‘ಎನ್ನ’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

3:01 PM, Friday, February 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

yenna

ಮಂಗಳೂರು : ಗ್ಲೋರಿಯಸ್ ಆಂಜೆಲೋರ್ ಪ್ರೋಡಕ್ಷನ್ ಲಾಂಛನದಲ್ಲಿ ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣದ ಕೋಡಿಕಲ್ ವಿಶ್ವನಾಥ ನಿರ್ದೇಶನದ ‘ಎನ್ನ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ನಡೆಯಿತು.

ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ತುಳುವಿನಲ್ಲಿ ತೆರೆಕಾಣುತ್ತಿರುವ 114ನೇ ಸಿನಿಮಾ ‘ಎನ್ನ’ ಪ್ರೇಮಕತೆಯನ್ನೊಳಗೊಂಡಿದೆ. ತುಳು ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಅವರು ಸಿನಿಮಾಕ್ಕೆ ಶುಭ ಹಾರೈಸಿದರು.

yenna

173 ಕಲಾವಿದರು ‘ಎನ್ನ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯವಾಗಿ ಅನೇಕ ಮಂದಿ ಹೊಸಬರಿಗೆ ಇಲ್ಲಿ ಅವಕಾಶ ನೀಡಲಾಗಿದೆ ಎಂದು ಚಿತ್ರದ ನಿರ್ದೇಶಕ ವಿಶ್ವನಾಥ ಕೋಡಿಕಲ್ ತಿಳಿಸಿದರು. ಸಮಾರಂಭದಲ್ಲಿ ತುಳು ಚಲನ ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕರಾದ ಕ್ಯಾನೆಟ್ ಮಾತಾಯಸ್ ಪಿಲಾರ್, ಮ್ಯಾಕ್ಸಿಮ್ ಡಿ’ ಸೋಜಾ, ನಿಶಾ ಪಿರೇರಾ, ಎನ್.ಜೆ ವಿನೀತ್ ಕುಮಾರ್, ಶ್ರುತಿ ಪೂಜಾರಿ ಮ್ಯಾಕ್ಸಿಮ್ ಪಿರೇರಾ, ರಾಜೇಶ್ ಕುಡ್ಲ, ಪ್ರಶಾಂತ್ ಸಿ.ಕೆ ಅಶ್ಮಿತ್ ರಾಜ್, ವೈಶಾಲಿ ಎಸ್ ಉಡುಪಿ, ಲೋಯ್ ವೆಲೆಂಟಿನ್, ಚೇತನ್ ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು. ಭವ್ಯಶ್ರೀ ಕುಡುಪು ಕಾರ್ಯಕ್ರಮ ನಿರ್ವಹಿಸಿದರು.

‘ಎನ್ನ’ ಸಿನಿಮಾ ಮಂಗಳೂರಿನಲ್ಲಿ ಜ್ಯೋತಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್ ಉಡುಪಿಯಲ್ಲಿ ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್‌ನಲ್ಲಿ ನಟರಾಜ್, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್ , ಕಾಸರಗೋಡಿನಲ್ಲಿ ಕೃಪಾ ಚಿತ್ರಾಮಂದಿರದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English