ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಪ್ರಮುಖ: ರಶ್ಮಿ ಎಸ್.ಆರ್.

Friday, July 1st, 2022
Brand-Mangaluru

ಮಂಗಳೂರು : ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವಲ್ಲಿ ಬ್ರಿಟಿಷರೇ ಹೊರತಂದ ಬಂಗಾಲಿ ಗೆಝೆಟ್ ಪತ್ರಿಕೆ ಆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂದು ಕೂಡಾ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕಾ ಮಾಧ್ಯಮ ಹಾಗೂ ಪತ್ರಕರ್ತರ ಪಾತ್ರ ಪ್ರಮುಖ ಎಂದು ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್.ಆರ್. ಅಭಿಪ್ರಾಯಿಸಿದ್ದಾರೆ. ಪತ್ರಿಕಾ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿ ವಿಜೇತ ನಾ. […]

ಇಬ್ಬರು ನಾಮದಾರಿಗಳು ಹಲ್ಲೆ ನಡೆಸಿದ್ದರು ಎಂದು ಸುಳ್ಳು ಆರೋಪ ಮಾಡಿದ್ದ ಮದರಸ ವಿದ್ಯಾರ್ಥಿ : ಪೊಲೀಸ್ ಕಮಿಷನರ್

Friday, July 1st, 2022
madarasa-student

ಮಂಗಳೂರು: ಮದರಸಾ ವಿದ್ಯಾರ್ಥಿಯ ಮೇಲೆ ಬೈಕಿನಲ್ಲಿ ಬಂದ ಇಬ್ಬರು ನಾಮದಾರಿ ಮತ್ತು ಕೈಗೆ ಕೇಸರಿ ಪಟ್ಟಿ ಕಟ್ಟಿದ ಯುವಕರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು ಆರೋಪ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ಮದರಸಾ ದಲ್ಲಿ ಕಲಿಯುತ್ತಿರುವ 13 ವರ್ಷದ ಬಾಲಕನ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಯ ಪ್ರತಿನಿಧಿಗಳು ಮತ್ತು ವೈದ್ಯರ ಸಮ್ಮುಖದಲ್ಲಿ ಹುಡುಗನನ್ನು ವಿಚಾರಣೆ ನಡೆಸಿದ್ದರು. ಸೋಮವಾರ ರಾತ್ರಿ 9.30ಕ್ಕೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು […]

ನಾಲ್ಕನೇ ಬಾರಿಗೆ ಕಂಪಿಸಿದ ಭೂಮಿ, ಭೀಕರ ಶಬ್ದಕ್ಕೆ ಮಧ್ಯರಾತ್ರಿ ಎಚ್ಚರಗೊಂಡು ಮನೆಯ ಹೊರಗೆ ಬಂದ ಜನರು

Friday, July 1st, 2022
earth-quake

ಸುಳ್ಯ: ನಾಲ್ಕನೇ ಬಾರಿಗೆ ಮತ್ತೆ ಭೂಮಿ ಕಂಪಿಸಿದೆ. ಭೀಕರ ಶಬ್ದ ಮತ್ತು ಕಂಪನದಿಂದ ಮಲಗಿದ್ದ ಜನತೆ ಮಧ್ಯ ರಾತ್ರಿ ಎಚ್ಚರಗೊಂಡಿದ್ದಾರೆ. ರಾತ್ರಿ 1.15ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸಂಪಾಜೆ ಹಾಗು ಸಮೀಪದ ಪ್ರದೇಶ, ಸುಳ್ಯ ನಗರ ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ಜನರು ಆತಂಕ ಗೊಂಡಿದ್ದಾರೆ. ಇದೀಗ ವಾರದಲ್ಲಿ ನಾಲ್ಕನೇ ಬಾರಿ ಭೂಮಿ ಕಂಪಿಸಿದ್ದು ಜನರ ಆತಂಕ ಹೆಚ್ಚಿದೆ. ಜೂ.25 ರಂದು […]

ಸಾಫ್ಟ್ ವೇರ್ ಇಂಜಿನಿಯರ್ ಯುವತಿಯ ಶವ ಬಾವಿಯಲ್ಲಿ ಪತ್ತೆ

Friday, July 1st, 2022
sharmila shetty

ಕಾಪು : ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಯುವತಿಯೊಬ್ಬಳು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವತಿ ಯನ್ನು ಮಡುಂಬು ಗೋಪಾಲ್ ಶೆಟ್ಟಿ ಅವರ ಪುತ್ರಿ ಶರ್ಮಿಳಾ (22) ಎಂದು ಗುರುತಿಸಲಾಗಿದ್ದು. ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಊರಿಗೆ ಬಂದ್ದ ಶರ್ಮಿಳಾ ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಡುಂಬು ಕೊಲ್ಲಂಗಾಲ್ ಹೌಸ್ ನಿವಾಸಿ ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ(22)ರವರು ಕಳೆದ ಸುಮಾರು 8 ತಿಂಗಳಿನಿಂದ ಬೆಂಗಳೂರಿನಲ್ಲಿ […]

ಮಂಗಳೂರು ಡೆಪ್ಯುಟಿ ಕಮಿಷನರ್ ಅಪ್ ಪೊಲೀಸ್ ಆಗಿ ಅಂಶು ಕುಮಾರ್ ನೇಮಕ

Thursday, June 30th, 2022
Anshu-Kumar

ಮಂಗಳೂರು : ನಗರದ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಅಂಶು ಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ. ಉಡುಪಿ ಜಿಲ್ಲೆಯ ಕರಾವಳಿ ಭದ್ರತಾ ವಿಭಾಗದ ಎಸ್ ಪಿ ಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ. ಈ ಹಿಂದೆ ನಗರದಲ್ಲಿ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿದ್ದ ಹರಿರಾಂ ಶಂಕರ್ ಅವರನ್ನು ಹಾಸನ ಜಿಲ್ಲೆಯ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಅಗ್ನಿವೀರ್ ವಾಯು ಪ್ರವೇಶ – ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

Thursday, June 30th, 2022
AgniVeer

ಮಂಗಳೂರು : ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.50ರಷ್ಟು ಅಂಕ ಮತ್ತು ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟುಮೆಂಟ್ ಟೆಕ್ನಾಲಜಿ ಹಾಗೂ ಇನ್‍ಫಾರ್‍ಮೆಶನ್ ಟೆಕ್ನಾಲಜಿಯಲ್ಲಿ ಶೇ.50ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು. ಅಥವಾ 02 ವರ್ಷದ ವೃತ್ತಿಪರ ಕೋರ್ಸ್‍ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ […]

ಜುಲೈ1ರಂದು ಶಾಲಾ-ಕಾಲೇಜುಗಳಿಗೆ ರಜೆ : ಪ್ರವಾಸಿಗರು, ಸಾರ್ವಜನಿಕರು ನದಿತೀರಕ್ಕೆ ಸಮುದ್ರತೀರಕ್ಕೆ ತೆರಳದಿರಲು ಸೂಚನೆ

Thursday, June 30th, 2022
School Holiday

ಮಂಗಳೂರು : ಜಿಲ್ಲೆಯಾದ್ಯಂತ ಆರೆಂಜ್ – ಅಲರ್ಟ್ ಘೋಷಣೆಯಾಗಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿದೆ ಹಾಗೂ ಇದೇ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದೆ. ಆದ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಕಾಲೇಜುಗಳು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ1ರಂದು ರಜೆ ಘೋಷಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, […]

ಭಾರೀ ಮಳೆ – ಅಲ್ಲಲ್ಲಿ ಕೃತಕ ನೆರೆ, ತಗ್ಗು ಪ್ರದೇಶ ಜಲಾವೃತ

Thursday, June 30th, 2022
Padil-Rail

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದರೆ, ತಗ್ಗು ಪ್ರದೇಶದಲ್ಲಿ ಕೃತಕ ನೆರೆಯಿಂದ ಮನೆಗಳು ಜಲಾವೃತಗೊಂಡಿದೆ. ನಗರದ ಕೆಲವು ಕಡೆ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತಿರುವುದರಿಂದ ಮಳೆಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿದೆ. ಅತ್ತಾವರ ಕೆಎಂಸಿ ಯಿಂದ ಮಣಿಪಾಲ ಸ್ಕೂಲ್ ರಸ್ತೆ ಅಗೆದು ಹಾಕಿರುವುದರಿಂದ ಶಾಲಾ ವಾಹನಗಳು ಮತ್ತು ಜನರು ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಪಡೀಲ್ – ಮಂಗಳೂರು ಜಂಕ್ಷನ್ ಲೈನ್ […]

ಪರವಾನಿಗೆ ಇಲ್ಲದ ಮಾಂಬುಳಿ ಕ್ಲಿನಿಕ್‍ನ್ನು ಮುಚ್ಚಿಸಿದ ಆರೋಗ್ಯ ಇಲಾಖೆ

Thursday, June 30th, 2022
mambuli

ಸುಳ್ಯ : ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಮಾಂಬುಳಿ ಕ್ಲಿನಿಕ್‍ನ್ನು ಆರೋಗ್ಯ ಇಲಾಖೆ ಬುಧವಾರ ಮುಚ್ಚಿಸಿದೆ. ಅಲ್ಲದೇ ಕ್ಲಿನಿಕ್ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿ ಅದರಲ್ಲಿದ್ದ ವಸ್ತುವನ್ನು ಮುಟ್ಟುಗೋಲು ಹಾಕಲಾಗಿದೆ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರೋಸ್ಲಿ ಮ್ಯಾಥ್ಯೂ ಎಂಬವರು ಪರವಾನಿಗೆ ಇಲ್ಲದೆ ಮಾಂಬುಳಿ ಕ್ಲಿನಿಕ್ ನಡೆಸುತ್ತಿದ್ದು ಈ ಕುರಿತು ಆರೋಗ್ಯ ಇಲಾಖೆಗೆ ದೂರು ಹೋಗಿತ್ತು. ಬಳಿಕ ಆರೋಗ್ಯ ಇಲಾಖೆ ಕಡೆಯಿಂದ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ […]

ಸಮಾಜ ವಿಜ್ಞಾನ ಪಠ್ಯದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಹೆಸರನ್ನು ಮರುಸೇರ್ಪಡೆಗೊಳಿಸಬೇಕು : ಮಾಲಾಡಿ

Wednesday, June 29th, 2022
Bunts-sangha

ಮಂಗಳೂರು : ಪಠ್ಯ ಪರಿಷ್ಕರಣಾ ಸಮಿತಿಯು 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎಂಬ ಪಠ್ಯದಲ್ಲಿದ್ದ ಸಾಹಿತಿ ಡಾ. ಕಯ್ಯಾರ ಕಿಞ್ಞಣ್ಣ ರೈಯವರ ವಿಷಯವನ್ನು ಕೈಬಿಟ್ಟು ಅವರಿಗೆ ಅಗೌರವ ಮತ್ತು ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಮಾಲಾಡಿ ಅಜಿತ್‌ಕುಮಾರ್ ರೈ ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ. ಕಯ್ಯಾರ ಕಿಞ್ಞಣ್ಣ ರೈಯವರ ಪಠ್ಯವನ್ನು ಕಿತ್ತು ಹಾಕಿರುವುದು ಸಮಗ್ರ ಬಂಟ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ನಮ್ಮ ಸಹನೆ, ತಾಳ್ಮೆಯು […]