ವೆಸ್ಟ್ ಇಂಡೀಸ್ : ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ 08 ಕ್ಲ್ಯಾಶ್ನಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾ ತಂಡವನ್ನು 21 ರನ್ಗಳಿಂದ ಮಣಿಸಿದ ಅಫ್ಘಾನಿಸ್ತಾನ, ತಮ್ಮ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
10ಕ್ಕೆ 10 ವಿಕೆಟ್ ಉರುಳಿಸುವ ಮೂಲಕ ಚಾಂಪಿಯನ್ ಆಗಿ ಮೆರೆದವರಿಗೆ ರಶೀದ್ ಪಡೆ ಕೊಟ್ಟ ಶಾಕ್ ಸದ್ಯ ಕ್ರಿಕೆಟ್ ಪ್ರೇಮಿಗಳನ್ನು ಆಶ್ಚರ್ಯ ತಂದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನದ ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್ (60 ರನ್, 49 ಎಸೆತ, 4 ಬೌಂಡರಿ, 4 ಸಿಕ್ಸರ್), ಇಬ್ರಾಹಿಂ ಜರ್ದಾನ್ (51 ರನ್, 48 ಎಸೆತ, 6 ಬೌಂಡರಿ) ಆರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ (4-0-28-3), ಆ್ಯಡಂ ಜಂಪಾ (4-0-28-2), ಮಾರ್ಕಸ್ ಸ್ಟೋಯಿನಿಸ್ (2-0-19-1), ಗ್ಲೆನ್ ಮ್ಯಾಕ್ಸ್ವೆಲ್ (2-0-12-0), ಆಶ್ಟನ್ ಅಗರ್ (4-1-17-0), ಜೋಶ್ ಹೇಜಲ್ವುಡ್ (4-0-39-0) ರನ್ ನೀಡಿ ವಿಕೆಟ್ ಪಡೆದರು. ಅಂತಿಮವಾಗಿ 10ಕ್ಕೆ 10 ವಿಕೆಟ್ ಕಳೆದುಕೊಳ್ಳುವ ಮೂಲಕ ಆಫ್ಘಾನ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಶರಣಾಯಿತು.
Click this button or press Ctrl+G to toggle between Kannada and English