ಚಟುವಟಿಕೆ

ಸುದ್ದಿ ಪ್ರಸಾರ, ಸಮೂಹ ಮಾಧ್ಯಮಗಳ ಜಾಹೀರಾತು, ಹಾಗೂ ಪ್ರಚಾರ ವ್ಯವಸ್ಥೆಗಳಲ್ಲಿ ತೊಡಗಿಕೊಂಡಿದೆ. ಪ್ರವಾಸಿ ಮಾಹಿತಿ, ಸಂಸ್ಕೃತಿ (ಆಂತರಿಕ ವ್ಯವಹಾರ) ಮತ್ತಿತರ ಸುದ್ದಿಗಳನ್ನು ತನ್ನ ಎಲ್ಲ ಗ್ರಾಹಕರಿಗೆ ತಲಿಪಿಸುತ್ತಿದೆ. ಅಂತರ್ಜಾಲ ಹಾಗೂ ಇತರ ಸಂಬಂಧಪಟ್ಟ ಸೇವೆಗಳನ್ನು ಒದಗಿಸುವ ಮಾರುಕಟ್ಟೆಯ ಮುಂದಾಳುವಾಗಲು, ಗುರಿ ಹಿಡಿದು ಶ್ರಮಿಸುತ್ತಿದೆ.

ಜಾಹೀರಾತು:
ವಿಶಾಲ ಮತ್ತು ವಿವಿಧ ವ್ಯಾಪ್ತಿಗಳಿರುವ ಜಾಹೀರಾತುಗಳನ್ನು ಎಲ್ಲಾ ಬಗೆಯ ಸಮೂಹಮಾಧ್ಯಮಗಳಲ್ಲಿ ಪ್ರಕಾಶಿಸುವುದು ನಮ್ಮ ನಿರಂತರ ಕೆಲಸ. ದೊಡ್ಡ ಪ್ರಮಾಣದ ಜಾಹೀರಾತುಗಳು, ಬರಹಗಳು, ಮಾಧ್ಯಮ ಸೇವೆ, ಮುದ್ರಣ, ಸುದ್ದಿ ಗೋಷ್ಟಿಗಳ ವ್ಯವಸ್ಥೆಗಳನ್ನು ನಮ್ಮ ಸಂಸ್ಥೆ ನಿರ್ವಹಿಸುತ್ತದೆ.

ಮುದ್ರಣ:
ಮುದ್ರಣ, ಮಾರುಕಟ್ಟೆ ಪ್ರಚಾರ, ವ್ಯಾಪಾರ ಅಭಿವೃದ್ಧಿಗೊಳಿಸಲು ಸೂಕ್ತ ಸಲಹೆಯ ಕೆಲಸ / ತಿಳುವಳಿಕೆ ಮೂಡಿಸುವುದು, ಭಾಷಣ ಕಾರ್ಯಕ್ರಮಗಳು, ಉಪಾಹಾರ ಕೂಟಗಳು / ಪುನಃ ಮೆಲುಕು ಹಾಕುವಂತಹ ಉಪಯುಕ್ತ ಪಾಠಗಳು, ವಿಚಾರ ಗೋಷ್ಠಿಗಳು, ಪ್ರವಚನಗಳು, ತಂಡದಲ್ಲಾಗುವ ಚರ್ಚೆಗಳು ಇತ್ಯಾದಿಗಳನ್ನು ನಾವು ನಿರ್ವಹಿಸುತ್ತೇವೆ.

ಸುದ್ದಿ
ನಿರಂತರವಾಗಿ ಅಂತರ್ ಜಾಲದ ಮೂಲಕ ದೇಶ ವಿದೇಶಗಳ ಸುದ್ದಿಗಳನ್ನು ಸಚಿತ್ರ ವಾಗಿ ಅಲ್ಲದೆ ವಿಡಿಯೋ ಮೂಲಕವೂ ನೀಡುತಿದ್ದೆವೆ. ಪ್ರಪಂಚದ ವಿವಿದ ಭಾಗಗಳಲ್ಲಿರುವ ದೇಶಿಯರು, ನಮ್ಮ ತಾಣದ ಮೂಲಕ ವಿಶೇಷ ಸುದ್ದಿಗಳನ್ನು ವೀಕ್ಷಿಸುತ್ತಿದ್ದಾರೆ.