ಲಾಕ್‍ಡೌನ್ ನಡುವೆ ಗ್ರಾಮ ಪಂಚಾಯತ್ ಸದಸ್ಯನ ಮಗಳ ಅದ್ಧೂರಿ ಮದುವೆ, ಮುಂದೇನಾಯ್ತು ನೋಡಿ !

12:32 PM, Monday, May 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ambagilu Marraigeಮಂಡ್ಯ:  ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿರುವ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ಗ್ರಾ.ಪಂ ಸದಸ್ಯರೊಬ್ಬರು ಲಾಕ್‍ಡೌನ್ ನಿಯಮ ಮೀರಿ  ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮದುವೆಗೆ ಯಾವುದೇ ಅನುಮತಿ ಪಡೆಯದೆ ಗ್ರಾ.ಪಂ ಸದಸ್ಯ ಮಹೇಶ್ ಎಂಬವರು ಲಾಕ್‍ಡೌನ್ ನಿಯಮ ಮೀರಿ ಮದುವೆ ಕಾರ್ಯಕ್ರಮ ನಡೆಸಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿದು ಅಧಿಕಾರಿಗಳು ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಮದುವೆ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ತಹಶೀಲ್ದಾರ್ ಮೇಲೆ ವಧು-ವರನ ಕುಟುಂಬಸ್ಥರು ಹಲ್ಲೆ ಯತ್ನ, ಅಸಭ್ಯವಾಗಿ ವರ್ತಿಸಿದ  ಘಟನೆಯು ಈ ಸಂದರ್ಭ ನಡೆದಿದೆ.

Ambagilu Marraigeದಾಳಿ ವೇಳೆ ಅಧಿಕಾರಿಗಳು ಮದುವೆ ನಿಲ್ಲಿಸುವಂತೆ ಕುಟುಂಬಸ್ಥರಿಗೆ ಸೂಚಿಸಿದಾಗ ಅಧಿಕಾರಿಗಳು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ನಡುವೆ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ.

ಈ ನಡುವೆ ಅಧಿಕಾರಿಗಳು 3 ಕಾರುಗಳನ್ನ ಸೀಜ್ ಮಾಡಿದ್ದಾರೆ. ಅಲ್ಲದೆ ಪ್ರಕೃತಿ ವಿಕೋಪ ತಡೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಕಾಯ್ದೆ ಅಡಿ ದೂರು ದಾಖಲಾಗಿದೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English