ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ದೀಪಾವಳಿ ಆಹಾರ ಸಾಮಗ್ರಿ‌ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಜೀವರಕ್ಷಕ ಈಶ್ವರ್ ಮಲ್ಪೆ

9:25 PM, Monday, November 18th, 2024
Share
1 Star2 Stars3 Stars4 Stars5 Stars
(No Ratings Yet)
Loading...

ತೊಕ್ಕೊಟ್ಟು : ನಾವು ಮಾಡುತ್ತಿರುವ ಒಳ್ಳೆಯ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಪುರಸ್ಕರಿಸುವುದು, ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ, ಸಮುದ್ರದಲ್ಲಿ ಈಜಾಡಬೇಡಿ ಎಂದು ಬೋರ್ಡ್ ಹಾಕಿದರೂ ಅದರ ಅಡಿಯಲ್ಲಿಯೇ ಬಟ್ಟೆಕಳಚಿ ಸಮುದ್ರದಲ್ಲಿ ಈಜಾಡುವ ಸಾಹಸದಿಂದ ಸಾವನ್ನಪ್ಪುವುದು ದುರಂತ, ಇದರಿಂದ ಮನನೊಂದು ಮಾನವನ ಬದುಕನ್ನು ಬದುಕಿಸಬೇಕೆಂಬ ಪಣ ತೊಟ್ಟು 900 ಕ್ಕೂ ಅಧಿಕ ಜೀವಗಳನ್ನು ಉಳಿಸಿದ ಸಾರ್ಥಕತೆ ಇದೆ ಅದರ ಜೊತೆಯಲ್ಲಿ ಎಷ್ಟೋ ಜೀವಗಳನ್ನು ಉಳಿಸಲಾಗದಂತ ನೋವು ಕೂಡ ಇದೆ ಆದರೂ ದೃತಿಗೆಡದೆ ಸಮಾಜ ಕಾರ್ಯದಲ್ಲಿ ತೊಡಗಿಸಿರುವುದರಿಂದ ಜನರ ಪ್ರೀತಿ ಆಶೀರ್ವಾದಗಳು ಅಲ್ಲಲ್ಲಿ ಸಿಗುತ್ತಿದೆ ಎಂದು ಕರಾವಳಿ ಕಂಡಂತಹ ಅಪೂರ್ವ ಜೀವರಕ್ಷಕ ಈಶ್ವರ್ ಮಲ್ಪೆ ಅಭಿಪ್ರಾಯಪಟ್ಟರು.

ಅವರು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ನಡೆದ 200 ಅಶಕ್ತ ಕುಟುಂಬಗಳಿಗೆ ದೀಪಾವಳಿ ಆಹಾರ ಸಾಮಗ್ರಿ ಕಿಟ್ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿದರು.

ರಸ್ತೆಯಲ್ಲಿ ದಾಟಲು ಪರದಾಡುತ್ತಿರುವ ಹಿರಿಯರನ್ನು ರಸ್ತೆ ದಾಟಲು ಸಹಕರಿಸುವುದು ಕೂಡಾ ಸಮಾಜ ಸೇವೆ, ಹಣ ಕೊಟ್ಟೇ ಸಮಾಜ ಸೇವೆ ಮಾಡಬೇಕಿಲ್ಲ, ವಾಹನಗಳ ಅಡಿಗೆ ಬಿದ್ದ ಅನಾಥ ಪ್ರಾಣಿಗಳನ್ನು ರಕ್ಷಿಸುವುದು ಸಮಾಜಸೇವೆ ದೊಡ್ಡ ಮಟ್ಟಿನ ಸಮಾಜ ಸೇವೆಯಲ್ಲಿ ತೊಡಗಿಸಲು ಅಸಾಧ್ಯವಾದರೂ ಸ್ಥಳೀಯ ಸಮಸ್ಯೆಗಳಲ್ಲಿ ಸ್ಪಂದಿಸುವುದರ ಮುಕಾಂತರ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ, ಸಾಯಿ ಪರಿವಾರ್ ನಂತ ಸಂಸ್ಥೆಯ ಜೊತೆ ಸೇರಿ ಕೆಲಸ ಮಾಡಿ ಭಗವಂತ ಅನುಗ್ರಹ ಇದ್ದೇ ಇರುತ್ತದೆ ಎಂದರು,

ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷ ಸತೀಶ್‌ ಕುಂಪಲ ಅಧ್ಯಕ್ಷತೆ ವಹಿಸಿ ಸಾಯಿ ಪರಿವಾರ್ ಯುವಕರನ್ನು ಸೇವಾ ಕಾರ್ಯಕ್ಕೆ ಹುರುದುಂಬಿಸುವುದರ ಮೂಲಕ ಅಶಕ್ತರ ಪಾಲಿನ ಸಂಜೀವಿನಿಯಾಗಿದೆ, ನಮ್ಮನ್ನು ಸಮಾಜ ಗೌರವಿಸಬೇಕಾದರೆ ಸಮಾಜ ಸೇವೆಯಿಂದಲೇ ಹೊರತು ಬೇರೆ ವಿಧದಿಂದಲ್ಲ ಹೆಸರು ಮತ್ತು ಉಸಿರು ಮಾನವನಿಗೆ ಮುಖ್ಯ ಎಂದರು.

ವಿಶೇಷ ಅತಿಥಿಗಳಾಗಿ ಬರ್ಕೆ ಪ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ, ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ದ ಅಧ್ಯಕ್ಷ ವರದರಾಜ್ ಬಂಗೇರ ಉಳ್ಳಾಲ, ಅಸ್ತೃ ಗ್ರೂಪ್ ಅಪ್ ಕಂಪೆನೀಸ್ ನ ಸಿ.ಇ.ಒ ಲಾಂಚುಲಾಲ್ ಕೆ.ಎಸ್, ಮೂಕಾಂಬಿಕ ಕನ್ಸ್ಟಕ್ಷನ್ ನ ಚಂದ್ರಹಾಸ್ ಪಂಡಿತ್ ಹೌಸ್ ತುಳು ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಅನ್ವಿತ್ ಇಲೆಕ್ಟ್ರಾನಿಕ್ ನ ಮಾಲಕ ಪ್ರಕಾಶ್, ಕದ್ರಿ ಇವೇಂಟ್ಸ್ ನ ವ್ಯವಸ್ಥಾಪಕ ಜಗದೀಶ್ ಕದ್ರಿ ಆಗಮಿಸಿದ್ದರು. ಸಾಯಿ ಪರಿವಾರ್ ನ ಟ್ರಸ್ಟಿಗಳಾದ ಗಣೇಶ್ ಅಂಚನ್, ಗೀತೇಶ್ ಕುತ್ತಾರ್, ಮಟನ್ ರಾಜಾ, ಪುರುಷೋತ್ತಮ ಕಲ್ಲಾಪು, ಪ್ರಮುಖರುಗಳಾದ ಸತೀಶ್ ಭಟ್ನಗರ, ಕುಶಾಲ್ ರಾಜ್ ತೊಕ್ಕೊಟ್ಟು, ಅಶೋಕ್ ಉಚ್ಚಿಲ್, ಗಣೇಶ್ ಪಂಡಿತ್ ಮುಳಿಹಿತ್ಲು, ಪ್ರೀತಂ ಶೆಟ್ಟಿ ಮಾಡೂರು, ಮಾಧವ ಉಳ್ಳಾಲ್, ಶವಿತ್ ಉಚ್ಚಿಲ್, ಜಗದೀಶ್ ಆಚಾರ್ಯ, ಹರೀಶ್ ಕೊಟ್ಟಾರಿ, ರತ್ನಾಕರ ಉಳ್ಳಾಲ್, ಹರ್ಷರಾಜ್ ಕುಂಪಲ, ಹರ್ಷರಾಜ್ ಕುಲಾಲ್, ರಘುನಾಥ್ ಕುಲಾಲ್, ತಾರನಾಥ ತೊಕ್ಕೊಟ್ಟು, ಗುರುಪ್ರಸಾದ್ ಕೊಟ್ಟಾರಿ, ಶಿವರಾಮ ಗಟ್ಟಿ ಎಕ್ಕೂರು, ಪ್ರವೀಣ್ ಕೊಲ್ಯ, ಸುದೀರ್ ಕುಲಾಲ್, ಮಹಿಳಾ ಟ್ರಸ್ಟ್ ನ ವನಿತ ಗಂಡಿ, ಪ್ರಮೀಳಾ ಪ್ರವೀಣ್, ದೀಕ್ಷಾ ಕುತ್ತಾರ್, ಜಯಶ್ರೀ ಕೊಟ್ಟಾರಿ ಮುಂತಾದವರಿದ್ದರು.

ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್ ಕುಂಪಲ‌ ನಿರೂಪಿಸಿ, ಸ್ಥಾಪಕ ಸದಸ್ಯೆ ಧನಲಕ್ಷ್ಮಿ ಗಟ್ಟಿ ಸ್ವಾಗತಿಸಿದರು, ರಜನೀಶ್ ನಾಯಕ್ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English