ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ..!

12:35 PM, Saturday, May 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

abhishekಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಚಿತ್ರರಂಗ ಎಂಟ್ರಿಗೆ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಭಿಷೇಕ್‌ ನಟನೆಯ ಮೊದಲ ಚಿತ್ರ ‘ಅಮರ್’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಸಖತ್ ಸ್ಟೈಲಿಷ್ ಆಗಿ ರಗಡ್ ಲುಕ್ ಕೊಡ್ತಿರೋ ಅಭಿಷೇಕ್ ಫಸ್ಟ್ ಪೋಸ್ಟರ್‌ನಲ್ಲೇ ಮೋಡಿ ಮಾಡ್ತಿದ್ದಾರೆ. ಈ ಯಂಗ್ ಸ್ಟಾರ್ ಖಂಡಿತಾ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೊಂದು ಛಾಪು ಮೂಡಿಸ್ತಾರೆ ಎಂದು ಮಾತನಾಡುತ್ತಿದೆ ಗಾಂಧಿನಗರ.

abhishek-2ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿಬರ್ತಿರೋ ಅಮರ್‌ಗೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸತ್ಯಾ ಹೆಗಡೆ ಕ್ಯಾಮರಾ ಕೈಚಳಕ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.

abhishek-3ಅಂಬರೀಶ್ ಮೂಲ ಹೆಸರು ಅಮರನಾಥ್.‌ ಅದೇ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ‘ಅಮರ್’ ಎಂದು ಹೆಸರಿಡಲಾಗಿದೆ. ರೆಬೆಲ್ ಸ್ಟಾರ್ ಅಭಿಮಾನಿಗಳೆಲ್ಲಾ ಅಭಿಷೇಕ್ನ್ನು ದೊಡ್ಡಪರದೆಯ ಮೇಲೆ ನೋಡಲು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯ್ತಿದ್ದಾರೆ. ಆರಡಿ ಎತ್ತರದ ಈ ಹ್ಯಾಂಡ್ಸಮ್ ಹುಡುಗ ರೆಬೆಲ್ ಸ್ಟಾರ್ ಸ್ಟೈಲನ್ನೇ ಮುಂದುವರೆಸಿಕೊಳ್ತಾನಾ ಅಥವಾ ತನ್ನದೇ ವಿಭಿನ್ನ ಹೆಜ್ಜೆಗುರುತು ಮೂಡಿಸ್ತಾನಾ ಎನ್ನುವ ಕುತೂಹಲ ಹೆಚ್ಚಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English