ಮಂಗಳೂರು: ಕೇರಳದ ಕಾಸರಗೋಡು ಕಾರ್ಯಕ್ರಮಕ್ಕೆ ಹೋಗಲು ಶನಿವಾರ ಮಂಗಳೂರಿಗೆ ಬಂದ ಸಚಿವ ಝಮೀರ್ ಅಹ್ಮದ್ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿಯವರಿಗೆ ಮುಸ್ಲಿಮರ ಮತ ತನಗೆ ಬೇಕಾಗಿಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡುವುದು ಅನಿವಾರ್ಯ ವಾಯಿತು. ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವವರು ಅಂತ ಲಘುವಾಗಿ ಮಾತಾಡಿದ್ದಾರೆ. ಅಂತಹ ಮುಸ್ಲಿಮರ ಬಳಿ ಯಾಕೆ ಓಟು ಕೇಳುತ್ತೀರಿ ಅಂತ ಪ್ರಶ್ನಿಸಿದ್ದು ತಪ್ಪಾ? ಎಂದು ಹೇಳಿದ್ದಾರೆ.
ಲೋಕಾಯುಕ್ತ ದಿಂದ ಈವರೆಗೆ ಯಾವುದೇ ನೋಟಿಸ್ ನನಗೆ ಬಂದಿಲ್ಲ. ನೋಟಿಸ್ ಕೊಡುವುದು ಸಹಜ ಪ್ರಕ್ರಿಯೆಯಾಗಿದೆ. ನೋಟಿಸ್ ಬಂದ ಮೇಲೆ ವಿಚಾರಣೆಗೆ ಹಾಜರಾಗಲೇಬೇಕು ಎಂದ ಝಮೀರ್ ಅಹ್ಮದ್ ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಯೋಗಿಶ್ವರ್ 18ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸಚಿವ ಝಮೀರ್ ಅಹ್ಮದ್ ತಿಳಿಸಿದರು.
Click this button or press Ctrl+G to toggle between Kannada and English