ವಾರಣಾಸಿ: ಎರಡು ದಿನಗಳ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ನಿನ್ನೆ 69ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಆಚರಿಸಿಕೊಂಡ ಮೋದಿ, ಮಕ್ಕಳೊಂದಿಗೆ ಸಂವಾದ ನಡೆಸಿ ನಂತರದಲ್ಲಿ ಕಾಶಿ ವಿಶ್ವನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಪ್ರವಾಸದ ಕೊನೆಯ ದಿನವಾದ ಇಂದು ವಿದ್ಯುತ್ ಅಭಿವೃದ್ಧಿ ಯೋಜನೆ ಸೇರಿದಂತೆ ಸುಮಾರು 550 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ನಾನು ಪ್ರಧಾನಿಯಾಗುವಾಗ ಇಲ್ಲಿಗೆ ಬಂದಾಗ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು ಬಾಗಿದ್ದವು. ಆಗ ನಾನು ಈ ಸಿಟಿ ಇಂತಹ ಸಮಸ್ಯೆಗಳಿಂದ ಹೇಗೆ ಮುಕ್ತಿ ಹೊಂದುತ್ತೆ ಎಂದು ಯೋಚಿಸುತ್ತಿದ್ದೆ, ಈಗ ಆ ಸಮಸ್ಯೆ ಕಡಿಮೆಯಾಗಿದೆ. ರಾಜ್ಯದ್ಯಂತ ಇಂತಹ ಸಮಸ್ಯೆಗಳಿಲ್ಲದಂತೆ ಮಾಡುವ ಕೆಲಸ ಜೋರಾಗಿ ಸಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
Click this button or press Ctrl+G to toggle between Kannada and English