‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ವಿನ್ನರ್ ಚಂದನ್ ಶೆಟ್ಟಿ ಸದ್ಯದಲ್ಲೇ ಮದುವೆ ಆಗ್ತಾರಂತೆ. ಇದೇ ತಿಂಗಳು ಚಂದನ್ ಶೆಟ್ಟಿ ನಿಶ್ಚಿತಾರ್ಥ ನಡೆಯಲಿದೆಯಂತೆ. ಹೌದಾ…? ಎಂದು ಕಣ್ಣರಳಿಸುವ ಮುನ್ನ ಮೊದಲು ಹುಡುಗಿ ಯಾರು ಅಂತ ತಿಳಿದುಕೊಳ್ಳಿ… ಚಂದನ್ ಶೆಟ್ಟಿ ಮದುವೆ ಆಗುತ್ತಿರುವ ಹುಡುಗಿ ಹೆಸರು ವೈಷ್ಣವಿ ಗೌಡ ಅಂತೆ. ಯಾರೀ ವೈಷ್ಣವಿ ಗೌಡ ಅಂತೀರಾ.? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಣ್ರೀ.! ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ…
ಒಮ್ಮೆ ಫೇಸ್ ಬುಕ್ ಓಪನ್ ಮಾಡಿ ಯಾವುದೇ ಟ್ರೋಲ್ ಪೇಜ್ ತೆರೆದು ನೋಡಿದರೂ, ಚಂದನ್ ಶೆಟ್ಟಿ ಹಾಗೂ ವೈಷ್ಣವಿ ಗೌಡ ಮದುವೆ ಸುದ್ದಿಯೇ ನಿಮ್ಮ ಕಣ್ಣಿಗೆ ರಪ್ ಅಂತ ಬೀಳುತ್ತೆ. ಅಷ್ಟರಮಟ್ಟಿಗೆ ಇವರಿಬ್ಬರ ಮದುವೆ ಮ್ಯಾಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಆಗಿದೆ. ಅಷ್ಟಕ್ಕೂ, ನಟಿ ವೈಷ್ಣವಿ ಗೌಡ ಜೊತೆಗೆ ಚಂದನ್ ಶೆಟ್ಟಿ ಮದುವೆ ಆಗುತ್ತಿರುವುದು ನಿಜವೇ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ…
ವೈಷ್ಣವಿ ಗೌಡ ಹಾಗೂ ಚಂದನ್ ಶೆಟ್ಟಿ ನಿಶ್ಚಿತಾರ್ಥ ಸದ್ಯದಲ್ಲೇ ನೆರವೇರಲಿದೆ ಅಂತ ಫೋಟೋ ಸಮೇತ ಟ್ರೋಲ್ ಪೇಜ್ ಗಳು ಸುದ್ದಿ ಮಾಡಿವೆ. ನಿಶ್ಚಿತಾರ್ಥ ದಿನಾಂಕವೂ ನಿಗದಿ ಆಗಿದೆ ಚಂದನ್ ಶೆಟ್ಟಿ-ವೈಷ್ಣವಿ ಗೌಡ ನಿಶ್ಚಿತಾರ್ಥ ಫೆಬ್ರವರಿ 11 ರಂದು ನಡೆಯಲಿದೆ ಎಂದು ಸಾರುವ ಫೇಸ್ ಬುಕ್ ಮೀಮ್ ಗಳೇ ಹೆಚ್ಚಾಗಿವೆ. ವೈಷ್ಣವಿ ಗೌಡಗೆ ಪ್ರಶ್ನೆ ಕೇಳ್ತಿದ್ದಾರೆ ”ಚಂದನ್ ಶೆಟ್ಟಿ ಜೊತೆ ನೀವು ಮದುವೆ ಆಗುತ್ತಿರುವುದು ನಿಜವೇ.?” ಎಂದು ವೈಷ್ಣವಿ ಗೌಡ ಅವರಿಗೆ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಪ್ರಶ್ನೆ ಮಾಡ್ತಿದ್ದಾರೆ.
ಚಂದನ್ ಶೆಟ್ಟಿ ಹಾಗೂ ವೈಷ್ಣವಿ ಗೌಡ ಮದುವೆ ಆಗ್ತಿಲ್ಲ. ಫೆಬ್ರವರಿ 11 ರಂದು ವೈಷ್ಣವಿ ಗೌಡ ನಿಶ್ಚಿತಾರ್ಥ ಕೂಡ ನಡೆಯುತ್ತಿಲ್ಲ. ಇದು ಅಪ್ಪಟ ಸುಳ್ಳು ಸುದ್ದಿ ಎನ್ನುವುದು ಚಂದನ್ ಶೆಟ್ಟಿ ಆಪ್ತ ವಲಯ ಖಚಿತ ಪಡಿಸಿವೆ.
ಗಾಸಿಪ್ ಸದ್ದು ಮಾಡಿದ್ದು ಹೇಗೆ.? ”ಚಂದನ್ ಶೆಟ್ಟಿ ಜೊತೆ ಮದುವೆ ಆಗುತ್ತಿದ್ದೇನೆ” ಎಂದು ವೈಷ್ಣವಿ ಗೌಡ ತಮ್ಮ ಫೇಸ್ ಬುಕ್ ಪ್ರೋಫೈಲ್ ನಲ್ಲಿ ಬರೆದುಕೊಂಡಿರುವ ಹಾಗೆ ಯಾರೋ ಫೋಟೋಶಾಪ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಅದೊಂದು ಫೋಟೋ ಇಷ್ಟೆಲ್ಲ ಗಾಸಿಪ್ ಗೆ ಕಾರಣ ಆಗಿದೆ. ವೈಷ್ಣವಿ ಗೌಡ ಪ್ರೋಫೈಲ್ ನಲ್ಲಿ ‘ಆ’ ಸ್ಟೇಟಸ್ ಇಲ್ಲವೇ ಇಲ್ಲ.! ”ಚಂದನ್ ಶೆಟ್ಟಿ ಜೊತೆ ಮದುವೆ ಆಗುತ್ತಿದ್ದೇನೆ” ಎಂಬ ಸ್ಟೇಟಸ್ ವೈಷ್ಣವಿ ಗೌಡ ಫೇಸ್ ಬುಕ್ ಪ್ರೋಫೈಲ್ ತಡಕಾಡಿದರೂ ಸಿಗಲಿಲ್ಲ.
ಅಲ್ಲಿಗೆ, ಅದು ಫೇಕ್ ಅಂತಲೇ ಲೆಕ್ಕ. ಇಂದು ಮಧ್ಯಾಹ್ನ ಕ್ಲಾರಿಟಿ ಕೊಡ್ತಾರಂತೆ ಚಂದನ್ ಶೆಟ್ಟಿ ಇಂದು ಮಧ್ಯಾಹ್ನ ಇದೇ ವಿಚಾರದ ಕುರಿತಾಗಿ ಚಂದನ್ ಶೆಟ್ಟಿ ಕ್ಲಾರಿಟಿ ಕೊಡ್ತಾರಂತೆ. ಹೋಮ್ ಮೇಕರ್ ಬೇಕಾಗಿದೆ.! ”ಚಂದನ್ ಶೆಟ್ಟಿಗೆ ತಮ್ಮ ಊರು ಅಂದ್ರೆ ಸಕಲೇಶಪುರದ ಹುಡುಗಿ ಸಿಕ್ಕರೆ ಸಾಕಂತೆ. ಅವರು ಹೋಮ್ ಮೇಕರ್ ಆಗಿದ್ದು, ಕುಟುಂಬವನ್ನ ಚೆನ್ನಾಗಿ ನೋಡಿಕೊಂಡು ಹೋದರೆ ಸಾಕು” ಎಂದು ‘ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು.
Click this button or press Ctrl+G to toggle between Kannada and English