ ಹೇಳ್ತಾರೆ. ಅವರು ದೂರನ್ನು ಟೈಪ್ ಮಾಡಿ ಕೊಟ್ಟಿದ್ದಾರೆ. ಆದರೆ ಕೈಯಿಂದ ಬರೆದು ದೂರು ಕೊಟ್ಟಿದ್ದಲ್ಲ. ಟೈಪ್ ಕಾಪಿ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ನನಗೆ ಹೇಳಿದ್ದಾರೆ. ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸೇರಿದ್ದಂತದ್ದು. ಯಾವುದೇ ವಿಷಯ ಆದರೂ ಬಹಳ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ. ಹೆಚ್ಚು ಮಾಹಿತಿ ತಗೆದುಕೊಳ್ಳುವವರೆಗೂ ಏನೂ ಬಹಿರಂಗ ಮಾಡೋಕೆ ಆಗಲ್ಲ ಎಂದಿದ್ದಾರೆ. ಹೀಗಾಗಿ ಇದೊಂದು ಸೂಕ್ಷ್ಮ ಪ್ರಕರಣ ಎಂಬುದನ್ನು ಸರ್ಕಾರ ಕೂಡ ಗಂಭೀರವಾಗಿ ತೆಗೆದುಕೊಂಡಿದೆ.

ಅಪ್ರಾಪ್ತೆಯ ತಾಯಿ ದೂರಿನ ಮೇರೆಗೆ ಮಾಜಿ ಸಿಎಂ ಬಿ‌.ಎಸ್.ಯಡಿಯೂರಪ್ಪ ವಿರುದ್ದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English