ಬೆಂಗಳೂರು : ನಗರದ ಎನ್ ಆರ್ ಐ ಲೇಔಟ್‌ನಲ್ಲಿರುವ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ಯುವತಿ ಕೇರಳದ ಕ್ಯಾಲಿಕಟ್‌ನಲ್ಲಿ ಪತ್ತೆಯಾಗಿದ್ದಾಳೆ.
ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಎಂಟು ಮಂದಿ ವಿಕೃತರು ಸತತ ಒಂದು ಗಂಟೆ ಕಾಲ ಹಿಂಸೆ ನೀಡಿರುವ ವಿಡಿಯೋ ತುಣುಕು ಬಹಿರಂಗವಾಗಿದೆ. ಎಂಟು ಮಂದಿ ಬಾಂಗ್ಲಾ ನಿವಾಸಿಗಳು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಹಲ್ಲೆ ನಡೆಸಿದ್ದಾರೆ. ವೇಶ್ಯಾವಾಟಿಕೆ ವೃತ್ತಿಗೆ ಒಳಗಾಗದಿದ್ದರೆ ಹೀಗೇ ಹಿಂಸೆ ನೀಡುವುದಾಗಿ ಹೆದರಿಸಿದ್ದಾರೆ. ತದನಂತರದಲ್ಲಿ ಹಲ್ಲೆಗೆ ಒಳಗಾದ ಯುವತಿ ಕೇರಳಗೆ ತೆರಳಿದ್ದಾಳೆ.
ಬಾಂಗ್ಲಾದೇಶದಲ್ಲಿದ್ದ ಹಿಂದೂ ಯುವತಿಯರನ್ನು ಹೀಗೆ ಮಾನವ ಕಳ್ಳಸಾಗಾಣಿಕೆಯ ಮೂಲಕ ತಂದು ಕೆಲಸ ಕೊಡಿಸುವ ಆಮಿಷ ತೋರಿಸಿ ದುಡ್ಡು ಪಡೆದು ಬಳಿಕ ಚಿತ್ರ ಹಿಂಸೆ ನೀಡಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ.
ಆರೋಪಿಗಳ ಹೇಳಿಕೆ ಆಧಾರದ ಮೇಲೆ ಕೇರಳದಿಂದ ಇನ್ನೊಬ್ಬ ಯುವತಿಯನ್ನು ಕೂಡ ಕರೆ ತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದಿಂದ ಸಂತ್ರಸ್ತ ಯುವತಿಯನ್ನು ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.
ಸಂತ್ರಸ್ತ ಯುವತಿ ಬಾಣಸವಾಡಿ ಇನ್ಸ್‌ಪೆಕ್ಟರ್ ಸತೀಶ್, ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಹಾಗೂ ಓರ್ವ ಮಹಿಳಾ ಸಿಬ್ಬಂದಿ ಆಕೆಯನ್ನು ಕರೆ ತಂದಿದ್ದಾರೆ.
ಸಂತ್ರಸ್ತ ಯುವತಿ ನೀಡಬೇಕಿದ್ದ ಹಣವನ್ನು ನೀಡಿಲ್ಲಾ ಅಂದ್ರೆ ವಿಡಿಯೋ ವೈರಲ್ ಮಾಡುವುದಾಗಿ ಆರೋಪಿಗಳು ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡಿದ್ದರು. ಹೆದರಿಸುವ ಕಾರಣಕ್ಕಾಗಿಯೇ ಅತ್ಯಾಚಾರದ ದೃಶ್ಯಗಳನ್ನ ವಿಡಿಯೋ ರೆಕಾರ್ಡ್ ಮಾಡಿದ್ದರು. ಬಳಿಕ ಯುವತಿ ಜೊತೆಗಿದ್ದ ಇಬ್ಬರು ವಿಡಿಯೋವನ್ನು ತಮ್ಮ ಮೊಬೈಲ್‌ಗಳಿಗೆ ಕಳಿಸಿಕೊಂಡಿದ್ದರು. ಈ ವೇಳೆ ಕಾಮುಕರಿಂದ ವಿಡಿಯೋ ವೈರಲ್ ಆಗಿದೆ.
ಆರೋಪಿ ರಿದಯ್ ಬಾಬು ಟಿಕ್ ಟಾಕ್ ಮಾಡುತ್ತಿದ್ದು, ಬಾಂಗ್ಲಾದೇಶದ ತನ್ನ ಪರಿಚಿತರಿಗೆ ಅತ್ಯಾಚಾರದ ವಿಡಿಯೋವನ್ನು ಶೇರ್ ಮಾಡಿದ್ದನು. ನಂತರ ಬಾಂಗ್ಲಾದೇಶದ ಸ್ಥಳೀಯ ಸುದ್ದಿವಾಹಿನಿಯಲ್ಲಿ ವಿಡಿಯೋ ಬಿತ್ತರವಾಗಿತ್ತು. ವಿಡಿಯೋ ಬಿತ್ತರವಾದ ಬಳಿಕ ಬಾಂಗ್ಲಾದೇಶದ ಪೊಲೀಸರಿಂದ ಆರೋಪಿ ರಿದಯ್ ಸುಳಿವು ಪತ್ತೆಗಾಗಿ ಆತನ ಮನಗೆ ಹೋಗಿ ವಿಚಾರಿಸಿದಾಗ, ಆತ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು.
ಬಾಂಗ್ಲಾದೇಶ ಪೊಲೀಸರು ಬೆಂಗಳೂರು ಪೊಲೀಸರ ಸಂಪರ್ಕ ಮಾಡಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಡಿಯೋ ಹಾಗೂ ಮಾಹಿತಿ ರವಾನೆಯನ್ನ ಮಾಡಲಾಗಿತ್ತು. ಆಗ ಆರೋಪಿ ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ, ಬೆಂಗಳೂರಿನ ರಾಮಮೂರ್ತಿ ನಗರದ ಸುತ್ತ ಲೊಕೇಟ್ ಅಗಿತ್ತು. ತಕ್ಷಣ ಡಿಸಿಪಿ ಡಾ. ಶರಣಪ್ಪ ನೇತೃತ್ವದಲ್ಲಿ ರಾಮಮೂರ್ತಿ ನಗರ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದರು.
ಆರೋಪಿಗಳ ಬಳಿ ಆಧಾರ್ ಕಾರ್ಡ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಓರ್ವ ಆರೋಪಿ ಮೊಹಮ್ಮದ್ ಬಾಬು ಶೇಖ್ ಹೆಸರಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಈ ಆದಾರ್ ಕಾರ್ಡ್ ಸುಬ್ರಮಣ್ಯನಗರ ವಿಳಾಸದಲ್ಲಿತ್ತು ಎಂದು ತಿಳಿದು ಬಂದಿದೆ. ಉಳಿದ ಆರೋಪಿಗಳ ಬಳಿ ಏನಾದರೂ ಸರ್ಕಾರಿ ದಾಖಲೆ, ಐಡಿ ಕಾರ್ಡ್ ಇರುವ ಬಗ್ಗೆ ಹಾಗೂ ಮೊಹಮ್ಮದ್ ಬಾಬು ಶೇಖ್ ಹೇಗೆ ಆಧಾರ್ ಕಾರ್ಡ್ ಪಡೆದ ಅನ್ನೋ ಬಗ್ಗೆ ತನಿಖೆ, ಆತನ ಬಳಿಯಿರುವ ಆಧಾರ್ ಕಾರ್ಡ್ ನಕಲಿಯೋ, ಅಸಲಿಯೋ ಎಂಬ ಬಗ್ಗೆ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English