ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

Monday, August 10th, 2020
anush

ಸುಬ್ರಹ್ಮಣ್ಯ: ಕಡಬ ತಾಲೂಕು ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ ! ಇವರು ಬಳ್ಪ ಗ್ರಾಮದ ಲೊಕೇಶ್ ಮತ್ತು ಉಷಾ ಎಣ್ಣೆಮಜಲು ದಂಪತಿಗಳ ಪುತ್ರ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ. 71.80 ಫಲಿತಾಂಶ ಬಂದಿದೆ. […]

ಸಿದ್ದರಾಮಯ್ಯ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿದ್ದಾರೆ : ಆರೋಗ್ಯ ಸಚಿವ ಶ್ರೀರಾಮುಲು ಟೀಕೆ

Friday, February 7th, 2020
health-minister-ariramulu

ಚಿಕ್ಕಮಗಳೂರು : ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅದಗೆಟ್ಟು ಹೋಗಿದೆ ಎಂಬ ಸಿದ್ದಾರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ, ಮತ್ತೊಂದು ಕಡೆ ಕುಮಾರಸ್ವಾಮಿ ಹತಾಶರಾಗಿ ಏನೇನು ಮಾತಾನಾಡುತ್ತಿದ್ದಾರೆ. ಇವರು ಮೈತ್ರಿ ಸರ್ಕಾರ ನಡೆಸೋಕೆ ಆಗದೇ ಸರ್ಕಾರ ಬೀಳಿಸಿಕೊಂಡ್ರು, ಈಗ ಅಧಿಕಾರ ಕಳೆದುಕೊಂಡು ಹತಾಶರಾಗಿ ಮಾತಾನಾಡುತ್ತಿದ್ದಾರೆ ಎಂದು ರಾಮುಲು ಸಿದ್ದು ಹಾಗೂ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು, ಸಿದ್ದರಾಮಯ್ಯ […]

ನ.1 ರಿಂದ ಕೊಡಗು ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭ

Monday, October 28th, 2019
Madikeri

ಮಡಿಕೇರಿ : ಜಾತ್ಯತೀತ ಜನತಾದಳವನ್ನು ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಮತ್ತು ಸಂಘಟಿಸುವ ಉದ್ದೇಶದಿಂದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನ.1 ರಂದು ಚಾಲನೆ ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡ್ಲಿಪೇಟೆಯ ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸದಸ್ಯತ್ವ ಅಭಿಯಾನದ ಪಾದಯಾತ್ರೆಯನ್ನು ಆರಂಭಿಸಲಾಗುವುದು ಎಂದರು. ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಗುಂಪು ಅಭಿಯಾನದ ಯಶಸ್ಸಿಗೆ ಕೈ ಜೋಡಿಸಲಿದೆ. ಮನೆ ಮನೆಗೆ ತೆರಳಿ ಸದಸ್ಯರನ್ನು ಆಯ್ಕೆ ಮಾಡುವುದಲ್ಲದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ […]

ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಕೆ : ಮಡಿಕೇರಿಯಲ್ಲಿ ಸಚಿವ ಈಶ್ವರಪ್ಪ ಟೀಕೆ

Friday, October 25th, 2019
eswarappa

ಮಡಿಕೇರಿ  : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರುಗಳು ಖುರ್ಚಿ ಕಳೆದುಕೊಂಡು ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರದ ಆಡಳಿತದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತು ಅವರು ಸ್ಪಷ್ಟಪಡಿಸಿದರು. ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಬಿಜೆಪಿಯ ಎಲ್ಲಾ ಸಚಿವರು ತಮ್ಮ ಹುದ್ದೆಯನ್ನು ಸ್ವತಂತ್ರವಾಗಿ […]

ಖಜಾನೆ ಭರ್ತಿ ಮಾಡುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ : ನಳಿನ್ ಕುಮಾರ್ ಕಟೀಲ್

Saturday, October 5th, 2019
nalin-kumar-kateel

ಬೆಂಗಳೂರು : ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ ಬದಲಾಗಿ ಲೂಟಿಯಾಗಿದೆ ಅದನ್ನು ಭರ್ತಿ ಮಾಡುವ ಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ ನಮ್ಮನ್ನು ಟೀಕಿಸುವ ಮೊದಲ ಕೊಡಗಿನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದೀರಾ ಎನ್ನುವುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ. ಕಳದ ವರ್ಷ ಕೊಡಗಿನ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ಕುಮಾರಸ್ವಾಮಿ ಅಂದಿದ್ರು ಪ್ರತಿ ಮನೆ ಕಟ್ಟಲು 97 ಸಾವಿರ ಕೊಡುತ್ತೇನೆ ಅಂದಿದ್ದರು ಆದರೆ ಇನ್ನೂ ಕೊಡಗಿನಲ್ಲಿ ಮನೆ ಕಟ್ಟಿಸಿಕೊಟ್ಟಿಲ್ಲ ಆದರೆ […]

‘ಇದು ನಾಚಿಕೆಗೇಡಿನ ರಾಜಕೀಯ’ ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

Friday, September 20th, 2019
Kumaraswami

ಬೆಂಗಳೂರು : ಆಪರೇಷನ್ ಕಮಲ ಕುಖ್ಯಾತಿಯ ಬಿಜೆಪಿ ಮತ್ತೊಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಬಹುಮತ ಸರ್ಕಾರ ನಿಗದಿಪಡಿಸಿದ್ದ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ ಮಾಡಿ ತಮ್ಮ ಪಕ್ಷಪಾತಿ ನಿಲುವನ್ನು ಪ್ರತಿಪಾದಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಹೆಚ್.ಡಿ.ಕುಮಾರಸ್ವಾಮಿ, ‘ಆಪರೇಷನ್ ಕಮಲ ಕುಖ್ಯಾತಿಯ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಬಹುಮತ ಸರ್ಕಾರ ನಿಗದಿಪಡಿಸಿದ್ದ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ […]

ಗುತ್ತಿಗೆ ಕಾರ್ಮಿಕರಿಗೆ ಮೋದಿಗೆ ವೋಟ್​ ಹಾಕ್ತೀರಾ, ಸಮಸ್ಯೆಗೆ ನಮ್ಮನ್ನ ಕೇಳ್ತೀರಾ ಎಂದ ಕುಮಾರಸ್ವಾಮಿ

Wednesday, June 26th, 2019
Kumara Swamy

ರಾಯಚೂರು : ಕರೆಗುಡ್ಡ ಗ್ರಾಮಕ್ಕೆ ತೆರಳುವಾಗ ವೈಟಿಪಿಎಸ್ ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರು ಸಿಎಂ ಕುಮಾರಸ್ವಾಮಿ ಬಸ್ಗೆ ಮುತ್ತಿಗೆ ಹಾಕಿದರು. ಈ ವೇಳೆ, ಸಿಎಂ ಪ್ರತಿಭಟನಾ ನಿರತರ ಮೇಲೆ ಗರಂ ಆದರು. ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕಲು ಪೊಲೀಸರು ಮುಂದಾದರು. ಈ ವೇಳೆ, ಪ್ರತಿಭಟಾನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕು ನುಗ್ಗಲು ಉಂಟಾಗಿ ಸುಮಾರು 20 ನಿಮಿಷಗಳ ಕಾಲ ಬಸ್ ಅಲ್ಲಿಯೇ ನಿಂತಿತ್ತು. ಈ ವೇಳೆ ಮೋದಿಗೆ ವೋಟ್ ಹಾಕ್ತೀರಾ. ಇಲ್ಲಿ ಬಂದು ನಮ್ಮನ್ನ ಕೇಳ್ತೀರಾ ಎಂದು […]

ಕುಮಾರಸ್ವಾಮಿ ಮೇ 24ರ ವರೆಗೆ ಮಾತ್ರ ಮುಖ್ಯಮಂತ್ರಿ

Thursday, May 23rd, 2019
kumara swamy

ಬೆಂಗಳೂರು: ಲೋಕಸಭೆ ಚುನಾವಣೆ 2019ರ ಫಲಿತಾಂಶ ಮೇ 23 ರಂದು ಪ್ರಕಟಗೊಳ್ಳಲಿದ್ದು, ಮೇ 24ರ ವರೆಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ಮೇ 24, ಶುಕ್ರವಾರ ಬೆಳಗ್ಗಿನ ವರೆಗೆ ಮಾತ್ರ ಸಿಎಂ ಆ ನಂತರ ಮೈತ್ರಿ ಸರ್ಕಾರ ಮುರಿದು ಬೀಳಲಿದೆ. ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ವರೆಗೆ ಮಾತ್ರ. ನಾಳೆ […]

ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ: ಸಿಎಂ ಕುಮಾರಸ್ವಾಮಿ

Friday, December 28th, 2018
kumarswamy

ಬೆಂಗಳೂರು: ನಿಗಮ ಮಂಡಳಿ ವಿಚಾರದಲ್ಲಿ ಅಸಮಾಧಾನ ಇಲ್ಲ, ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನಾಯಕರು ನೀಡಿರುವ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದೇನೆ. ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೆಲವರು ಚರ್ಚೆ ಮಾಡುತ್ತಾರೆ. ಅದು ವಯಕ್ತಿಕ. ಅದಕ್ಕೆ ನಾನು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು. ಇನ್ನು […]

ಉಡಾಫೆ ಮುಖ್ಯಮಂತ್ರಿ ಎಂದ ವಿಷ್ಣುವರ್ಧನ್​ ಅಳಿಯ: ಅನಿರುದ್ಧ್’ಗೆ ಸಿಎಂ ಕುಮಾರಸ್ವಾಮಿ ತಿರುಗೇಟು

Wednesday, November 28th, 2018
anirudh

ಬೆಂಗಳೂರು: ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆಯಾಡುತ್ತಿದೆ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಅಂತಾ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗುಡುಗಿದ್ದಾರೆ. ಅನಿರುದ್ಧ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ .ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ನಿಧನದ ಸುದ್ದಿ ತಿಳಿದಾಗ ನಾನು ಅವರ ಮನೆಗೆ ಹೋಗಿ ದರ್ಶನ ಪಡೆದಿದ್ದೇನೆ. ಆ ವೇಳೆ ಭಾರತಿ ವಿಷ್ಣುವರ್ಧನ್ […]