ಮಂಗಳೂರು : ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನೋ ದೃಷ್ಟಿಕೋನದಿಂದ ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗಿರುವ ತುಳು ಸಿನಿಮಾ ಎನ್ನ . ಈ ಸಿನೆಮಾವನ್ನು ಕ್ಯಾನೆಟ್ ಮ್ಯಾಥಿಯಸ್ ಪಿಲಾರ್ ನಿರ್ಮಾಣ ಮಾಡಿದ್ದು ವಿಶ್ವನಾಥ್ ಕೋಡಿಕಲ್ ನಿರ್ದೇಶನ ಮಾಡಿದ್ದಾರೆ.
ಬಹುದಿನಗಳಿಂದ ಎನ್ನ ಸಿನಿಮಾದ ಸುದ್ದಿಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಒಂದು ಸಂತೋಷದ ವಿಷಯ. ಕಳೆದವರವಷ್ಟೇ ಎನ್ನ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ .
ಚಿತ್ರತಂಡ ಇದೀಗ ಮತ್ತೊಂದು ಸುದ್ದಿಯನ್ನು ಬಿಡುಗಡೆಗೊಳಿಸಿದೆ.
ಎನ್ನ ಸಿನೆಮದ ಸೆನ್ಸರ್ ನಡೆದಿದ್ದು ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿಯಿಂದ ಯು ಎ ಸರ್ಟಿಫಿಕೇಟ್ ದೊರೆತಿದೆ. ಸಿನಿಮಾ ಫೆಬ್ರವರಿ 14 ರಂದು ದಕ್ಷಿಣ ಕನ್ನಡ ಉಡುಪಿ ಹಾಗು ರಾಜ್ಯದ ಇತರ ಜಿಲ್ಲೆಗಳಲ್ಲೂ ಬಿಡುಗಡೆಗೊಳ್ಳಲಿದೆ. ಒಟ್ಟು 173 ಹೊಸ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಕೋಸ್ಟಲ್ ವೂಡ್ ನಲ್ಲಿ ಪ್ರಥಮ ಬಾರಿಗೆ ಮಹಿಳೆ ಯೊಬ್ಬರು ಛಾಯಾಗ್ರಹಣ ಮಾಡಿದ್ದೂ ಈ ಸಿನಿಮಾದ ಮತ್ತೊಂದು ವಿಶೇಷ.
ಎನ್ನ ಸಿನಿಮಾಕ್ಕೆ ವೈಶಾಲಿ ಎಸ್ ಉಡುಪಿ ಛಾಯಾಗ್ರಹಣ ಮಾಡಿದ್ದೂ ಅನುಷ್ ಚಂದ್ರ ಹಾಗು ವಿಶ್ವನಾಥ್ ಕೋಡಿಕಲ್ ಸಂಕಲನ ಮಾಡಿದ್ದಾರೆ.
ಲೋಯ್ ವೆಲೆಂಟಿನ್ ಸಂಗೀತ ನಿರ್ದೇಶನ ಮಾಡಿರೋ ಎನ್ನ ಸಿನಿಮಾಕ್ಕೆ ಲೋಯ್ ವೆಲೆಂಟಿನ್ ಹಾಗು ಶಿಲ್ಪಾ ಕ್ಯೂಟಿನೊ ಹಾಡುಗಳನ್ನ ಹಾಡಿದ್ದಾರೆ. ಪ್ರಶಾಂತ್ ಸಿ ಕೆ ಹಾಗು ವಿಶ್ವನಾಥ್ ಕೋಡಿಕಲ್ ಸಂಭಾಷಣೆ ಬರೆದಿದ್ದು ಮ್ಯಾಕ್ಸಿಮ್ ಪೆರೀರಾ ಹಾಗು ಧನುಷ್ ಬಜಾಲ್ ಇವರ ಸಾಹಿತ್ಯ ಇದೆ. ಒಂದಕ್ಕಿಂತ ಒಂದು ವಿಭಿನ್ನ ಪೋಸ್ಟರ್ಸ್ ಗಳಿಂದ ಜನರ ಮನಗೆಲ್ಲುತ್ತಿರೋ ಎನ್ನ ಸಿನಿಮಾದ ಪೋಸ್ಟರ್ಸ್ ನ ಎಡಿಟಿವ್ ಕ್ರಿಯೇಷನ್ಸ್ ಡಿಸೈನ್ ಮಾಡಿದ್ದೂ ಸಿನಿಮಾಕ್ಕೆ ದಿಶಾಂತ್ ಉಜರೇ ,ವಿನಯ್ ಉಜಿರೆ , ಭವ್ಯ ಶ್ರೀ ಕುಡುಪು, ಸತ್ಯವತಿ ಶೆಟ್ಟಿ, ಭಾರ್ಗವಿ ಕಲ್ಲಡ್ಕ ಹಾಗು ಗಣೇಶ್ ಪೈ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮ್ಯಾಕ್ಸಿಮ್ ಪೆರೀರಾ ಇವರ ಸಹ ನಿರ್ದೇಶನ ಇರುವ ಎನ್ನ ಸಿನಿಮಾಕ್ಕೆ ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ವಹಣೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ.
ಎನ್ನ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ವಿನೀತ್ ಕುಮಾರ್, ಪ್ರಿಥ್ವಿ ಅಂಬರ್, ಶ್ರುತಿ ಪೂಜಾರಿ, ಅಶ್ಮಿತ್ ರಾಜ್,ಪ್ರತೀಕ್ ಸನಿಲ್, ಪ್ರಶಾಂತ್ ಸಿ ಕೆ, ಧೀರಜ್ ನೀರ್ಮಾರ್ಗ, ಯತೀಶ್ ಪಾಲಡ್ಕ, ವಿನೋದ್ ಚಾರ್ಮಾಡಿ, ಗಾಡ್ವಿನ್ ಕ್ಯಾಸ್ಟಲಿನೋ , ಸಂದೀಪ್ ಶೆಟ್ಟಿ ರಾಯ್, ರಮೇಶ್ ರೈ ಕುಕ್ಕುವಳ್ಳಿ, ಕಾನ್ಯೂಟ್ ಮ್ಯಾಥಿಯಸ್ , ಜೋಸೆಫ್ ಮ್ಯಾಥಿಯಸ್ , ಸುಜಾತಾ ಶೆಟ್ಟಿ, ಕವಿತಾ ದಿನಕರ್, ಸ್ವಾತಿ ಕಾಪು ಅಭಿನಯಿಸಿದರೆ. ಕರೋಪಾಡಿ ಅಕ್ಷಯ ನಾಯಕ್ ಇವರ ಸ್ಥಿರ ಚಿತ್ರಣ ಇದ್ದು ಶ್ವೇತಾ ಅರೆಹೊಳೆ ಇವರ ನೃತ್ಯ ಸಂಯೋಜನೆ ಇದೆ. ಸೌಂಡ್ ಎಂಜಿನಿಯರ್ ಆಗಿ ರೈನಲ್ ಹಾಗೂ ಮ್ಯಾಕ್ಲಿನ್ ಡಿಸೋಜ ಕಾರ್ಯನಿರ್ವಹಿಸಿದ್ದಾರೆ.
ತುಂಬಾ ವಿಶೇಷತೆ ಗಳನ್ನ ಹೊಂದಿರೋ ಎನ್ನ ಸಿನಿಮಾ ಜನರು ಕಾತುರದಿಂದ ಕಾಯುತಿರೋ ಸಿನಿಮಾ ಎಂದರೆ ತಪ್ಪಾಗಲಾರದು.
Click this button or press Ctrl+G to toggle between Kannada and English