‘ಎನ್ನ’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

Friday, February 14th, 2020
yenna

ಮಂಗಳೂರು : ಗ್ಲೋರಿಯಸ್ ಆಂಜೆಲೋರ್ ಪ್ರೋಡಕ್ಷನ್ ಲಾಂಛನದಲ್ಲಿ ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣದ ಕೋಡಿಕಲ್ ವಿಶ್ವನಾಥ ನಿರ್ದೇಶನದ ‘ಎನ್ನ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ನಡೆಯಿತು. ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುವಿನಲ್ಲಿ ತೆರೆಕಾಣುತ್ತಿರುವ 114ನೇ ಸಿನಿಮಾ ‘ಎನ್ನ’ ಪ್ರೇಮಕತೆಯನ್ನೊಳಗೊಂಡಿದೆ. ತುಳು ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಅವರು ಸಿನಿಮಾಕ್ಕೆ ಶುಭ ಹಾರೈಸಿದರು. 173 ಕಲಾವಿದರು ‘ಎನ್ನ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯವಾಗಿ […]

ತುಳು ಸಿನಿಮಾ ‘ಎನ್ನ’ ಫೆಬ್ರವರಿ 14 ರಂದು ಬಿಡುಗಡೆ

Thursday, December 19th, 2019
yenna

ಮಂಗಳೂರು : ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನೋ ದೃಷ್ಟಿಕೋನದಿಂದ ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗಿರುವ ತುಳು ಸಿನಿಮಾ ಎನ್ನ . ಈ ಸಿನೆಮಾವನ್ನು ಕ್ಯಾನೆಟ್ ಮ್ಯಾಥಿಯಸ್ ಪಿಲಾರ್ ನಿರ್ಮಾಣ ಮಾಡಿದ್ದು ವಿಶ್ವನಾಥ್ ಕೋಡಿಕಲ್ ನಿರ್ದೇಶನ ಮಾಡಿದ್ದಾರೆ. ಬಹುದಿನಗಳಿಂದ ಎನ್ನ ಸಿನಿಮಾದ ಸುದ್ದಿಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಒಂದು ಸಂತೋಷದ ವಿಷಯ. ಕಳೆದವರವಷ್ಟೇ ಎನ್ನ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ . ಚಿತ್ರತಂಡ ಇದೀಗ ಮತ್ತೊಂದು ಸುದ್ದಿಯನ್ನು ಬಿಡುಗಡೆಗೊಳಿಸಿದೆ. ಎನ್ನ ಸಿನೆಮದ […]

ಬಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ತುಳು ಚಿತ್ರ “ಜಬರದಸ್ತ್ ಶಂಕರ”

Wednesday, November 13th, 2019
Jabardast-shankara

ಮಂಗಳೂರು  :  ದೇವದಾಸ ಕಾಪಿಕಾಡ್ ಸಾಹಿತ್ಯ ರಚಿಸಿ ನಿರ್ದೇಶನ ಮಾಡಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ಮಾಮೂಲು ಶೈಲಿಗಿಂತ ವಿಭಿನ್ನವಾಗಿದ್ದು, ತಾಂತ್ರಿಕವಾಗಿ ಕೂಡ ಉತ್ತಮವಾಗಿ ಮೂಡಿಬಂದಿದೆ. ಸಾಮಾನ್ಯವಾಗಿ ತುಳು ಸಿನಿಮಾವೆಂದರೆ ಹಾಸ್ಯ ಪ್ರಧಾನ ಆಗಿರುತ್ತದೆ. “ಜಬರದಸ್ತ್ ಶಂಕರ”ದಲ್ಲಿ ಸಹಜವಾಗಿ ದೇವದಾಸ ಕಾಪಿಕಾಡ್, ಸಾಯಿ ಕೃಷ್ಣ ಮತ್ತಿತರರ ಹಾಸ್ಯ ಇದ್ದೇ ಇದೆ. ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಫೈಟ್ ದೃಶ್ಯಗಳಿದ್ದು, ಫೈಟ್ ಕಂಪೋಸಿಶನ್ ತುಳು ಚಿತ್ರರಂಗದ ಮಟ್ಟಿಗೆ ಉತ್ತಮವಾಗಿ ಮೂಡಿ ಬಂದಿದೆ. ಜಲನಿಧಿ ಫಿಲ್ಮ್ಸ್ […]

ವಿಕ್ಟರಿ 2

Monday, November 12th, 2018
victory

ದಿನ ಅದೇ ಕೆಲಸ, ಅದೇ ಸಂಸಾರ, ಅದೇ ಕಾಲೇಜು, ಅದೇ ಜೀವನ ಅಂತ ಬೇಜಾರಿನಲ್ಲಿ ಇರುವವರಿಗಾಗಿಯೇ ಮಾಡಿರುವ ಸಿನಿಮಾ ‘ವಿಕ್ಟರಿ 2’. ಎರಡುವರೆ ಗಂಟೆ ನಾನ್ ಸ್ಟಾಪ್ ಆಗಿ ನಗಬೇಕು ಎನ್ನುವವರು ‘ವಿಕ್ಟರಿ 2’ ಚಿತ್ರವನ್ನು ನೋಡಬಹುದು. Rating: 3.5/5 ಸಿನಿಮಾ : ವಿಕ್ಟರಿ 2 ಕಥೆ : ತರುಣ್ ಸುಧೀರ್ ನಿರ್ದೇಶನ : ಹರಿ ಸಂತೋಷ್ ಸಂಗೀತ : ಅರ್ಜುನ್ ಜನ್ಯ ತಾರಾಗಣ : ಶರಣ್, ಅಪೂರ್ವ, ಅಶ್ಮೀತಾ ಸೂದ್, ರವಿಶಂಕರ್, ಸಾಧು ಕೋಕಿಲ, ಕಲ್ಯಾಣಿ, […]

ಚಮಕ್

Friday, December 29th, 2017
chamak

ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಚಮಕ್‌ ಸಿನಿಮಾ ಇಂದು (ಡಿ.29) ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಮನರಂಜನೆಯ ಜತೆಗೆ ಕೌಟುಂಬಿಕ ಹಿನ್ನೆಲೆಯ ಕತೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಸುನಿ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಅಡಿಯಲ್ಲಿ ಟಿ.ಆರ್‌ ಚಂದ್ರಶೇಖರ್‌ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸಂತೋಷ್‌ ರಾಯ್‌ ಪತಾಜೆ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಸಾಧು ಕೋಕಿಲ, ಹನುಮಂತೆ ಗೌಡ್ರು, ವಿಜಯಲಕ್ಷ್ಮಿ ಉಪಾಧ್ಯ, ಸುಮಿತ್ರಮ್ಮ ಸೇರಿದಂತೆ ಹೆಸರಾಂತ ತಾರಾಗಣವೇ ಸಿನಿಮಾದಲ್ಲಿದೆ.

ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನು ಹೇಳುವ ‘ಸೂಂಬೆ’

Wednesday, March 18th, 2015
soombe review

ಮಂಗಳೂರು : ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನು ಹೇಳಿ ಹಾಸ್ಯ, ಪ್ರೇಮ ಹಾಗೂ ಕಲಾವಿದನ ನೈಜ ಜೀವನವನ್ನು ಎಲ್ಲೂ ಬೋರ್ ಹೊಡೆಸದಂತೆ ನಿರ್ದೇಶಿಸಿರುವುದು ಯುವ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರ ಚಿತ್ರದ ಪ್ಲಸ್ ಪಾಯಿಂಟ್. ಸಿನಿಮಾ ಸೆಟ್ ನೊಳಗೊಂದು ನಾಟಕ ತಂಡ, ನಾಟಕ ಕಲಾವಿದ ಸಿನಿಮಾ ನಟನಾಗಿ ಅವಕಾಶ ಪಡೆದು ಸಿನಿಮಾ ನಾಯಕಿಯನ್ನು ಪ್ರೀತಿಮಾಡುವ ಸನ್ನಿವೇಶಗಳನ್ನು ಸಾಯಿಕೃಷ್ಣ ಚೆನ್ನಾಗಿ ತೋರಿಸಿದ್ದಾರೆ. ನಾಯಕ ನಟನಿಗೆ ಬೆನ್ನು ಬಿಡದೆ ಕಾಡುವ ಪೈನಾನ್ಸಿಯರ್ ಖಳನಾಯಕನ ಪಾತ್ರ ಸಿನಿಮಾದಲ್ಲಿ ಕ್ಷಣ ಕ್ಷಣವೂ ಕುತೂಹಲವನ್ನು ಮೂಡಿಸಿದೆ. […]

ಮಹಾನದಿ

Thursday, July 4th, 2013
Mahanadi

‘ಮಹಾನದಿ’ ಕಲಾತ್ಮಕ ಮತ್ತು ಕಮರ್ಷಿಯಲ್ ಬೆರಕೆಯ ಸಾಲಿಗೆ ಸೇರುವ ಚಿತ್ರ. ಇಂತಹ ಚಿತ್ರಗಳಲ್ಲಿ ಸಾಕಷ್ಟು ವೈರುಧ್ಯಗಳು ಸಹಜ. ಇಲ್ಲಿ ನಿರ್ದೇಶಕರು ಆರಿಸಿಕೊಂಡಿರುವುದು ಹಳೆಯ ಕಥಾವಸ್ತು. ಅದಕ್ಕೆ ಈಗಿನ ಗ್ಲಾಮರ್ ಮೆತ್ತಲಾಗಿದೆ. ಒಂದೆಡೆ ಸದಭಿರುಚಿಯೂ ಬೇಕು, ಇನ್ನೊಂದೆಡೆ ಈಗಿನ ಪ್ರೇಕ್ಷಕರಿಗೂ ಹಿಡಿಸಬೇಕು ಎಂಬ ಗುರಿ ಇಟ್ಟುಕೊಂಡು ನಿರ್ದೇಶಕರು ಬ್ಯಾಲೆನ್ಸ್ ಮಾಡಲು ಯತ್ನಿಸಿದ್ದಾರೆ. ಆದರೆ ಹೆಚ್ಚು ಗ್ಲಾಮರ್ ಎದ್ದು ಕಂಡಿದೆ. ಕರಾವಳಿ ಮೀನುಗಾರ ಕುಟುಂಬದ ಬದುಕಿನ ಚಿತ್ರಣವನ್ನು ‘ಮಹಾನದಿ’ ಕಟ್ಟಿಕೊಡಬಹುದು ಎಂಬ ನಿರೀಕ್ಷೆ ಅಷ್ಟರ ಮಟ್ಟಿಗೆ ಯಶಸ್ವಿಯಾಗಿಲ್ಲ. ಸಾಕಷ್ಟು ಗೊಂದಲಗಳನ್ನು […]

ಅಟ್ಟಹಾಸ

Friday, February 22nd, 2013
Attahaasa

ನೈಜ ಘಟನೆಗಳ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರು ಎನ್ನುವುದು ಅಟ್ಟಹಾಸ ಚಿತ್ರದ  ನಿರ್ದೇಶಕ ಎಎಂಆರ್ ರಮೇಶ್ ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿಂದೆ ಸೈನೈಡ್ ಚಿತ್ರ ನಿರ್ದೇಶಿಸಿ ಗೆದ್ದ ಎಎಂಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ  ಬಂದ ಈ  ಚಿತ್ರ ಪ್ರಾರಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಆ ನಿರೀಕ್ಷೆಗಳು ಹುಸಿಯಾಗಿಲ್ಲ ಅನ್ನೋದು ಚಿತ್ರದ ಪ್ಲಸ್ ಪಾಯಿಂಟ್. ವೀರಪ್ಪನ್ ಹತ್ಯೆಯಾದ ಮೇಲೆ ಆತನ ಕುರಿತು ಯಾರೂ ಸಿನಿಮಾ ಮಾಡಿಯೇ ಇಲ್ಲ. ಈ ಬಗ್ಗೆ ಕನ್ನಡದಲ್ಲಿ  ಸ್ವಮೇಕ್ ಚಿತ್ರ ನಿರ್ಮಾಣವಾಗಿರುವುದು ನಿಜಕ್ಕೂ […]

ಕಿಲಾಡಿ ನಂ.786

Thursday, December 20th, 2012
Khiladi 786

ಅಕ್ಷಯ್ ಕುಮಾರ್ ಅವರ ಅಭಿನಯದ ಸಿನಿಮಾಗಳು ತಿಂಗಳಿಗೊಂದು ರಿಲೀಸ್ ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ರೌಡಿ ರಾಥೋಡ್, ಓ ಮೈಗಾಡ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದವು. ಈಗ ಕಿಲಾಡಿ 786 ಬಂದಿದೆ. ಇಲ್ಲೂ ಅವರು ಪ್ರೇಕ್ಷಕರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಅವರು ಪಂಜಾಬಿ ಡಾನ್ ಮಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೀರೊ ನ ಫ್ಯಾಮಿಲಿಗೆ ರೌಡಿಸಂ ನಂಟಿದೆ ಎಂಬ ಕಾರಣಕ್ಕೆ ವಧು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಇಂಡಿಯಾದಲ್ಲಿ ಹೆಣ್ಣು ಸಿಗಲಿಲ್ಲ […]

‘ಸ್ನೇಹಿತರು’

Friday, October 26th, 2012
Snehitharu

ಕೆ ರಾಮ್ ನಾರಾಯಣ್ ನಿರ್ದೇಶನದ ‘ಸ್ನೇಹಿತರು’ ಚಿತ್ರದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾಥ ಮಕ್ಕಳನ್ನು ಪ್ರೀತಿಸಬೇಕು, ಅಪ್ಪ-ಅಮ್ಮ ಇಲ್ಲದ ಅವರಿಗೆ ಆ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆಯಬೇಕು ಅನಾಥ ಮಕ್ಕಳಿಗೆ ಪ್ರೀತಿ, ದಯೆ, ಅನುಕಂಪ ತೋರಿಸದೇ ಬೇರೇನೋ ಮಾಡಲು ಹೊರಟರೆ ಏನೇನಾಗುತ್ತದೆ , ಎಂಬುದು ಕಥೆಯ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಹಾಸ್ಯ ಹೇರಳವಾಗಿದೆ. ಸಿನಿಮಾ ನಿರೂಪಣೆ ಎಲ್ಲವೂ ಹಿತಮಿತವಾಗಿ ಸಂಗಮಿಸಿದ್ದು ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸದ ಮಾತೇ ಇಲ್ಲ. ಗೌರವ ಪಾತ್ರದಲ್ಲಿ […]