ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಭಾಗಿಯಾಗಿರುವ ಸಮೀರ್ ಆಚಾರ್ಯ್ ಅವರ ಮೇಲೆ ಕೈ ಮಾಡಿರುವ ನಟಿ ಸಂಯುಕ್ತ ವಿರುದ್ಧ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟ ಜಗ್ಗೇಶ್ ಸಹ ಅವರ ವಿರುದ್ಧ ಟ್ವಿಟರ್‌ನಲ್ಲಿ ಹರಿಹಾಯ್ದಿದ್ದಾರೆ.
ಸಂಯುಕ್ತ ಅವರ ಈ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್, ಸಮೀರ್ ಆಚಾರ್ಯ ಮೇಲೆ ಕೈ ಮಾಡಿರುವ ಸಂಯುಕ್ತ ಕ್ಷಮೆಗೆ ಅನರ್ಹ. ಸ್ತ್ರೀ ಕುಲಕ್ಕೆ ಈಕೆ ಕಳಂಕ. ಬೆಳೆದ ವಾತಾವರಣ ಸರಿಯಿಲ್ಲ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಘಟನೆ ವಿವರ
ಬಿಗ್ ಮನೆಯಲ್ಲಿ ಪ್ರತಿದಿನದ ಟಾಸ್ಕ್‌ನಂತೆ ನಿನ್ನೆಯೂ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಲಾಗಿತ್ತು. ಆ ವೇಳೆ ಸ್ಪರ್ಧಿ ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಕೂತಿದ್ದರು. ತಮ್ಮನ್ನು ಬಿಡಿಸಲು ಚಂದನ್ ಶೆಟ್ಟಿ ಕೇಳಿಕೊಂಡಾಗ ಜೆಕೆ ಹಾಗೂ ಸಮೀರ್ ಆಚಾರ್ಯ ಓಡಿ ಬಂದರು. ಇದೇ ವೇಳೆ ಚಂದನ್ ಬಳಿ ಇದ್ದ ಕತ್ತರಿ ತೆಗೆದುಕೊಳ್ಳಲು ಶ್ರುತಿಗೆ ಸಂಯುಕ್ತ ಹೇಳಿದರು. ಮೂವರು ಸಂಯುಕ್ತ ಸುತ್ತ ಸುತ್ತುವರಿದಾಗ ಯಾರು ಯಾರನ್ನ ಮುಟ್ಟಿದರೋ ಗೊತ್ತಿಲ್ಲ. ಆ ವೇಳೆ ಸಮೀರ್ ಆಚಾರ್ಯ ನನ್ನನ್ನ ಮುಟ್ಟಿದರು ಎಂದು ಏಕಾಏಕಿಯಾಗಿ ಸಮೀರ್ ಮೇಲೆ ಸಂಯುಕ್ತ ಕೈ ಮಾಡಿದ್ದಾರೆ.
ಸಮೀರ್ ಆಚಾರ್ಯ ಮೇಲೆ ಕೈ ಮಾಡಿ ಬಿಗ್‌ಬಾಸ್‌ನಿಂದ ಹೊರ ನಡೆದ ಸಂಯುಕ್ತಾ!
ಈಗಾಗಲೇ ದೈಹಿಕ ಹಲ್ಲೆ ಮಾಡಿರುವ ಸಂಯುಕ್ತ ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
Click this button or press Ctrl+G to toggle between Kannada and English