ಮಂಗಳೂರು : ಕರಾವಳಿ ಕರ್ನಾಟಕದ ಜನತೆಗೆ ದಿ. ಓಶಿಯನ್ ಪರ್ಲ್ ಮಂಗಳೂರು ಮತ್ತು ದಿ ಓಶಿಯನ್ ಪರ್ಲ್ ಉಡುಪಿ ಎಂಬ ಎರಡು ಐಷರಾಮಿ ಹೋಟೇಲನ್ನು ಪರಿಚಯಿಸಿದ ಸಾಗರ ರತ್ನ ಹೊಟೇಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇದೀಗ ಮಂಗಳೂರು ನಗರದ ಜನತೆಗೆ ಅತಿಥ್ಯ ನೀಡುವ ಸಲುವಾಗಿ ತನ್ನ ಮಹತ್ತರ ಕೊಡುಗೆಯಾಗಿ ದಿ. ಓಶಿಯನ್ ಪರ್ಲ್ ಇನ್ ಎಂಬ ಹೊಟೇಲನ್ನು ಉದ್ಘಾಟಿಸಲಿದೆ. ಮಂಗಳೂರು ನಗರದ ಬಿಜೈ-ಕಾಪಿಕಾಡ್ ರಸ್ತೆಯಲ್ಲಿ ದಿ. ಓಶಿಯನ್ ಪರ್ಲ್ ಇನ್ ನಿರ್ಮಾಣಗೊಂಡಿದೆ.
ಸೆಪ್ಟೆಂಬರ್ 11,2019 ರಂದು ಈ ಹೊಟೇಲ್ ಉದ್ಘಾಟನೆಗೊಳ್ಳಲಿದೆ.
ದಿ. ಓಶಿಯನ್ ಪರ್ಲ್ ಇನ್ ಹೊಟೇಲ್ ಪ್ರಸ್ತುತ ಮಂಗಳೂರು ನಗರದ ನಿಷ್ಠಾವಂತ ಮತ್ತು ಸಂತೃಪ್ತ ಗ್ರಾಹಕರ ಕನಸಾಗಿದೆ. ವಿಶೇಷವಾಗಿ ರಜಾದಿನಗಳಲ್ಲಿ ಅಥವಾ ಮದುವೆ ಸೀಸನ್‌ಗಳಲ್ಲಿ ನಮ್ಮ ಸಭಾಂಗಣಗಳು ತುಂಬಿರುವುದರಿಂದ ನಮ್ಮ ಗ್ರಾಹಕರನ್ನು ಅನಿವಾರ್ಯವಾಗಿ ಬೇರೆ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ನಾವು ಸೂಚಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ಗ್ರಾಹಕರು ಅತ್ಯುತ್ತಮ ವಾತಾವರಣ ಮತ್ತು ಅತಿಥ್ಯದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ಗ್ರಾಹಕರ ಆಶಯದ ಮೇರೆಗೆ ಇನ್ನೊಂದು ಸಂಸ್ಥೆಯನ್ನು ಹುಟ್ಟು ಹಾಕುವ ನಿರ್ಧಾರಕ್ಕೆ ಬರಲಾಯಿತು. ಗ್ರಾಹಕರ ಸಂತೃಪ್ತಿಯೇ ನಮ್ಮ ಮೂಲ ಉದ್ದೇಶ ಎಂದು ತಿಳಿದು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.
ದಿ. ಓಶಿಯನ್ ಪರ್ಲ್ ಇನ್ ನ ವಿಶೇಷತೆಗಳು:
* ದಿ. ಓಶಿಯನ್ ಪರ್ಲ್ ಇನ್ ನಾಲ್ಕು ಮಹಡಿಗಳನ್ನು ಹೊಂದಿದ್ದು ೬೮ ಸೊಗಸಾದ ಡಿಲೆಕ್ಸ್ ರೂಂಗಳನ್ನು, ಮೂರು ಸೂಟ್ ರೂಂಗಳನ್ನು ಹೊಂದಿದೆ.
* ನೆಲಮಳಿಗೆಯಲ್ಲಿ (Basement) ಎರಡು ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.
ತಳ ಅಂತಸ್ತುವಿನಲ್ಲಿ(Ground floor) ಎರಡು ರೆಸ್ಟೊರೆಂಟ್ ಮತ್ತು ಪಾಕಶಾಲೆ ನಿರ್ಮಾಣಗೊಂಡಿದೆ. *ಒಟ್ಟಿನಲ್ಲಿ ದಿ. ಓಶಿಯನ್ ಪರ್ಲ್ ಇನ್ ಮಂಗಳೂರಿನ ಜನತೆಗೆ ತನ್ನ ಅತಿಥ್ಯದ ಸವಿಯನ್ನು ಉಣಬಡಿಸಲು ಸಜ್ಜಾಗಿದೆ.
ಏಶಿಯಾ ಹೌಸ್:
ಚೈನೀಸ್, ಥಾಯ್, ಜಪಾನೀಸ್ ಮತ್ತು ವಿವಿಧ ಆಹಾರ ಸಮ್ಮಿಲನಗಳನ್ನು ತಯಾರಿಸುವ ನಗರದ ಮೊತ್ತ ಮೊದಲ ಫೈನ್ ಡೈನ್ ರೆಸ್ಟೋರೆಂಟ್ ಏಶಿಯಾನ್ ಹೌಸ್ ನಿಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿ ನಮ್ಮ ಗ್ರಾಹಕರು ಜಪಾನ್ ಮೂಲದ ಖಾದ್ಯವಾದ ಸುಶಿಯ ಸವಿರುಚಿಯನ್ನು ಸವಿಯಬಹುದಾಗಿದೆ. ಈ ಸುಶಿ ಖಾದ್ಯವನ್ನು ಬೇಯಿಸಿದ ಅಕ್ಕಿ, ಮೀನು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ.
ತೆಪ್ಪನ್ಯಾಕಿ ಪಾಕ ಪದ್ದತಿ:
ದಿ. ಓಶಿಯನ್ ಪರ್ಲ್ ಇನ್ ತೆಪ್ಪನ್ಯಾಕಿ ಪಾಕ ಪದ್ದತಿ ಪರಿಚಯಿಸುತ್ತಿದ್ದು ಇಲ್ಲಿ ಗ್ರಾಹಕರು ತಮ್ಮ ಇಷ್ಟವಾದ ಜಪಾನಿನ ಖಾದ್ಯವನ್ನು ತಮ್ಮ ಎದುರಿನಲ್ಲಿ ಕಬ್ಬಿಣದ ಗ್ರಿಡಲ್ (Iron Griddle) ಬೇಯಿಸಿ ಸವಿಯಬಹುದಾಗಿದೆ.
ದಿ. ಓಶಿಯನ್ ಪರ್ಲ್ ಇನ್‌ನಲ್ಲಿ 100 ಜನರು ಕುಳಿತುಕೊಳ್ಳುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್
ಸಾಗರ ರತ್ನ ಸಸ್ಯಹಾರಿ ರೆಸ್ಟೋರೆಂಟ್ ನಿಮ್ಮನ್ನು ಸ್ವಾಗತಿಸುತ್ತದೆ.
ಶೀಘ್ರದಲ್ಲಿ 300 ಜನರು ಕುಳಿತುಕೊಳ್ಳುವ ಕಾನ್ಫರೇನ್ಸ್ ಹಾಲ್‌ನ್ನು ತೆರೆಯಲಿದೆ >
ದಿ. ಓಶಿಯನ್ ಪರ್ಲ್ ಇನ್ ಕರ್ನಾಟಕದಲ್ಲಿ ಸಾಗರ ರತ್ನ ಹೋಟೇಲ್ಸ್ ಪ್ರೈ ಲಿ.ನ ನಾಲ್ಕನೇ ಹೊಟೇಲ್ ಆಗಿದೆ.
ದಿ. ಓಶಿಯನ್ ಪರ್ಲ್ ದಿಲ್ಲಿಯಲ್ಲಿ ಎರಡು, ಮಂಗಳೂರಿನಲ್ಲಿ ಎರಡು, ಉಡುಪಿಯಲ್ಲಿ ಒಂದು ಮತ್ತು ಹುಬ್ಬಳಿ ಧಾರವಾಡದಲ್ಲಿ ಒಂದು ಹೋಟೆಲ್‌ನ್ನು ಹೊಂದಿದೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ನೂತನ ಹೋಟೆಲನ್ನು ತೆರೆಯಲಿದೆ. ಜೊತೆಗೆ ಮಂಗಳೂರಿನ ಕೊಡಿಯಲ್‌ಬೈಲ್, ಟಿ.ಎಮ್.ಎ ಪೈ ಕನ್ವೇಶನ್ ಸೆಂಟರ್‌ನ ಆಡಳಿತವನ್ನು ನಡೆಸಿ ಅಲ್ಲಿಯೂ ತಮ್ಮ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ.
ದಿ. ಓಶಿಯನ್ ಪರ್ಲ್ ಹೊಟೇಲ್ ಕಳೆದ 10 ವರುಷಗಳಿಂದ ಕರಾವಳಿ ಜಿಲ್ಲೆ ಗ್ರಾಹಕರಿಗೆ ಅತಿಥ್ಯ ನೀಡುವಲ್ಲಿ ಹೊಸ ಮಾನದಂಡವನ್ನೇ ನಿರ್ಮಿಸಿದೆ. ದಿ. ಓಶಿಯನ್ ಪರ್ಲ್ ಇನ್ ಹೊಟೇಲ್‌ನ ವೈಶಿಷ್ಟತೆಯನ್ನು ಹೇಳುವುದಾದರೆ ಉತ್ತಮ ಪರಿಸರ, ಅತ್ಯುತ್ತಮ ಗ್ರಾಹಕ ಸೇವೆ, ಸಮಾಜದ ಅತಿಗಣ್ಯರು ಅಥವಾ ಸಾಮಾನ್ಯರು ಎಂಬುದನ್ನು ಲೆಕ್ಕಿಸದೆ ಗ್ರಾಹಕರು, ಹೊಟೇಲ್‌ಗೆ ಪ್ರವೇಶಿಸುತ್ತಿದ್ದಂತೆ ಮಾಲಕರ ಸಹಿತ ಸಕಲ ಆಡಳಿತ ವರ್ಗ ಗ್ರಾಹಕರಿಗೆ ತಲೆಬಾಗುತ್ತದೆ. ಜೊತೆಗೆ ಕೈಗೆ ಎಟಕುವ ದರದಲ್ಲಿ ವಿವಿಧ ಆಹಾರಗಳು ಇಲ್ಲಿ ದೊರೆಯುತ್ತವೆ. ಆಗಾಗಿ ದಿ. ಓಶಿಯನ್ ಪರ್ಲ್ ಇನ್ ಹೊಟೇಲ್ ನಿಷ್ಟಾವಂತ ಮತ್ತು ಸಂತೃಪ್ತರ ತಾಣ ಎಂದು ಹೇಳಬಹುದಾಗಿದೆ. ಇದೀಗ ದಿ. ಓಶಿಯನ್ ಪರ್ಲ್ ಇನ್ ನ ಆಡಳಿತ ಮಂಡಳಿ ತನ್ನ ಹೊಟೇಲ್‌ಗೆ ಮಂಗಳೂರಿನ ಜನತೆ ಮತ್ತು ಗ್ರಾಹಕರಿಗೆ ಪ್ರೋತ್ಸಾಹಿಸುವಂತೆ ಕೇಳಿಕೊಂಡಿದೆ.
ಸಾಗರ ರತ್ನ ಹೋಟೆಲ್ ಗುಂಪಿನ ಬಗ್ಗೆ :
ದಿ. ಓಶಿಯನ್ ಪರ್ಲ್ ಹೊಟೇಲ್ ಸಂಸ್ಥೆ ಸಾಗರ ರತ್ನ ಗುಂಪಿನ ಅಂಗಸಂಸ್ಥೆಯಾಗಿದೆ. ಪ್ರಪ್ರಥಮ ಬಾರಿಗೆ ದಿಲ್ಲಿಯಲ್ಲಿ ದಕ್ಷಿಣ ಭಾರತದ ಆಹಾರ ಶೈಲಿಯನ್ನು ಪರಿಚಯಿಸಿದ ಕೀರ್ತಿ ಸಾಗರ ರತ್ನ ಹೊಟೇಲ್ಸ್ ಗುಂಪಿಗೆ ಸಲ್ಲುತ್ತದೆ. ಜೊತೆಗೆ ಬೆಳ್ಳುಳ್ಳಿ, ಈರುಳ್ಳಿ ಉಪಯೋಗ ಇಲ್ಲದೆ ಶುದ್ದ ಸಸ್ಯ ಆಹಾರವನ್ನು ಬಯಸುವ ಗ್ರಾಹಕರಿಗೆ ಸಾತ್ವಿಕ ಆಹಾರವನ್ನು ಸಹ ತಮ್ಮ ಕೆಲವೊಂದು ಹೊಟೇಲ್‌ಗಳಲ್ಲಿ ಪರಿಚಯಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ಸಾಗರ ರತ್ನ ಗುಂಪಿನ ಹೊಟೇಲ್‌ಗಳು ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಸಮುದ್ರ ಆಹಾರ ಸಹಿತ ವಿಶೇಷ ವೈವಿಧ್ಯತೆಯ ಆಹಾರವನ್ನು ತಯಾರಿಸಿ ಗ್ರಾಹಕರಿಗೆ ಪೂರೈಸಲು ಪ್ರಸಿದ್ಧವಾಗಿದೆ.
Click this button or press Ctrl+G to toggle between Kannada and English