ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು ಬೇಗನೇ ಜಾಗೃತವಾಗುವುದು

7:56 PM, Tuesday, June 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

Guru Poornimaಅ.ಅರ್ಥ
ಕೃಪೆ ಶಬ್ದವು ‘ಕೃಪ್’ ಧಾತುವಿನಿಂದ ನಿರ್ಮಾಣವಾಗಿದೆ. ‘ಕೃಪ್’ ಎಂದರೆ ದಯೆ ತೋರಿಸುವುದು ಮತ್ತು ಕೃಪೆ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ.

ಆ.ಮಹತ್ವ
ಬೇರೆಬೇರೆ ಯೋಗಮಾರ್ಗಗಳಿಂದ ಸಾಧನೆ ಮಾಡುವುದರಲ್ಲಿ ಅನೇಕ ವರ್ಷಗಳನ್ನು ವ್ಯರ್ಥಗೊಳಿಸದೇ, ಅಂದರೆ ಈ ಎಲ್ಲಾ ಮಾರ್ಗಗಳನ್ನು ಬದಿಗಿರಿಸಿ, ಗುರುಕೃಪೆಯನ್ನು ಬೇಗನೇ ಹೇಗೆ ಪಡೆಯುವುದು ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದುದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಿ ಆಗುತ್ತದೆ.

ಇ.ವೈಶಿಷ್ಟ್ಯ
ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು (ಜ್ಞಾನ ಶಕ್ತಿ) ಬೇಗನೇ ಜಾಗೃತವಾಗುವುದು, ಅಂದರೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಈಶ್ವರನು ಮಾರ್ಗದರ್ಶನ ಮಾಡುವುದು: ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಯೋಗ್ಯ ಮಾರ್ಗಕ್ಕನುಸಾರ ಸಾಧನೆಯು ಪ್ರಾರಂಭವಾಗುವುದರಿಂದ ಸಾಧಕನಿಗೆ ಹೊಸ ಹೊಸ ವಿಷಯಗಳು ತೋಚುತ್ತವೆ, ಅಂದರೆ ಅವನ ಪ್ರತಿಭಾಶಕ್ತಿಯು ಜಾಗೃತವಾಗಲು ಆರಂಭವಾಗುತ್ತದೆ. ಇದರಿಂದ ಈಶ್ವರನು ಅವನಿಗೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುತ್ತಾನೆ. ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗದಂತಹ ಸಾಧನಾಮಾರ್ಗಗಳಲ್ಲಿ ತುಂಬಾ ಸಾಧನೆಯಾದ ಮೇಲೆ ಪ್ರತಿಭೆಯು ಜಾಗೃತವಾಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಜಾಗೃತವಾದ ಪ್ರತಿಭೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು, ಗುರುಕೃಪೆ ಮತ್ತು ತನ್ನ ಸಾಧನೆಯ ಪ್ರಯತ್ನಗಳ ಮೇಲೆ ಅವಲಂಬಿಸಿರುತ್ತದೆ.
ಈ. ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಗುರುಕೃಪಾಯೋಗ

ಉ. ಸಾಧನೆಯಲ್ಲಿನ ತಪ್ಪುಗಳು
‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನಾಮಾರ್ಗಗಳು’ ಎಂಬ ಸಿದ್ಧಾಂತವು ತಿಳಿಯದೆ ಇರುವುದರಿಂದ, ಸಾಧನೆಯಲ್ಲಿ ಮುಖ್ಯವಾಗಿ ಮುಂದಿನ ನಾಲ್ಕು ರೀತಿಯ ತಪ್ಪುಗಳು ಆಗುವುದು ಗಮನಕ್ಕೆ ಬರುತ್ತದೆ.

ಅ. ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು
ಆ. ಸಾಂಪ್ರದಾಯಿಕತೆ : ಈ ಭೂಮಿಯ ಮೇಲೆ ೭೦೦ ಕೋಟಿಗಿಂತಲೂ ಹೆಚ್ಚು ಮನುಷ್ಯರಿದ್ದಾರೆ, ಅಂದರೆ ೭೦೦ ಕೋಟಿಗಿಂತಲೂ ಹೆಚ್ಚು ಸಾಧನೆಯ ಮಾರ್ಗಗಳಿವೆ; ಆದರೆ ಯಾವುದಾದರೊಂದು ಸಂಪ್ರದಾಯದ ಅನುಯಾಯಿಗೆ ಯಾವುದಾದರೊಂದು ಸಾಧನೆಯ ಮಾರ್ಗದ ಬಗ್ಗೆ ತಿಳಿದಿರುತ್ತದೆ. ಅವರು ಅದೇ ಪ್ರಕಾರ ಸಾಧನೆ ಮಾಡುತ್ತಾರೆ. ಸಾಧನೆಯ ಬೇರೆ ಮಾರ್ಗಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ.

ಇ. ಗುರು ‘ಮಾಡಿಕೊಳ್ಳುವುದು’ : ನಾವು ಗುರುವನ್ನು ಮಾಡಿಕೊಳ್ಳುವುದು ಅಥವಾ ಆರಿಸುವುದಿಲ್ಲ, ಗುರುಗಳು ನಮ್ಮನ್ನು ಶಿಷ್ಯರೆಂದು ಸ್ವೀಕರಿಸುವುದಿರುತ್ತದೆ.

ಈ. ತಾನೊಬ್ಬ ‘ಸಾಧಕ’ ಎಂಬ ವಿಚಾರ ಇರುವುದು.
ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಸಾಧಕನಿಂದ ಈ ತಪ್ಪುಗಳು ಆಗದ ಹಾಗೆ ಗುರುಗಳು ಕಾಳಜಿ ವಹಿಸುತ್ತಾರೆ, ಅಥವಾ ಆದರೂ ಕೂಡಲೇ ತಿದ್ದಿ ಹೇಳುತ್ತಾರೆ. ಹಾಗಾಗಿ ಸಾಧಕನ ಸಾಧನೆಯಲ್ಲಿ ಹಾನಿ ಆಗುವುದಿಲ್ಲ.

ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ !

5-7-2020 ರಂದು ವ್ಯಾಸಪೂರ್ಣಿಮೆ, ಅಂದರೆ ಗುರುಪೂರ್ಣಿಮೆ ಇದೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸುತ್ತಾರೆ; ಆದರೆ ಈ ವರ್ಷ ಕೊರೋನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರುಪೂರ್ಣಿಮೆಯನ್ನು ಆಚರಿಸಲು ಸಾಧ್ಯವಿಲ್ಲ. ಇಲ್ಲಿ ಒಂದು ಮಹತ್ವದ ವಿಷಯವೆಂದರೆ, ಹಿಂದೂ ಧರ್ಮದಲ್ಲಿ ಆಪತ್ಕಾಲದಲ್ಲಿ ಧರ್ಮಾಚರಣೆಗಾಗಿ ಕೆಲವು ಪರ್ಯಾಯಗಳನ್ನು ಹೇಳಲಾಗಿದೆ. ಇದಕ್ಕೆ ‘ಆಪತ್‌ಧರ್ಮ’ ಎಂದು ಹೇಳುತ್ತಾರೆ. ಆಪತ್‌ಧರ್ಮವೆಂದರೆ ‘ಆಪದಿ ಕರ್ತವ್ಯೊ ಧರ್ಮಃ |’ ಅಂದರೆ ಆಪತ್ತಿನಲ್ಲಿ ಆಚರಿಸುವ ಧರ್ಮ. ಸದ್ಯ ಕೊರೋನಾದ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಇದೆ. ಈ ಕಾಲದಲ್ಲಿಯೇ ಗುರುಪೂರ್ಣಿಮೆ ಇರುವುದರಿಂದ ಸಂಪತ್ಕಾಲದಲ್ಲಿ ಹೇಳಿರುವ ಪದ್ಧತಿಯಲ್ಲಿ ಈ ವರ್ಷ ನಮಗೆ ಈ ಮಹೋತ್ಸವವನ್ನು ಆಚರಿಸಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಈ ಲೇಖನದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಧರ್ಮಾಚರಣೆಗಾಗಿ ಏನೆಲ್ಲ ಮಾಡಬಹುದು, ಎನ್ನುವುದರ ವಿಚಾರ ಮಾಡಲಾಗಿದೆ. ಇಲ್ಲಿ ಮಹತ್ವದ ಅಂಶವೆಂದರೆ, ಹಿಂದೂ ಧರ್ಮದಲ್ಲಿ ಮಾನವನ ಬಗ್ಗೆ ಯಾವ ಹಂತದ ವರೆಗೆ ವಿಚಾರ ಮಾಡಲಾಗಿದೆಯೆಂಬುದು ಕಲಿಯಲು ಸಿಗುತ್ತದೆ. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಎದ್ದು ಕಾಣುತ್ತದೆ.

೧. ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೆ ಭಕ್ತಿಭಾವದಿಂದ ಗುರುಪೂಜೆ ಅಥವಾ ಮಾನಸಪೂಜೆ ಮಾಡಿದರೂ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುವುದು : ಗುರುಪೂರ್ಣಿಮೆಯಂದು ಹೆಚ್ಚಿನ ಜನರು ತಮ್ಮ ಶ್ರೀ ಗುರುಗಳ ಬಳಿ ಹೋಗಿ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಕೆಲವರು ಶ್ರೀಗುರುಗಳಿಗೆ, ಕೆಲವರು ಮಾತೃ-ಪಿತೃಗಳಿಗೆ, ಕೆಲವರು ವಿದ್ಯಾಗುರುಗಳಿಗೆ (ನಮಗೆ ಜ್ಞಾನ ನೀಡಿದವರಿಗೆ ಅಂದರೆ ಶಿಕ್ಷಕರಿಗೆ), ಕೆಲವರು ಆಚಾರ್ಯಗುರುಗಳಿಗೆ (ತಮ್ಮಲ್ಲಿ ಪರಂಪರೆಗನುಸಾರ ಪೂಜೆಗೆ ಬರುವ ಗುರೂಜಿಗಳು), ಇನ್ನು ಕೆಲವರು ಮೋಕ್ಷಗುರು (ನಮಗೆ ಸಾಧನೆಯ ದೃಷ್ಟಿಕೋನವನ್ನು ನೀಡಿ ಮೋಕ್ಷದ ಮಾರ್ಗವನ್ನು ತೋರಿಸಿದ ಗುರುಗಳು)ಗಳಲ್ಲಿಗೆ ಹೋಗಿ ಅವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ವರ್ಷ ಕೊರೋನಾದ ಮಹಾಮಾರಿಯ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೆ ಇದ್ದು ಭಕ್ತಿಭಾವದಿಂದ ಶ್ರೀ ಗುರುಗಳ ಛಾವಚಿತ್ರವನ್ನಿಟ್ಟು ಪೂಜೆ ಅಥವಾ ಮಾನಸಪೂಜೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುತ್ತದೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಉಪಾಸ್ಯದೇವತೆ, ಸಂತರು ಅಥವಾ ಶ್ರೀಗುರುಗಳು ಬೇರೆ ಬೇರೆ ಆಗಿದ್ದರೂ, ಗುರುತತ್ತ್ವವು ಒಂದೇ ಆಗಿರುತ್ತದೆ.

೨. ಎಲ್ಲ ಭಕ್ತರು ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತಶಕ್ತಿಯ ಲಾಭವಾಗುತ್ತದೆ : ಸಂಪ್ರದಾಯಗಳಲ್ಲಿನ ಎಲ್ಲ ಭಕ್ತರು ಸಾಧ್ಯವಾದರೆ ಒಂದೇ ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಬೇಕು. ‘ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಹೆಚ್ಚು ಸಂಘಟಿತಶಕ್ತಿಯ ಲಾಭವಾಗುತ್ತದೆ. ಆದ್ದರಿಂದ ಸಾಧ್ಯವಿದ್ದರೆ ಎಲ್ಲರೂ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ಪೂಜೆ ಮಾಡಬೇಕು.
ಅ. ಬೆಳಗ್ಗಿನ ಸಮಯ ಪೂಜೆಗೆ ಉತ್ತಮವೆಂದು ಹೇಳಲಾಗುತ್ತದೆ. ಬೆಳಗ್ಗೆ ಪೂಜೆ ಮಾಡಲು ಸಮಯವಿರುವವರು ಬೆಳಗ್ಗಿನ ಸಮಯವನ್ನು ನಿರ್ಧರಿಸಿ ಪೂಜೆ ಮಾಡಬಹುದು.

ಆ. ಕೆಲವು ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಪೂಜೆ ಮಾಡಲು ಸಾಧ್ಯವಿಲ್ಲದವರು ಸಾಯಂಕಾಲ ಒಂದು ಸಮಯವನ್ನು ನಿಶ್ಚಯಿಸಿ ಆ ಸಮಯದಲ್ಲಿ ಆದರೆ ಸೂರ್ಯಾಸ್ತದ ಮೊದಲು ಅಂದರೆ ಸಂಜೆ ೭ ಗಂಟೆ ಒಳಗೆ ಪೂಜೆ ಮಾಡಬಹುದು.

ಇ. ನಿರ್ಧರಿತ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲದವರು ತಮ್ಮತಮ್ಮ ಸಮಯಕ್ಕನುಸಾರ ಸೂರ್ಯಾಸ್ತದ ಮೊದಲು ಪೂಜೆ ಮಾಡಬಹುದು.
ಈ. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಪ್ರದಾಯಕ್ಕನುಸಾರ ಶ್ರೀ ಗುರುಗಳು ಅಥವಾ ಉಪಾಸ್ಯದೇವತೆಯ ಚಿತ್ರ, ಮೂರ್ತಿ ಅಥವಾ ಪಾದುಕೆಗಳನ್ನಿಟ್ಟು ಮನೆಯಲ್ಲಿ ಪೂಜೆ ಮಾಡಬೇಕು.

ಉ. ಚಿತ್ರ, ಮೂರ್ತಿ ಅಥವಾ ಪಾದುಕೆಗಳಿಗೆ ಗಂಧವನ್ನು ಹಚ್ಚಿ ಪುಷ್ಪವನ್ನು ಅರ್ಪಿಸಬೇಕು. ಧೂಪ, ದೀಪ ಮತ್ತು ನೈವೇದ್ಯವನ್ನು ತೋರಿಸಿ ಪಂಚೋಪಚಾರ ಪೂಜೆ ಮಾಡಬೇಕು. ನಂತರ ಶ್ರೀಗುರುಗಳ ಆರತಿ ಮಾಡಬೇಕು.

ಊ. ಸಾಮಗ್ರಿಗಳ ಅಭಾವದಿಂದಾಗಿ ಪ್ರತ್ಯಕ್ಷ ಪೂಜೆ ಮಾಡಲು ಸಾಧ್ಯವಿಲ್ಲದಿರುವವರು ಶ್ರೀಗುರುಗಳ ಅಥವಾ ಉಪಾಸ್ಯದೇವತೆಯ ಮಾನಸಪೂಜೆ ಮಾಡಬೇಕು.

ಎ. ನಂತರ ಶ್ರೀ ಗುರುಗಳು ನೀಡಿರುವ ಮಂತ್ರವನ್ನು ಜಪಿಸಬೇಕು. ಶ್ರೀ ಗುರುಗಳು ನಮ್ಮ ಜೀವನದಲ್ಲಿ ಬಂದ ನಂತರದ ನಮ್ಮ ಅನುಭೂತಿಗಳನ್ನು ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು.

ಐ. ಆ ಸಮಯದಲ್ಲಿ ‘ವರ್ಷವಿಡೀ ನಾವು ಸಾಧನೆ ಮಾಡುವಾಗ ಎಲ್ಲಿ ಹಿಂದೆ ಉಳಿದೆವು ? ನಾವು ಶ್ರೀ ಗುರುಗಳ ಬೋಧನೆಯನ್ನು ಎಷ್ಟು ಪ್ರಮಾಣದಲ್ಲಿ ಆಚರಣೆ ಮಾಡಿದ್ದೇವೆ ?’, ಎಂಬುದರ ಸಿಂಹಾವಲೋಕನ ಮಾಡಿ ಅದರ ಬಗ್ಗೆ ಚಿಂತನೆ ಮಾಡಬೇಕು.’
ಆಧಾರ : ಸನಾತನ ನಿರ್ಮಿಸಿದ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ

ಸೌಜನ್ಯ : ಸನಾತನ ಸಂಸ್ಥೆ
ಸಂಪರ್ಕ : 87622 01069

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English