ಅಕ್ರಮ ದಂಧೆ – ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆಯ ಬಂಧನ

11:00 PM, Saturday, June 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Neha-Shettyಬೆಂಗಳೂರು:  ನಗರದಲ್ಲಿ ಜೂಜು ಅಡ್ಡೆನಿರ್ಮಿಸಿ ಕಾನೂನು ಬಾಹಿರ ಕೃತ್ಯ ಆರೋಪದಡಿಯಲ್ಲಿ ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹರಿರಾಜ್ ಶೆಟ್ಟಿಯನ್ನು ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ.  ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ದಾಖಲಾಗಿದೆ.

ಬೆಂಗಳೂರಿನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ನಡೆಸ್ತಿದ್ದ, ಗೇಮ್ ಗಳು ಬ್ಯಾನ್ ಇರುವ ಸ್ಕಿಲ್ ಗೇಮ್, ವೀಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಆರೋಪ ಇದೆ.

ಕಳೆದ 2014 ರಿಂದಲೂ ಈ ಅಕ್ರಮ ದಂಧೆ ನಡೆಸುತ್ತಿದ್ದ ಜೂಜು ಅಡ್ಡೆ ನಡೆಸುತ್ತಿದ್ದ  ಹರಿರಾಜ್ ಶೆಟ್ಟಿ, ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ವೈಯಾಲಿ ಕಾವಲ್, ಕೋರಮಂಗಲ, ಅಶೋಕನಗರಣ ಬಸವೇಶ್ವರ ನಗರ, ಕೆ.ಪಿ ಅಗ್ರಹಾರ, ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಎಸಿಬಿಗೆ  ದೂರು ನೀಡ್ತಿದ್ದ ಹರಿರಾಜ್,  ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ ಮಾಡಿ  ಪೋಲೀಸರ ತೇಜೋವಧೆ ಮಾಡ್ತಿದ್ದ ಆರೋಪ ಇದೆ.

ಹರಿರಾಜ್ ವಿರುದ್ಧ ಗೂಂಡಾ ಆಕ್ಟ್ ಅಡಿ ಕೇಸ್ ದಾಖಲಾಗಿದೆ. ಹೈಕೋರ್ಟ್ ರಜಾ ದಿನದ ಪೀಠದಲ್ಲಿ ಚಾಲೆಂಜ್ ಮಾಡಿ ಸ್ಟೇ ಪಡೆದಿದ್ದ ಹರಿರಾಜ್,  ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ. ಆರೋಪಿಯ ಸ್ಟೇ ತೀರ್ಪುನ್ನ ಅಸಿಂಧುಗೊಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English