ಬಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ತುಳು ಚಿತ್ರ “ಜಬರದಸ್ತ್ ಶಂಕರ”

8:37 PM, Wednesday, November 13th, 2019
Share
1 Star2 Stars3 Stars4 Stars5 Stars
(No Ratings Yet)
Loading...

Jabardast-shankara ಮಂಗಳೂರು  :  ದೇವದಾಸ ಕಾಪಿಕಾಡ್ ಸಾಹಿತ್ಯ ರಚಿಸಿ ನಿರ್ದೇಶನ ಮಾಡಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ಮಾಮೂಲು ಶೈಲಿಗಿಂತ ವಿಭಿನ್ನವಾಗಿದ್ದು, ತಾಂತ್ರಿಕವಾಗಿ ಕೂಡ ಉತ್ತಮವಾಗಿ ಮೂಡಿಬಂದಿದೆ.
ಸಾಮಾನ್ಯವಾಗಿ ತುಳು ಸಿನಿಮಾವೆಂದರೆ ಹಾಸ್ಯ ಪ್ರಧಾನ ಆಗಿರುತ್ತದೆ. “ಜಬರದಸ್ತ್ ಶಂಕರ”ದಲ್ಲಿ ಸಹಜವಾಗಿ ದೇವದಾಸ ಕಾಪಿಕಾಡ್, ಸಾಯಿ ಕೃಷ್ಣ ಮತ್ತಿತರರ ಹಾಸ್ಯ ಇದ್ದೇ ಇದೆ. ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಫೈಟ್ ದೃಶ್ಯಗಳಿದ್ದು, ಫೈಟ್ ಕಂಪೋಸಿಶನ್ ತುಳು ಚಿತ್ರರಂಗದ ಮಟ್ಟಿಗೆ ಉತ್ತಮವಾಗಿ ಮೂಡಿ ಬಂದಿದೆ.

ಜಲನಿಧಿ ಫಿಲ್ಮ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೋಕೇಶ್ ಕೋಟ್ಯಾನ್ ತುಳು ಸಿನಿಮಾ ನಿರ್ಮಾಣ ಮಾಡಿದ್ದು, ನಿರ್ದೇಶಕ ದೇವದಾಸ ಕಾಪಿಕಾಡ್ ಅವರು ಚಿತ್ರವನ್ನು ವಿಭಿನ್ನವಾಗಿ ನೀಡಿದ್ದಾರೆ.
ಸುಮಾರು ಎರಡು ಗಂಟೆ ಏಳು ನಿಮಿಷದ “ಜಬರದಸ್ತ್ ಶಂಕರ” ಎರಡು ವಿಭಿನ್ನ ಊರುಗಳಲ್ಲಿ, ವಿಭಿನ್ನ ಸಾಮಾಜಿಕ ಹಿನ್ನೆಲೆಯಲ್ಲಿ ನಡೆಯುತ್ತದೆ. ಗ್ರಾಮಾಂತರ ಮತ್ತು ನಗರ ಜೀವನದ ಎರಡು ಪ್ರತ್ಯೇಕ ವ್ಯವಸ್ಥೆಗಳ ಪರಿಚಯ ಮಾಡುತ್ತದೆ.

Jabardast-shankara ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿ ಎರಡು ಪಾತ್ರಗಳನ್ನು ನಿರ್ವಹಿಸಿದ್ದು, ತಾರಾಮಣಿಯರಾದ ನೀತಾ ಅಶೋಕ್ ಮತ್ತು ರಾಶಿ ಬಾಲಕೃಷ್ಣ ಎಂಬಿಬ್ಬರು ಸುಂದರಿಯರು ಗಮನ ಸೆಳೆಯುತ್ತಾರೆ. ಅರ್ಜುನ್ ಕಾಪಿಕಾಡ್ ಕೆಲವು ಸಮಯದ ಅನಂತರ ಉತ್ತಮ ಪ್ರದ್ರಶನ ನೀಡಿದ್ದಾರೆ.

ಪ್ರತೀಕ್ ಶೆಟ್ಟಿ ವಿಲನ್ ಪಾತ್ರದಲ್ಲಿ ಮಿಂಚಿರುವುದು ಗಮನಾರ್ಹ. ಇದೇ ಮೊದಲ ಬಾರಿಗೆ ತನ್ನ ಪ್ರತಿಭಾ ಪ್ರದರ್ಶಕ್ಕೆ ತಕ್ಕ ಅವಕಾಶ ದೊರೆತಿದೆ ಎನ್ನಬಹುದು.

ತಾರಾಗಣದಲ್ಲಿ ಸಾಯಿ ಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್, ಶ್ರೀಕೃಷ್ಣ ಕುಡ್ಲ, ಗೋಪಿನಾಥ್ ಭಟ್, ಸತೀಶ್ ಬಂಡಾಲೆ, ಮಿಮಿಕ್ರಿ ಶರಣ್, ಸುನೀಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರು, ಗೀರೀಶ್ ಶೆಟ್ಟಿ ಕಟೀಲ್, ಸರೋಜಿನಿ ಶೆಟ್ಟಿ, ತಿಮ್ಮಪ್ಪ ಕುಲಾಲ್ ಮತ್ತಿತರರು ಇದ್ದಾರೆ.

ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿದ್ದು, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಣ ಸಿದ್ದು ಜಿಎಸ್ ಮತ್ತು ಉದಯ ಬಲ್ಲಾಳ್, ಸಂಕಲನ ಸುಜೀತ್ ನಾಯಕ್, ನೃತ್ಯ ಸಂಯೋಜನೆ ಸ್ಟಾರ್ ಗಿರಿ ಮತ್ತು ವಿನಾಯಕ ಆಚಾರ್ಯ, ಸಹ ನಿರ್ದೇಶನ ಪ್ರಶಾಂತ್ ಕಲ್ಲಡ್ಕ, ಕಲೆ ಕೇಶವ ಸುವರ್ಣ, ಕಾಸ್ಟ್ಯೂಮ್ ಶರತ್ ಪೂಜಾರಿ, ಮೇಕ್ ಅಪ್ ಮೋಹನ್, ಕೇಶಾಲಂಕಾರ ಮಮತಾ ಶೆಟ್ಟಿ ಮತ್ತು ಪಿಂಕಿ ಅಮೀನ್ ಮತ್ತಿತರರು. ಅರ್ಜುನ್ ಕಾಪಿಕಾಡ್ ಪ್ರಧಾನ ಸಹನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ಸಿನಿಮಾ ಮಾಧ್ಯಮ (ಪಿಆರ್‌ಓ) ಸಲಹೆಗಾರರಾಗಿ ಜಗನ್ನಾಥ್ ಶೆಟ್ಟಿ ಸಹಕರಿಸಿದ್ದಾರೆ.

Jabardast-shankara

Jabardast-shankara

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English